Home Breaking Entertainment News Kannada Shilpa Shetty Birthday: 48ರ ಹರೆಯದಲ್ಲೂ ಚಿರಯೌವ್ವನೆ ಶಿಲ್ಪಾ ಶೆಟ್ಟಿ ! ಕೋಟಿ ಕೋಟಿಯ ಒಡತಿ...

Shilpa Shetty Birthday: 48ರ ಹರೆಯದಲ್ಲೂ ಚಿರಯೌವ್ವನೆ ಶಿಲ್ಪಾ ಶೆಟ್ಟಿ ! ಕೋಟಿ ಕೋಟಿಯ ಒಡತಿ ಈ ಸುಂದರಿ ಈ ಒಂದು ಕೆಲಸ ಮಾಡಲು ಈಗಲೂ ಹೆದರುತ್ತಾರೆ, ಏನದು?

Image source: Koimoi

Hindu neighbor gifts plot of land

Hindu neighbour gifts land to Muslim journalist

Shilpa Shetty Birthday Special : ಕರಾವಳಿಯ ಪ್ರತಿಭೆ, ಇಂದು ಬಾಲಿವುಡ್‌ನಲ್ಲಿ ಹೆಸರು ಮಾಡಿದ ಸುಂದರ ನಟಿ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬ(Shilpa Shetty Birthday). ತಮ್ಮ ಡ್ಯಾನ್ಸ್‌, ನಟನೆಯ ಮೂಲಕ ಮನಗೆದ್ದ ಈ ನಟಿ 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಯೋಗದ ಮೂಲಕನೂ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇಂದು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಿಮಗಿದು ಗೊತ್ತೇ ಶಿಲ್ಪಾ ಶೆಟ್ಟಿಗೆ ಇಂದಿಗೂ ಡ್ರೈವಿಂಗ್‌ ಭಯ ಕಾಡುತ್ತಿದೆ ಎಂದು. ಯಾಕೆ? ಬನ್ನಿ ತಿಳಿಯೋಣ.

 

ಶಿಲ್ಪಾ ಶೆಟ್ಟಿ ಡ್ರೈವಿಂಗ್‌ ಕಲಿಯದೇ ಇರೋಕೆ ಮುಖ್ಯ ಕಾರಣ ಅಂದು ನಡೆದ ಅಪಘಾತ. ಶಿಲ್ಪಾ ಶೆಟ್ಟಿ ನಟನೆಯ ಬಾಜಿಗರ್‌ ಸಿನಿಮಾ ಆಗತಾನೇ ರಿಲೀಸ್‌ ಆಗಿತ್ತು. ಈ ಸಿನಿಮಾ ರಿಲೀಸ್‌ ಆದ ಹತ್ತು ದಿನದ ನಂತರ ಶಿಲ್ಪಾ ಶೆಟ್ಟಿ ಡ್ರೈವಿಂಗ್‌ ಕಲಿಯಲು ಹೋಗುತ್ತಿದ್ದರು. ಶಿಲ್ಪಾ ಅವರ ಬಳಿ ಲೈಸೆನ್ಸ್‌ ಇರಲಿಲ್ಲ. ಹಾಗಾಗಿ ನಟಿ ತುಂಬಾ ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಿದ್ದರು. ಹೀಗೆ ಒಂದು ದಿನ ಚಲಾಯಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಓರ್ವ ಸೈಕಲ್‌ ಸವಾರ ಬಾಜಿಗರ್‌ ಹಿರೋಯಿನ್‌ ಎಂದು ಗುರುತಿಸಿ ಏಕಾಏಕಿ ಕೂಗಾಡಿ, ಕಾರಿನ ಹತ್ತಿರ ಬಂದಿದ್ದ. ಇದರಿಂದ ನಿಯಂತ್ರಣ ತಪ್ಪಿದ ಶಿಲ್ಪಾ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಇಡೀ ಘಟನೆಯಿಂದ ಶಿಲ್ಪಾ ಶೆಟ್ಟಿ ತುಂಬಾ ಹೆದರಿ ಮತ್ತೆ ಡ್ರೈವಿಂಗ್‌ ಕಲಿಯಲು ಮನಸ್ಸು ಮಾಡಲೇ ಇಲ್ಲ. ಹಾಗಾಗಿ ಈಗಲೂ ಅವರ ಡ್ರೈವರ್‌ ಅವರ ಜೊತೆ ಎಲ್ಲೇ ಹೊರಗೆ ಹೋದಾಗ ಇದ್ದೇ ಇರುತ್ತಾನೆ.

ಇದನ್ನೂ ಓದಿ: ‘ ಸಹಾಯ ಕೇಳಿಕೊಂಡು ಯಾರೂ ನನ್ನ ಬಳಿ ಬರಬೇಡಿ, ನಾನು ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ’ – ಮತದಾರರಿಗೆ ಹೀಗೆ ಅಂದ್ರಾ ಈ ಶಾಸಕ ?