Home Breaking Entertainment News Kannada Avatar 2 On OTT: ಒಟಿಟಿ ಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಯಿಲ್ಲದೇ ಅವತಾರ್ 2 ...

Avatar 2 On OTT: ಒಟಿಟಿ ಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಯಿಲ್ಲದೇ ಅವತಾರ್ 2 ಶೀಘ್ರದಲ್ಲೇ ನಿಮ್ಮ ಮುಂದೆ ಈ ದಿನಾಂಕದಂದು

Avatar 2 On OTT
Image source: Kannada News

Hindu neighbor gifts plot of land

Hindu neighbour gifts land to Muslim journalist

Avatar 2 on OTT: ವಿಶ್ವದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿರುವ ಅವತಾರ್ 2, ದಿ ವೇ ಆಫ್ ವಾಟರ್ (Avatar 2, The way of Water) ಸಿನಿಮಾ ಈಗಾಗಲೇ ಡಿಸೆಂಬರ್‌ 16 2022 ರಂದು ಬಿಡುಗಡೆ ಆಗಿದ್ದು, ಕೋಟಿ ಕೋಟಿ ಹಣವನ್ನೂ ಬಾಚಿಕೊಂಡಿತ್ತು. ಸದ್ಯ ಚಿತ್ರಮಂದಿರದಲ್ಲಿ 3 D ಯಲ್ಲಿ ಬಿಡುಗಡೆ ಆಗಿದ್ದ ಅವತಾರ್‌ 2 (Avatar 2 on OTT) ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಹೌದು, ಈ ಚಿತ್ರ ಇದೀಗ ಒಟಿಟಿಗೆ ಬರಲು ತಯಾರಾಗಿದೆ.

ಅವತಾರ್‌ 2 ಸಿನಿಮಾ ಯಾವ ಒಟಿಟಿಗೆ ಬರಬಹುದು ಎಂಬ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಲೇ ಇದ್ದವು. ಇದೀಗ ಕೊನೆಗೂ ಅವತಾರ್ 2 ಸಿನಿಮಾದ ಒಟಿಟಿ ಪ್ರವೇಶ ನಿಗದಿಯಾಗಿದೆ.

ಜೇಮ್ಸ್ ಕ್ಯಾಮರನ್ ನಿರ್ದೇಶನದ ಈ ಸಿನಿಮಾ ನೀರಿನಾಳದ ಅದ್ಭುತ ಪ್ರಪಂಚವನ್ನು ಒಳಗೊಂಡಿದೆ. ಮುಖ್ಯವಾಗಿ ಅವತಾರ್ 2 ಸಿನಿಮಾದಲ್ಲಿ ಸ್ಯಾಮ್ ವರ್ತಿಂಗ್​ಟನ್, ಜೋ ಸೆಲ್ಡಾನಾ, ಸಿಗುನೇರಿ, ಟೈಟ್ಯಾನಿಕ್ ನಟಿ ಕೇಟ್ ವಿನ್​ಸ್ಲೆಟ್ ಇನ್ನೂ ಹಲವರು ನಟಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಈ ಸಿನಿಮಾ 1.90 ಲಕ್ಷ ಕೋಟಿಗೂ ಹೆಚ್ಚಿನ ಹಣ ಗಳಿಸಿದೆ. ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಈ ಸಿನಿಮಾ ತಲುಪಲಿದೆ.

ಮುಖ್ಯವಾಗಿ, ಡಿಸ್ಲಿ ಪ್ಲಸ್ ನಲ್ಲಿ ಅವತಾರ್ 2 (Avatar 2) ಸಿನಿಮಾ ಜೂನ್ 7 ರಿಂದ ಪ್ರಸಾರವಾಗಲಿದೆ. ಅದಲ್ಲದೆ ಡಿಸ್ನಿ ಪ್ಲಸ್ ಅವತಾರ್ 2 ನೋಡಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿಲ್ಲ ಎನ್ನಲಾಗಿದೆ.

ಅವತಾರ್ 2 ಸಿನಿಮಾದ ಮುಂದಿನ ಭಾಗದ ಬಹುತೇಕ ಚಿತ್ರೀಕರಣವನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ಮುಗಿಸಿದ್ದಾರೆ. ಅವತಾರ್ 2 ಸಿನಿಮಾದಲ್ಲಿದ್ದ ಹಲವು ಮಕ್ಕಳು ಅವತಾರ್ 3 ಸಿನಿಮಾದಲ್ಲಿಯೂ ಇರುವ ಕಾರಣ ಅವರು ಬೆಳೆದ ದೇಹಾಕಾರದಲ್ಲಿ ಬದಲಾವಣೆ ಆಗುವ ಮುನ್ನವೇ ಸಿನಿಮಾದ ಚಿತ್ರೀಕರಣ ಮುಗಿಸಬೇಕೆಂಬ ಕಾರಣಕ್ಕೆ ಜೇಮ್ಸ್ ಕ್ಯಾಮರನ್ ಅವತಾರ್ 2 ಜೊತೆಗೇ ಅವತಾರ್ 3 ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ.

ಅವತಾರ್ 3 ಸಿನಿಮಾದ ಬಿಡುಗಡೆ ಮುಂದಿನ ವರ್ಷಾಂತ್ಯಕ್ಕೆ ಆಗಲಿದೆ. ಆ ಬಳಿಕ ಅವತಾರ್ 4 ಹಾಗೂ ಅವತಾರ್ 5 ಸಿನಿಮಾ ಸಹ ನಿರ್ಮಾಣಗೊಳ್ಳಲಿದೆ. ಈ ಎಲ್ಲ ಸಿನಿಮಾವನ್ನು ಜೇಮ್ಸ್ ಕ್ಯಾಮರನ್ ಅವರೇ ನಿರ್ದೇಶನ ಮಾಡಲಿದ್ದಾರೆ. ಅವತಾರ್ 2 ಸಿನಿಮಾ ಡಿಸೆಂಬರ್ 16 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಆದರೆ ಅವತಾರ್ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿ 13 ವರ್ಷಗಳ ಬಳಿಕ ಎರಡನೇ ಭಾಗ ಬಿಡುಗಡೆ ಆಗಿದ್ದು ವಿಶೇಷ ಎನ್ನಬಹುದು.

ಇದನ್ನೂ ಓದಿ:Karnataka election commission: ಚುನಾವಣೆ ವೆಚ್ಚದ ವರದಿ ನೀಡದ ಶಾಸಕರನ್ನು ಅನರ್ಹ ಮಾಡುವ ಅಧಿಕಾರವಿದೆ: ಚುನಾವಣಾ ಆಯೋಗ