Home Breaking Entertainment News Kannada ಹೆತ್ತವರ ಪ್ರಚೋದನೆ,ಅತಿಯಾದ ಸಲುಗೆ ಇಂದು ನನ್ನ ಸ್ಥಿತಿಗೆ ಕಾರಣ!! ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಡುತ್ತಿರುವ...

ಹೆತ್ತವರ ಪ್ರಚೋದನೆ,ಅತಿಯಾದ ಸಲುಗೆ ಇಂದು ನನ್ನ ಸ್ಥಿತಿಗೆ ಕಾರಣ!! ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಡುತ್ತಿರುವ ಆರ್ಯನ್ ಖಾನ್

Hindu neighbor gifts plot of land

Hindu neighbour gifts land to Muslim journalist

ಮುಂಬೈ:ಹೆತ್ತವರ ಪ್ರಚೋದನೆಯಿಂದಾಗಿಯೋ, ಅಥವಾ ಹೆತ್ತವರ ಸಲುಗೆಯಿಂದನೋ ಅಂದು ರಾತ್ರಿ ಸಮುದ್ರ ತೀರದ ಹಡಗೊಂದರಲ್ಲಿ ರೇವ್ ಪಾರ್ಟಿ ಆಯೋಜಿಸಿ, ನಶೆ ಸೇವಿಸಿದ್ದ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸದ್ಯ ಪೊಲೀಸರ ಕಷ್ಟಡಿಯಲ್ಲಿದ್ದು, ಒಂದೊಂದೇ ಅಂಶಗಳನ್ನು ಎಳೆ ಎಳೆಯಾಗಿ ಪೊಲೀಸರ ಮುಂದೆ ಬಿಚ್ಚಿಡುತ್ತಿದ್ದಾನೆ.

ಪುತ್ರನ ಪ್ರಕರಣದಿಂದಾಗಿ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಕುಟುಂಬಕ್ಕೆ ದೊಡ್ಡ ಹೊಡೆತ ಬಿದ್ದಿದ್ದು,ತಮ್ಮ ತಪ್ಪಿನಿಂದಾಗಿ ಮಗ ಬಂಧನಕ್ಕೊಳಗಾಗಿದ್ದಾನೆ ಎಂದು ಅರಿತಿದ್ದರೂ ಮಾತನಾಡಲು ಮಾತಿಲ್ಲ. ಪ್ರಕರಣ ಯಾವ ಹಂತ ತಲುಪುತ್ತದೆಯೋ,ಇನ್ನು ಎಷ್ಟು ವರುಷಗಳ ಕಾಲ ಮಗ ಜೈಲುವಾಸ ಅನುಭವಿಸಬೇಕೋ ಎಂಬೆಲ್ಲಾ ಚಿಂತೆಯಲ್ಲಿ ಶಾರುಖ್ ಕುಟುಂಬ ಮಾತಿಲ್ಲದೆ ಮೌನಕ್ಕೆ ಶರಣಾಗಿದೆ.

ಮಗ ಅಡ್ಡ ದಾರಿ ಹಿಡಿದಿದ್ದಾನೆ ಎಂದು ಈ ಮೊದಲೇ ಖಾನ್ ಕುಟುಂಬಕ್ಕೆ ಗೊತ್ತಿತ್ತು. ಈ ಹಿಂದೆ ತಮ್ನ ಮಗನ ಬಗ್ಗೆ ಹೆಮ್ಮೆಯಿಂದ ‘ಆತ ಡ್ರಗ್ಸ್ ಆದರೂ ಸೇವಿಸಲಿ, ಹುಡುಗಿಯರೊಂದಿಗೆ ಮಜಾ ಉಡಾಯಿಸಲಿ ಎಂದೆಲ್ಲಾ ಹೇಳಿಕೆ ನೀಡಿದ್ದ ವೀಡಿಯೋ ಕೂಡಾ ಈಗ ವೈರಲ್ ಆಗಿದ್ದು, ತನ್ನ ಪ್ರಚೋದನೆಯೇ ಮುಳ್ಳಾಗುತ್ತದೆ ಎಂದು ಖಾನ್ ಭಾವಿಸಿರಲಿಲ್ಲವೇನೋ ಎಂಬುವುದು ಮೇಲ್ನೋಟಕ್ಕೆ ಕಂಡುಬಂದರೂ, ತಮ್ಮ ಗಮನಕ್ಕೆ ಬಂದ ಮೇಲೂ ಖಾನ್ ಸುಮ್ಮನಿದ್ದರೇ, ಖಾನ್ ಅವರೇ ಪ್ರಚೋದಿಸಿದ್ದಾರೆಯೇ ಎಂಬೆಲ್ಲಾ ಸತ್ಯಗಳು ಇನ್ನಷ್ಟೇ ತಿಳಿಯಬೇಕಾಗಿದೆ.

ಇತ್ತ ಎನ್ ಸಿ ಬಿ ಅಧಿಕಾರಿಗಳ ಕಷ್ಟಡಿಯಲ್ಲಿರುವ ಖಾನ್ ಪುತ್ರ, ಎಲ್ಲವನ್ನೂ ಬಾಯಿ ಬಿಡುತ್ತಿದ್ದು ಪ್ರಕರಣದ ಸಮಗ್ರ ತನಿಖೆಗೆ ಕೋರ್ಟ್ ಮತ್ತೆ ಮೂರು ದಿನಗಳ ಕಾಲ ಖಾನ್ ಪುತ್ರನನ್ನು ಪೊಲೀಸರ ಕಷ್ಟಡಿಗೆ ಒಪ್ಪಿಸಿದೆ.ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ತಲೆಗಳ ಹೆಸರು ಹೊರಬರಬಹುದಾಗಿದೆ. ಒಟ್ಟಿನಲ್ಲಿ ಪ್ರಕರಣ ಸಾಬೀತಾದರೆ ಖ್ಯಾತ ನಟನ ಮಗನಿಗೆ ಜೈಲೂಟ ಕಟ್ಟಿಟ್ಟ ಬುತ್ತಿಯಾಗಿದ್ದು, ಇತ್ತ ಪ್ರಕರಣದಲ್ಲಿ ಭಾಗಿಯಾಗಿ ಯಾವಾಗ ತಮ್ಮ ಹೆಸರು ಹೊರಬರುತ್ತದೆ ಎಂದು ಕೆಲವರು ಭಯದಲ್ಲಿರುವ ಮಾಹಿತಿಯೊಂದು ಎಲ್ಲೆಡೆ ಹರಿದಾಡುತ್ತಿದೆ.