Home Breaking Entertainment News Kannada Actress Shilpa Shetty: 4 ತಾಸು ಢಕ್ಕೆ ಬಲಿ ಕೂತು ವೀಕ್ಷಿಸಿದ ನಟಿ ಶಿಲ್ಪಾ ಶೆಟ್ಟಿ...

Actress Shilpa Shetty: 4 ತಾಸು ಢಕ್ಕೆ ಬಲಿ ಕೂತು ವೀಕ್ಷಿಸಿದ ನಟಿ ಶಿಲ್ಪಾ ಶೆಟ್ಟಿ ದಂಪತಿ

Hindu neighbor gifts plot of land

Hindu neighbour gifts land to Muslim journalist

Actress Shilpa Shetty: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್‌ ಕುಂದ್ರ ದಂಪತಿ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಢಕ್ಕೆಬಲಿ ಸೇವೆಯ ಸಮಯದಲ್ಲಿ ಸುಮಾರು ನಾಲ್ಕು ಗಂಟೆ ಕಾಲ ಪದ್ಮಾಸನಸ್ಥರಾಗಿ ತಂಬಿಲ ಹಾಗೂ ಮಂಡಲ ಸೇವೆಗಳನ್ನು ಭಕ್ತಿಭಾವದಿಂದ ವೀಕ್ಷಿಸಿದರು.

ಇಲ್ಲಿನ ಎರಡನೇ ಗುರಿಕಾರ, ಭಾರತೀಯ ನೌಕಾಸೇನೆಯ ನಿವೃತ್ತ ಅಧಿಕಾರಿ ಬಾಲಪ್ಪ ನಟರಾಜ ಪಿ.ಎಸ್‌ ಅವರಿಂದ ಮಾಹಿತಿ ಪಡೆದುಕೊಂಡಿದ್ದರು.

ಮರಳ ಮೇಲೆಯೇ ಯಾವುದೇ ಐಷರಾಮಿ ವ್ಯವಸ್ಥೆಗಳಿಲ್ಲದೆ ಶಿಲ್ಪಾಶೆಟ್ಟಿ ದಂಪತಿ ಕುಟುಂಬದ ಜೊತೆ ರಾತ್ರಿಯಿಡೀ ನಡೆದ ಸೇವೆಗಳನ್ನು ವೀಕ್ಷಣೆ ಮಾಡಿದರು. ತನ್ನ ಭದ್ರತಾ ಸಿಬ್ಬಂದಿ ಇತರ ಬಳಗವನ್ನು ದೂರ ಇರಿಸಿದ್ದರು. ತಂಗಿಗೆ ವಿವಾಹ ಭಾಗ್ಯ, ವ್ಯವಹಾರಗಳ ಯಶಸ್ವಿಗೆ ಪ್ರಾರ್ಥನೆ ಮಾಡಿ ಉತ್ತಮ ಮಂಗಲ ಪ್ರಸಾದವನ್ನು ದಂಪತಿ ಸ್ವೀಕರಿಸಿದರು.

ದೊಂದಿ ಸಹಿತದ ದರ್ಶನ ಸೇವೆ, ಮಂಡಲ ಸೇವೆಯಲ್ಲಿ ಪಾತ್ರಿಗಳ ಹಿಂಗಾರ ಸ್ನಾನದ ದೃಶ್ಯಗಳನ್ನು ದಂಪತಿ ತದೇಕ ಚಿತ್ತದಿಂದ ವೀಕ್ಷಿಸಿದರು.