Home Breaking Entertainment News Kannada first transgender cricketer Danielle McGahey: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊದಲ ಮಂಗಳಮುಖಿ!! ಕ್ರಿಕೆಟ್‌...

first transgender cricketer Danielle McGahey: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊದಲ ಮಂಗಳಮುಖಿ!! ಕ್ರಿಕೆಟ್‌ ಇತಿಹಾಸದಲ್ಲೇ ಅಚ್ಚರಿಯ ವಿಷಯ!!!

Hindu neighbor gifts plot of land

Hindu neighbour gifts land to Muslim journalist

Danielle McGahey: ಕ್ರಿಕೆಟ್‌ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರೂ ಇಷ್ಟಪಡುವ ಕ್ರೀಡೆ ಎಂದರೆ ಕ್ರಿಕೆಟ್‌. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟ್ರಾನ್ಸ್‌ಜೆಂಡರ್‌ ಒಬ್ಬರು ಬ್ಯಾಟ್‌ ಹಿಡಿದು ಮಿಂಚಲಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿ ಇದು ಮೊದಲನೇ ಬಾರಿಗೆ ಈ ರೀತಿಯ ವೈಶಿಷ್ಟ್ಯ ನಡೆಯುತ್ತಿರುವುದು. ಈ ಟ್ರಾನ್ಸ್‌ಜೆಂಡರ್‌ ಮಹಿಳೆ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ.

2020 ರಲ್ಲಿ ಡೇನಿಯಲ್‌ ಅವರು ಗಂಡಿನಿಂದ ಹೆಣ್ಣಾಗಿ ಪರಿವರ್ತನೆಗೊಂಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹಿಳೆಯಾಗಿ ನನಗೆ ಆಡಲು ದೊರಕಿರುವುದು ನನಗೆ ಸಿಕ್ಕ ಗೌರವವಾಗಿದೆ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ ಆಟಗಾರ್ತಿ.

ಕೆನಡಾ ಮಹಿಳಾ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ. ಡೇನಿಯಲ್‌ ಮೆಕ್‌ ಗಾಹೆ ಎಂಬಾಕೆಯೇ ಅಂತರಾಷ್ಟ್ರೀಯ ಕ್ರಿಕೆಟ್‌ ಆಡಲಿರುವ ಟ್ರಾನ್ಸ್‌ಜೆಂಡರ್‌ ಮಹಿಳೆ. ಇವರಿಗೆ ಕೆನಡಾ ತಂಡದಲ್ಲಿ ಆಡಲು ಅವಕಾಶ ನೀಡಿದೆ.
ಈ ಟ್ರಾನ್ಸ್‌ಜೆಂಡರ್‌ ಆಟಗಾರ್ತಿ ಡೇನಿಯಲ್‌ ಮೂಲತಃ ಆಸ್ಟ್ರೇಲಿಯಾದವರು. ಆದರೆ ಕೆನಡಾದಲ್ಲಿ ಇವರು ಹಲವು ವರ್ಷಗಳಿಂದ ವಾಸಿಸುತ್ತಿದ್ದು, ಈಗ ಕೆನಡಾ ಪರ ಆಟ ಆಡಲಿದ್ದಾರೆ.