Home Breaking Entertainment News Kannada Kriti sanon: ತಿರುಪತಿ ದೇವಸ್ಥಾನದಲ್ಲೇ ಕೃತಿ ಸನೋನ್​ಗೆ ಮುತ್ತಿಟ್ಟ ‘ಆದಿಪುರುಷ್’ ನಿರ್ದೇಶಕ! ಹೋಟೆಲ್ ರೂಮಿಗೆ ಹೋಗಿ...

Kriti sanon: ತಿರುಪತಿ ದೇವಸ್ಥಾನದಲ್ಲೇ ಕೃತಿ ಸನೋನ್​ಗೆ ಮುತ್ತಿಟ್ಟ ‘ಆದಿಪುರುಷ್’ ನಿರ್ದೇಶಕ! ಹೋಟೆಲ್ ರೂಮಿಗೆ ಹೋಗಿ ಅದನ್ನು ಮಾಡಿ ಎಂದ ನೆಟ್ಟಿಗರು!!

Kriti sanon
Image source- Vijayavani

Hindu neighbor gifts plot of land

Hindu neighbour gifts land to Muslim journalist

Kriti sanon:ಸಾಕಷ್ಟು ವಿವಾದಗಳು ಅಡೆ ತಡೆಗಳನ್ನು ದಾಟಿ, ಪ್ರಭಾಸ್‌(Prabhas) ಅಭಿನಯದ ಬಹು ನಿರೀಕ್ಷಿತ ‘ಆದಿಪುರುಷ್‌'(Adipursh) ಸಿನಿಮಾ ಕೊನೆಗೂ ತೆರೆ ಕಾಣುತ್ತಿದ್ದು, ಜೂನ್‌(June) 16 ರಂದು ಈ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.ಈ ಹಿನ್ನೆಲೆಯಲ್ಲಿ ಆದಿಪುರುಷ್ ಸಿನಿಮಾ ತಂಡ ತಿರುಪತಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದು, ಈ ಸಂದರ್ಭ ನಿರ್ದೇಶಕ ನಟಿ ಕೃತಿ ಸನೋನ್(Kriti sanon)ಅವರಿಗೆ ಕಿಸ್ ಮಾಡಿದ್ದಾರೆ. ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿ, ಈ ಬಗ್ಗೆ ತೀವ್ರ ವಿರೋಧವೂ ವ್ಯಕ್ತವಾಗಿದೆ.

ಹೌದು, ಜೂನ್‌ 6 ರಂದು ಚಿತ್ರತಂಡ ತಿರುಮಲ ತಿರುಪತಿಯಲ್ಲಿ(Tirupati) ಪ್ರೀ ರಿಲೀಸ್‌(Pree relies) ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್‌ , ಕೃತಿ ಸನೊನ್‌ ಸೇರಿದಂತೆ ಚಿತ್ರತಂಡದ ಅನೇಕ ಮಂದಿ ಹಾಜರಿದ್ದರು. ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಪ್ರಭಾಸ್‌, ಕೃತಿ ಸನೊನ್‌, ನಿರ್ದೇಶಕ ಓಂ ರಾವುತ್‌(Director om raouth)ಸೇರಿದಂತೆ ಅನೇಕ ಮಂದಿ ತಿರುಪತಿ ದೇಗುಲಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದು, ತಮ್ಮ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿದ್ದರು. ಆದರೆ ಈ ವೇಳೆ ಕೃತಿ ಅವರಿಗೆ, ನಿರ್ದೇಶಕ ರಾವುತ್‌ ಚುಂಬಿಸಿದ್ದು, ಸದ್ಯ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಕೆಲವರು ಈ ಫೋಟೋಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಘಟನೆ ವೈರಲ್ ಆಗುತ್ತಿದ್ದಂತೆ ತೆಲಂಗಾಣದ(Telangana) ಚಿಲ್ಕುರ್ ಬಾಲಾಜಿ ದೇವಸ್ಥಾನದ(Chilkur balaji temple) ಶ್ರೀಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಘಟನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ವೆಂಕಟೇಶ್ವರ ದೇವಸ್ಥಾನ ತಿರುಪತಿಯಲ್ಲಿ ನಟಿಗೆ ಕಿಸ್ ಮಾಡಿದ್ದು ತಪ್ಪು ಎಂದಿದ್ದಾರೆ. ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿದ ಅವರು ಇದು ಖಂಡನಾತ್ಮಕ ಘಟನೆ. ಪತಿ-ಪತ್ನಿಯೂ ಜೊತೆಯಾಗಿ ತಿರುಪತಿಗೆ ಹೋಗುವುದು ಕಡಿಮೆ. ನೀವು ಹೋಟೆಲ್ ರೂಮಿಗೆ ಹೋಗಿ ಅದನ್ನು ಮಾಡಿ. ನಿಮ್ಮ ನಡವಳಿಕೆ ರಾಮಾಯಣ ಹಾಗೂ ಸೀತಾಮಾತೆಯನ್ನು ಅವಮಾನಿಸುವಂತಿದೆ ಎಂದಿದ್ದಾರೆ.

