Home Breaking Entertainment News Kannada Weekend With Ramesh: “ಅವಳು ಅಕ್ಕ ಅಲ್ಲ, ನನ್ನ ಮಗಳು” ; ‘ರಾಣಿ’ಯನ್ನು ಜಗತ್ತಿಗೆ ತೋರಿಸೋಕೆ...

Weekend With Ramesh: “ಅವಳು ಅಕ್ಕ ಅಲ್ಲ, ನನ್ನ ಮಗಳು” ; ‘ರಾಣಿ’ಯನ್ನು ಜಗತ್ತಿಗೆ ತೋರಿಸೋಕೆ ನನಗೆ ಇಷ್ಟವಿರಲಿಲ್ಲ – ನಟ ಡಾಲಿಯ ಭಾವುಕ ನುಡಿ!!

Weekend With Ramesh

Hindu neighbor gifts plot of land

Hindu neighbour gifts land to Muslim journalist

Weekend With Ramesh-Dhananjay: ರಮೇಶ್ ಅರವಿಂದ್ (Ramesh Aravind) ನಿರೂಪಣೆಯ ಜನಪ್ರಿಯ ಶೋ ‘ವೀಕೆಂಡ್ ವಿಥ್ ರಮೇಶ್ ಸೀಸನ್ 5’ ಗೆ (Weekend with Ramesh season 5) ಈ ವಾರ ಸ್ಯಾಂಡಲ್‍ವುಡ್‍ನ ನಟ ರಾಕ್ಷಸ ಡಾಲಿ ಧನಂಜಯ್ (Actor Dhananjay) ಅತಿಥಿಯಾಗಿ ಬಂದಿದ್ದು, ತಮ್ಮ ಜೀವನದ ಸಿಹಿ- ಕಹಿ ಘಟನೆಗಳನ್ನು ರಮೇಶ್ ಹಾಗೂ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಧನಂಜಯ್ ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದು, ಜನಮನ ಗೆದ್ದಿದ್ದಾರೆ. ಸದ್ಯ Weekend With Ramesh ಶೋ ನಲ್ಲಿ ಡಾಲಿ (Weekend With Ramesh-Dhananjay) ತಮ್ಮ ಜೀವನದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಾವಿತ್ರಮ್ಮ ಹಾಗೂ ಅಡವಿ ಸ್ವಾಮಿ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಧನಂಜಯ್ ಕೊನೆಯವರು. ಧನಂಜಯ್‌ಗೆ ಇಬ್ಬರು ಅಕ್ಕಂದಿರು ಹಾಗೂ ಓರ್ವ ಅಣ್ಣ ಇದ್ದಾರೆ. ಇಬ್ಬರು ಅಕ್ಕಂದಿರಲ್ಲಿ ಓರ್ವ ಅಕ್ಕನಿಗೆ (ರಾಣಿ) ಚಿಕ್ಕವಯಸ್ಸಿನಲ್ಲಿ ಪೋಲಿಯೋ ಅಟ್ಯಾಕ್ ಆಗಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ರಾಣಿಯನ್ನು ಜಗತ್ತಿಗೆ ತೋರಿಸಲು ಧನಂಜಯ್ ಗೆ ಇಷ್ಟವಿರಲಿಲ್ಲವಂತೆ. ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ರಾಣಿಯನ್ನು ಕಂಡು ಡಾಲಿ ಭಾವುಕರಾಗಿದ್ದು, ಈ ವೇಳೆ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

‘’ರಾಣಿಗೆ ಚಿಕ್ಕವಯಸ್ಸಿನಲ್ಲಿ ಪೋಲಿಯೋ ಅಟ್ಯಾಕ್ ಆಯ್ತು. ಕಣ್ಣಿನ ನರ್ವ್ ಹೊರಟು ಹೋಯ್ತು. ಅವಳು ನಮ್ಮನೆ ಮಗುವಿದ್ದಾಗೆ, ತಾತ ಅಂದ್ರೆ ಅವಳಿಗೆ ತುಂಬಾ ಪ್ರೀತಿ. ಈಗ ಅಜ್ಜಿ ಜೊತೆಗೆ ಹೆಚ್ಚು ಅಟ್ಯಾಚ್ಡ್ ಆಗಿದ್ದಾಳೆ. ಅವರೇನು ಮಾತಾಡ್ತಾರೋ, ಅದೆಲ್ಲವನ್ನು ಅವಳೂ ಮಾತಾಡ್ತಾಳೆ. ಅವಳು ನಮಗೆ ದೇವರು ಕೊಟ್ಟಿರುವ ಗಿಫ್ಟ್. ‘ನೀವೆಲ್ಲಾ ಚೆನ್ನಾಗಿದ್ದೀರಾ ಅಂದ್ರೆ ಅದು ಅವಳ ಯೋಗ’ ಅಂತ ನಮ್ಮಜ್ಜಿ ಹೇಳ್ತಾರೆ. ಅದು ನಿಜ. ಅವಳು ನನಗೆ ಅಕ್ಕ ಅನ್ನೋದಕ್ಕಿಂತ ನನ್ನ ಮಗಳು. ಅವಳನ್ನು ಜಗತ್ತಿಗೆ ತೋರಿಸೋಕೆ ನನಗೆ ಇಷ್ಟ ಇರಲಿಲ್ಲ” ಎಂದು ಧನಂಜಯ್ ಹೇಳಿದರು.

‘’ಚಿಕ್ಕವಯಸ್ಸಿನಲ್ಲಿ ನಾನು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ, ‘ರಾಣಿ ಅಕ್ಕನಿಗೆ ಕಣ್ಣು ಕೊಡು’ ಅಂತ ಬೇಡಿಕೊಳ್ತಿದ್ದೆ. ಅವಳನ್ನ ನೋಡಿಕೊಳ್ಳೋಕೆ ತುಂಬಾ ಜನ ಇದ್ದಾರೆ. ಇಡೀ ಊರು ಅವಳನ್ನ ಪ್ರೀತಿ ಮಾಡುತ್ತೆ. ಇಡೀ ಊರಿಗೆ ರಾಣಿ ಅವಳು’’ ಎಂದು ನಟ ತಮ್ಮ ಸಹೋದರಿಯ ಬಗ್ಗೆ ಭಾವುಕ ನುಡಿ ನುಡಿದರು.

ಶೋ ಗೆ ಬಂದ ರಾಣಿ, ಧನಂಜಯ್ ಬಗ್ಗೆ ಮಾತನಾಡಿದ್ದು, ‘’ಹೊಯ್ಸಳ ಸಿನಿಮಾ ನೋಡಿದೆ. ಧನು ಊರಿಗೆ ಬರ್ತಾನೆ. ಊಟ ಮಾಡ್ತಾನೆ. ಮಾತನಾಡಿಸಿಕೊಂಡು ಹೋಗ್ತಾನೆ. ಒಂದು ನಿಮಿಷ ಇರೋದಿಲ್ಲ’’ ಎಂದು ಹೇಳಿದರು.

ಇದನ್ನೂ ಓದಿ : SHOCKING NEWS: 3 ವರ್ಷದ ಬಾಲಕಿಯ ರೇಪ್ ಮಾಡಿದ 1 ನೇ ತರಗತಿ ಬಾಲಕ!