Home Breaking Entertainment News Kannada Chetan Ahimsa : ಸೆನ್ಸಾರ್ ಅಂದಿದೆ ಓಕೆ – ಮತ್ತೆ ನಿಷೇಧ ಯಾಕೆ ?: ‘...

Chetan Ahimsa : ಸೆನ್ಸಾರ್ ಅಂದಿದೆ ಓಕೆ – ಮತ್ತೆ ನಿಷೇಧ ಯಾಕೆ ?: ‘ ದಿ ಕೇರಳ ಸ್ಟೋರಿ’ ವಿವಾದದ ಬಗ್ಗೆ ಚೇತನ್ ಅಹಿಂಸಾ ಟೀಕೆ !

Chetan Ahimsa
Image source : OTT Play

Hindu neighbor gifts plot of land

Hindu neighbour gifts land to Muslim journalist

Chetan Ahimsa : ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಹಲವಾರು ವಿವಾದಗಳನ್ನು ಎಬ್ಬಿಸಿದೆ. ಸದ್ಯ ನಟ ಚೇತನ್ (Chetan Ahimsa) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
ತನಗೆ ಸಂಬಂಧ ಇಲ್ಲದ ವಿಚಾರಗಳಲ್ಲಿಯೂ ಮೂಗು ತೂರಿಸುವುದು ಇತ್ತೀಚಿಗೆ ಹೆಚ್ಚಾಗಿದೆ. ಇದೀಗ ಮಲಯಾಳಂನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ದಿ ಕೇರಳ ಸ್ಟೋರಿ’ ಚಿತ್ರವನ್ನು ಸನ್‌ಲೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಅಮೃತ್‌ಲಾಲ್ ಶಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ರೋ ಸೇನ್ ನಿರ್ದೇಶಿಸಿದ್ದು, ಸದ್ಯ ‘ದಿ ಕೇರಳ ಸ್ಟೋರಿ’ ಚಿತ್ರತಂಡ ಬುಧವಾರವಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಕೇವಲ ಒಂದು ದಿನದಲ್ಲಿ ಕೋಟ್ಯಂತರ ಮಂದಿ ಈ ಟ್ರೇಲರ್ ವೀಕ್ಷಿಸಿದ್ದಾರೆ. ಜೊತಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ ಮೇ 5 ರಂದು ತೆರೆ ಕಾಣುವ ತಯಾರಿಯಲ್ಲಿದೆ.

ಆದರೆ ‘ದಿ ಕೇರಳ ಸ್ಟೋರಿ’ ಟ್ರೇಲರ್‌ನಲ್ಲಿರುವ ಅಂಶಗಳು ಕೆಲವರನ್ನು ಕೆರಳಿಸಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಲೇಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದು ಬಹುತೇಕ ಕೇರಳ ಹಿನ್ನೆಲೆಯಲ್ಲಿ ತೆಗೆದ ಸಿನಿಮಾವಾಗಿದ್ದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ಶಾಲಿನಿ ಉನ್ನಿಕೃಷ್ಣನ್ ಎಂಬ ಹಿಂದೂ ಯವತಿಯೊಂದಿಗೆ ಅದೇ ಹಾಸ್ಟೆಲ್‌ನ ಮುಸ್ಲಿಂ ಯುವತಿ ಆಡುವ ಮಾತಿನ ಡೈಲಾಗ್‌ಗಳು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಮುಖ್ಯವಾಗಿ ಈ ಸಿನಿಮಾದ ಟ್ರೇಲರ್ ನೋಡಿರುವ ಚೇತನ್ ಅಹಿಂಸಾ, ಅದಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಿತ್ರವನ್ನು ನಿಷೇಧಿಸಬೇಕು ಎಂಬ ಮಾತನ್ನು ನಾನು ಒಪ್ಪುವುದಿಲ್ಲ
ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

“ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ ಮೇ 5 ರಂದು ತೆರೆಗೆ ಬರಲಿದೆ ನಾನು ಈ ಹಿಂದೆ ಸಮುದಾಯದ/ ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ” ಎಂದಿದ್ದಾರೆ.

