Home Breaking Entertainment News Kannada ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿದ ನಟಿ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದೇ...

ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿದ ನಟಿ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಯಿತೇ??

Hindu neighbor gifts plot of land

Hindu neighbour gifts land to Muslim journalist

ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು ಫುಲ್ ಟೈಟ್ ಆಗಿ ಅಪಘಾತ ಮಾಡುತ್ತಿರುವ ಘಟನೆಗಳು ಇಂದು ನಿನ್ನೆಯದ್ದಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಇವರು ಬಚಾವಾಗುತ್ತಿರುವುದು ಮಾತ್ರ ವಿಷಾದನೀಯ. ಪಾರ್ಟಿ, ಕ್ಲಬ್, ಪಬ್ ಎನ್ನುತ್ತಾ ನಶೆಯಲ್ಲಿ ವಾಹನ ಚಲಾಯಿಸಿ ಹಲವರ ಪ್ರಾಣಕ್ಕೆ ಕಂಟಕ ತಂದಿರುವ ಸಾಕಷ್ಟು ಘಟನೆಗಳು ಅದೆಷ್ಟೋ ನಡೆದುಹೋಗಿವೆ.

ಈಗ ಅದೇ ಸಾಲಿನಲ್ಲಿ ಇದೀಗ ನಿಂತಿದ್ದಾರೆ ತೆಲುಗಿನ ಕಿರುತೆರೆ ಹಾಗೂ ಸಿನಿಮಾ ನಟಿ ಲಹರಿ ರಾಮ್. ಅಡ್ಡಾದಿಡ್ಡಿಯಾಗಿ ಅತಿವೇಗದಿಂದ ಕಾರು ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿರುವ ಈ ನಟಿ ವಿರುದ್ಧ ಈಗ ತನಿಖೆ ಶುರುವಾಗಿದೆ.

ಬುಧವಾರ ರಾತ್ರಿ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಈಕೆ, ಎರ್ರಾಬಿರ್ರಿ ಕಾರು ಚಲಾಯಿಸಿಕೊಂಡು ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಬೈಕ್ ಸವಾರನೊಬ್ಬನಿಗೆ ಗುದ್ದಿದ ಪರಿಣಾಮ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಈಕೆ ಕಾರು ಚಲಾಯಿಸುತ್ತಿದ್ದ ಪರಿಯನ್ನು ನೋಡಿದರೆ, ಕುಡಿದ ಅಮಲಿನಲ್ಲಿ ಇದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವ ಕಾರಣ, ಪೊಲೀಸರು ಅದೇ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.