ಅಂದಹಾಗೆ ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಚಲನಚಿತ್ರ ನಿರ್ದೇಶಕ ಕೃತಿಗೆ ವಿದಾಯ ಹೇಳುವಾಗ ಅವರ ಕೆನ್ನೆಗೆ ಚುಂಬಿಸುವುದನ್ನು ಕಾಣಬಹುದು. ದೇವರ ದರ್ಶನ ಮಾಡಿದ ಬಳಿಕ ನಟಿ ಕೃತಿ ಸನೊನ್‌, ಮನೆಗೆ ಹೊರಡಲು ಕಾರು ಏರುವಾಗ ತಮ್ಮ ಜೊತೆಯಲ್ಲಿದ್ದವರಿಗೆ ಬೈ ಹೇಳುತ್ತಾರೆ. ಆತ್ಮೀಯತೆಯಿಂದ ಕೃತಿ ಅವರನ್ನು ಹಗ್‌ ಮಾಡಿ ಮುತ್ತು ನೀಡುತ್ತಾರೆ. ಈ ವಿಡಿಯೋ ಕ್ಲಿಪ್ಲಿಂಗ್‌ ಹಾಗೂ ಪೋಟೋ ಸ್ಕ್ರೀನ್‌ ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ನೆಟ್ಟಿಗರು ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ಈ ವಿರುದ್ಧ ಕಾಮೆಂಟ್ ಮಾಡಿದ್ದು, ಸಾರ್ವಜನಿಕವಾಗಿ ಪ್ರೀತಿಯನ್ನು ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕ, ಇದು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ.

ಆದಾಗ್ಯೂ, ಕೃತಿ ಸನೋನ್ ಸಾಮಾಜಿಕ ಮಾಧ್ಯಮದಲ್ಲಿ ದೇವಸ್ಥಾನಕ್ಕೆ ತೆರಳಿದ್ದ ಫೋಟೋವನ್ನು ಹರಿಯಬಿಟ್ಟಿದ್ದಾರೆ. ಅವರು ಅಲ್ಲಿ ಜನರಿಂದ ಪಡೆದ ಪ್ರೀತಿ ಮತ್ತು ತಿರುಪತಿ ದೇವಾಲಯ ಭೇಟಿಗಾಗಿ ಕೃತಜ್ಞತಾ ಟಿಪ್ಪಣಿಯನ್ನು ಸಹ ಬರೆದಿದ್ದಾರೆ.

ಇನ್ನು ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮವು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ (ಎಸ್ವಿಯು) ಕ್ರೀಡಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿತು. ಅದೇ ರೀತಿ ರಾಮ ಮತ್ತು ರಾವಣನ ನಡುವಿನ ಯುದ್ಧದ ದೃಶ್ಯಗಳನ್ನು ತೋರಿಸುವ ‘ಆದಿಪುರುಷ’ ಚಿತ್ರದ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಶ್ರೀ ತ್ರಿದಂಡಿ ಚಿನ್ನಜೀಯರ ಸ್ವಾಮಿಗಳು ಈ ಆದಿಪುರುಷ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಾಯಕ ಪ್ರಭಾಸ್ ಸೇರಿದಂತೆ ಚಿತ್ರತಂಡವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶ್ರೀರಾಮನೇ ನಿಜವಾದ ಬಾಹುಬಲಿ ಶ್ರೀಗಳು ಬಣ್ಣಿಸಿದರು. ರಾಮನ ಪಾತ್ರಕ್ಕಾಗಿ ಪ್ರಭಾಸ್ ವಿಶೇಷ ಮೆಚ್ಚುಗೆ ಪಡೆದರು.