‘ದಿ ಕೇರಳ ಸ್ಟೋರಿ’ ಯಲ್ಲಿ ಶಾಲಿನಿ ಎಂಬ ಯುವತಿಯನ್ನು ಹೆತ್ತವರು ಹಾಸ್ಟೆಲ್ ಸೇರಿಸುತ್ತಾರೆ. ಅಲ್ಲಿ ಆ ಯುವತಿಗೆ ಮುಸ್ಲಿಂ ಯುವತಿಯ ಪರಿಚಯವಾಗುತ್ತದೆ. ನಿಮ್ಮ ಮೆಚ್ಚಿನ ದೇವರು ಯಾರು ಎಂದು ಮುಸ್ಲಿಂ ಯವತಿ ಕೇಳಿದಾಗ ಶಿವಭಕ್ತಿಯಾದ ಶಾಲಿನಿ, ಶಿವನ ಹೆಸರು ಹೇಳುತ್ತಾಳೆ. “ಸಾವನ್ನಪ್ಪಿದ ಪತ್ನಿಗಾಗಿ ಸಾಮಾನ್ಯ ಮನುಷ್ಯನಂತೆ ಅಳುವ ಶಿವ ಹೇಗೆ ದೇವರಾಗುತ್ತಾನೆ?” ಎಂದಿದ್ದಾಳೆ.

ಅದೇ ಮುಸ್ಲಿಂ ಯುವತಿ, “ಹಿಜಾಬ್ ಧರಿಸಿದ ಯಾವುದೇ ಮಹಿಳೆಯನ್ನು ಯಾರೂ ಅತ್ಯಾಚಾರ ಮಾಡಲಾಗುವುದಿಲ್ಲ ಯಾರೂ ರೇಗಿಸುವುದೂ ಇಲ್ಲ. ಏಕೆಂದರೆ ಅಲ್ಲಾಹ್ ಅವರನ್ನು ಯಾವಾಗಲೂ ರಕ್ಷಿಸುತ್ತಾರೆ” ಎಂಬ ಮಾತುಗಳನ್ನು ಆಡಿ, ಶಾಲಿನಿ ಮುಸ್ಲಿಂ ಧರ್ಮಕ್ಕೆ ಸೇರುವಂತೆ ಪ್ರೇರೇಪಿಸುತ್ತಾಳೆ. ಮುಸ್ಲಿಂ ಯುವತಿಯ ಪಾತ್ರದ ಈ ಡೈಲಾಗ್‌ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಸಿನಿಮಾದಿಂದ ಕೇರಳ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಇಂತಹ ಚಿತ್ರಗಳನ್ನು ಬ್ಯಾನ್ ಮಾಡಬೇಕೆಂದು ಕೆಲವು ರಾಜಕೀಯ ಮುಖಂಡರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಕೂಡ ಬರೆದಿದ್ದಾರೆ.

ಇದೆಲ್ಲದರ ನಡುವೆ ಕೇರಳವನ್ನು ಕರಾಳವಾಗಿ ತೋರಿಸಲಾಗುತ್ತಿದೆ ಎಂದು ಈ ಚಿತ್ರದ ವಿರುದ್ಧ ಆಡಳಿತಾರೂಢ ಸಿಪಿಐ(ಎಂ) ಹಾಗೂ ವಿಪಕ್ಷಗಳು, ಕೇರಳ ಕಾಂಗ್ರೆಸ್, ಡಿವೈಎಫ್​ಐ, ಸಿಪಿಐಎಂ ಯುವ ಸಂಘ ಸೇರಿದಂತೆ ಕೆಲ ಪಕ್ಷಗಳು ಸಿನಿಮಾ ಬಿಡುಗಡೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಅದಲ್ಲದೆ ಈ ಸಿನಿಮಾದ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಬಿಜೆಪಿ ಪ್ರಚಾರ ಸ್ಥಗಿತ: ಇವತ್ತಿನಿಂದ ಕಾಂಗ್ರೆಸ್‌ ಪರ ಕ್ಯಾಂಪೇನ್ ?! ಏನ್ ನೋವಾಯ್ತು ಬಿಜೆಪಿಯಲ್ಲಿ ?!