Home Breaking Entertainment News Kannada Ranveer Singh: ತುಳುನಾಡಿನ ದೈವಕ್ಕೆ ಅಪಮಾನ ಮಾಡಿದ ಬಾಲಿವುಡ್‌ ನಟ ರಣವೀರ್‌ ಸಿಂಗ್‌

Ranveer Singh: ತುಳುನಾಡಿನ ದೈವಕ್ಕೆ ಅಪಮಾನ ಮಾಡಿದ ಬಾಲಿವುಡ್‌ ನಟ ರಣವೀರ್‌ ಸಿಂಗ್‌

Hindu neighbor gifts plot of land

Hindu neighbour gifts land to Muslim journalist

Ranveer Singh: ತುಳುನಾಡಿನ ದೈವಕ್ಕೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ (Ranveer Singh) ಅಪಮಾನ ಮಾಡಿದ್ದಾರೆ. ರಿಷಬ್‌ ಶೆಟ್ಟಿ (Rishab Shetty) ನಟನೆಯನ್ನು ಹೊಗಳಲು ಮುಂದಾಗಿ ಬಾಲಿವುಡ್‌ ನಟ ಯಡವಟ್ಟು ಮಾಡಿದ್ದಾರೆ. ಕಾಂತಾರ (Kantara Chapter 1) ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ.

ಗೋವಾ ಫಿಲ್ಮೋತ್ಸವದಲ್ಲಿ ಈ ಘಟನೆ ನಡೆದಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ತುಳುನಾಡಿನ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಮಾಡಿದ್ದಾರೆಂದು ಸೋಷಿಯಲ್‌ ಮೀಡಿಯಾ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ರಿಷಬ್ ಅವರ ಕಾಂತಾರ ಸಿನಿಮಾವನ್ನು ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್‌ ಸಿಂಗ್‌ ಅನುಕರಣೆ ಮಾಡಿದ್ದಾರೆ. ರಣವೀರ್‌ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದಾರೆ.ಗೋವಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ರಣವೀರ್ ಸಿಂಗ್ ನಿರೂಪಕರಾಗಿದ್ದರು. ಕಾಂತಾರ ಸಿನಿಮಾದಲ್ಲಿ ಬರುವ ಚಾಮುಂಡಿ ದೇವರನ್ನು ‘ಹೆಣ್ಣು ದೆವ್ವ’ ಅಂತ ಕರೆದಿದ್ದಾರೆ. ರಣವೀರ್ ಸಿಂಗ್ ಅನುಕರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾರ್ಯಕ್ರಮ ನಡೆಯುವಾಗ ರಿಷಬ್ ಶೆಟ್ಟಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ರಣವೀರ್‌ ಅನುಕರಣೆಗೆ ಸ್ವತಃ ರಿಷಬ್‌ ಅವರೇ ನಕ್ಕಿದ್ದಾರೆ. ಬಾಲಿವುಡ್‌ ನಟನಿಗೆ ರಿಷಬ್‌ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅನೇಕರು ಪ್ರಶ್ನಿಸಿದ್ದಾರೆ.