

CRICKET: 2025 ರ ಏಷ್ಯಾ ಕಪ್‌ನಲ್ಲಿ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್ ಮತ್ತು ಇತರರ ಜೆರ್ಸಿಗಳಲ್ಲಿ ‘ಇಂಡಿಯಾ’ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ, ಏಕೆಂದರೆ ಟೀಮ್ ಇಂಡಿಯಾ ಪ್ರಮುಖ ಪ್ರಾಯೋಜಕರಿಲ್ಲದೆ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿದೆ.
ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಡ್ರೀಮ್ 11 ಕಳೆದ ತಿಂಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI)ನೊಂದಿಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಿದೆ. ಇತ್ತೀಚಿನ ಆನ್ ಲೈನ್ ಗೇಮಿಂಗ್ ಅನ್ನು ಕೇಂದ್ರ ಸರ್ಕಾರ ನಿಷೇಧ ಹೇರಿದ ಭಾಗವಾಗಿ ಡೀಮ್11 ಪ್ರಯಾಓಜಕತ್ವದಿಂದ ನಿರ್ಗಮಿಸಿದೆ. ಹಾಗಾಗಿ ಟೀಮ್ ಇಂಡಿಯಾ 2025 ರ ಏಷ್ಯಾ ಕಪ್‌ಗೆ ಜೆರ್ಸಿ ಪ್ರಾಯೋಜಕರಿಲ್ಲದೆ ತೆರಳಲಿದೆ.
ರಾಷ್ಟ್ರೀಯ ತಂಡದ ಪ್ರಮುಖ ಪ್ರಾಯೋಜಕ ಹಕ್ಕುಗಳಿಗಾಗಿ ಆಸಕ್ತಿ ವ್ಯಕ್ತಪಡಿಸಲು ಬಿಸಿಸಿಐ ಆಹ್ವಾನವನ್ನು ನೀಡಿದೆ. ಬಿಡ್‌ಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 16ಕ್ಕೆ ನಿಗದಿಪಡಿಸಲಾಗಿದೆ. ಏಷ್ಯಾ ಕಪ್ 2025 ಸೆಪ್ಟೆಂಬರ್ 9 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ.
ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಭಾರತೀಯ ಆಟಗಾರರನ್ನು ಶೀರ್ಷಿಕೆ ಪ್ರಾಯೋಜಕರಿಲ್ಲದೆ ನೋಡುವುದು ಹೊಸದೇನಲ್ಲ, ಏಕೆಂದರೆ ಐಸಿಸಿ ವಿಶ್ವ ಈವೆಂಟ್‌ಗಳಲ್ಲಿ ತಂಡಗಳು ಶೀರ್ಷಿಕೆ ಪ್ರಾಯೋಜಕರನ್ನು ಬಳಸಲು ಅನುಮತಿಸುವುದಿಲ್ಲ. ಆದರೆ ಐಸಿಸಿ ಅಲ್ಲದ ಈವೆಂಟ್‌ನಲ್ಲಿ ಇದು ಮೊದಲ ಬಾರಿಗೆ ಆಗಲಿದೆ.













