Home Breaking Entertainment News Kannada Dasara Film: ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ದಸರಾ’ ಒಟಿಟಿಯಲ್ಲಿ ಬಿಡುಗಡೆ ; ಯಾವಾಗ?!

Dasara Film: ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ದಸರಾ’ ಒಟಿಟಿಯಲ್ಲಿ ಬಿಡುಗಡೆ ; ಯಾವಾಗ?!

Dasara Film

Hindu neighbor gifts plot of land

Hindu neighbour gifts land to Muslim journalist

Dasara Film: ನ್ಯಾಚುರಲ್ ಸ್ಟಾರ್ ನಾನಿ (natural star Nani) ನಟನೆಯ ‘ದಸರಾ’ ಸಿನಿಮಾ (Dasara Film) ಮಾ.30 ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ (Keerthy Suresh) ನಾನಿಗೆ ಜೋಡಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಹಾಗೇ ಕನ್ನಡದ ದಿಯಾ (Diya) ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಸೂರಿ ಎಂಬ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ.

ಶ್ರೀರಾಮ ನವಮಿ ಪ್ರಯುಕ್ತ ತೆರೆಗೆ ಅಬ್ಬರಿಸಿದ ದಸರಾ ವಿಶ್ವಾದ್ಯಂತ ಮೆಚ್ಚುಗೆ ಗಳಿಸಿದೆ. ಈ ಸಿನಿಮಾ ತೆಲುಗು (Telugu), ತಮಿಳು, ಕನ್ನಡ (kannada), ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿದ್ದು, 100 ಕೋಟಿ ರೂ. ಗಳಿಸಿದೆ (Dasara movie collection).

ಸದ್ಯ ನಾನಿ-ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಿನಿಮಾ ಒಟಿಟಿ ಬಿಡುಗಡೆಗೆ (Dasara Film OTT date) ದಿನಾಂಕ ಫಿಕ್ಸ್ ಆಗಿದೆ. ಕನ್ನಡದಲ್ಲೂ ಲಭ್ಯವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. “ದಸರಾ ಸಿನಿಮಾ ಏಪ್ರಿಲ್ 27 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ” ಎಂದು ನೆಟ್‌ಫ್ಲಿಕ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಶ್ರೀಕಾಂತ್ ಒಡೆಲಾ ನಿರ್ದೇಶನದ ’ದಸರಾ’ ಚಿತ್ರವನ್ನು ಶ್ರೀಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು, ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಈ ಚಿತ್ರಕ್ಕಿದೆ. ಗೀತಾ ಆರ್ಟ್ಸ್‌ ಹಾಗೂ ಸ್ಟಾರ್‌ ಸ್ಟುಡಿಯೋಸ್‌ ಈ ಚಿತ್ರವನ್ನು ಹಂಚಿಕೆ ಮಾಡಿದೆ.

‘ದಸರಾ’ ಭರ್ಜರಿ ಯಶಸ್ಸಿನ ಬಳಿಕ ಇದೀಗ ನ್ಯಾಚುರಲ್ ಸ್ಟಾರ್ ನಾನಿ (actor nani) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂತೆಯೇ ನಟಿ ಕೀರ್ತಿ ಸುರೇಶ್ ಗೂ ಕೂಡ ಹಲವು ಸಿನಿಮಾಗಳು ಅರಸಿ ಬರುತ್ತಿದ್ದು, ಕನ್ನಡದ ನಟ ದೀಕ್ಷಿತ್ ಶೆಟ್ಟಿ ‘ನಾಗಿಣಿ’ (Naagini) ಧಾರಾವಾಹಿ ಮೂಲಕ ಜನರಿಗೆ ಪರಿಚಿತನಾಗಿ ಖ್ಯಾತಿ ಪಡೆದಿದ್ದು, ನಂತರ ‘ದಿಯಾ’ ಸಿನಿಮಾ ಮೂಲಕ ಸಿನಿಪ್ರೇಕ್ಷಕರಿಗೆ ಇನ್ನಷ್ಟು ಗಮನಸೆಳೆದರು. ಸದ್ಯ‌ ‘ದಸರಾ’ ಯಶಸ್ಸಿನಿಂದ ನಟನ ವೃತ್ತಿ ಜೀವನದಲ್ಲಿ ಉತ್ತಮ‌ ಬದಲಾವಣೆ ಆಗಲಿದೆ ಎಂದೇ ಹೇಳಬಹುದು.

ಇದನ್ನೂ ಓದಿ: Viral video: ಕುದುರೆ ಏರಿ ಬಂದ, ದರೋಡೆ ಮಾಡಿ ಹೋದ! ವೀಡಿಯೋ ವೈರಲ್!!!