Home Breaking Entertainment News Kannada Actress Prema:ಆ ಒಂದು ಆರೋಪಕ್ಕೆ ಸಿಟ್ಟುಕೊಂಡ ನಟಿ ಪ್ರೇಮ! ಇದೊಂದು ನಡಿಬಾರದಿತ್ತು ಎಂದ ಮೋಹಕ...

Actress Prema:ಆ ಒಂದು ಆರೋಪಕ್ಕೆ ಸಿಟ್ಟುಕೊಂಡ ನಟಿ ಪ್ರೇಮ! ಇದೊಂದು ನಡಿಬಾರದಿತ್ತು ಎಂದ ಮೋಹಕ ನಟಿ!

Actress Prema

Hindu neighbor gifts plot of land

Hindu neighbour gifts land to Muslim journalist

Actress Prema: ನಟಿ ಪ್ರೇಮ(Actress Prema) 1995 ರಲ್ಲಿ ಶಿವರಾಜಕುಮಾರ್ ‘ಸವ್ಯಸಾಚಿ’ ಮತ್ತು ರಾಘವೇಂದ್ರ ರಾಜ್ ಕುಮಾರ್ ರವರ ‘ಆಟ ಹುಡುಗಾಟ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ತಮ್ಮ ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಗಳಿಸಿ ಮನೆಮಾತಾದ ನಟಿ ಪ್ರೇಮಾ ನಾನು ನನ್ನ ಹೆಂಡ್ತೀರು, ಯಜಮಾನ , ಕನಸುಗಾರ, ಆಪ್ತಮಿತ್ರ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೊಡಗಿನ ಕುವರಿ ಪ್ರೇಮಾ ಅವರ ಪೂರ್ತಿ ಹೆಸರು ನೆರವಂಡ ಚೆಟ್ಟಿಚ ಪ್ರೇಮಾ ಎಂಬುದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಆದರೆ, ನಟಿಯ ಬಗ್ಗೆ ಕೇಳಿಬಂದ ಆರೋಪ ನಟಿಯ ಜೀವನದ ಮೇಲೆ ಗಂಭೀರ ಪ್ರಭಾವ ಬೀರಿತ್ತು. ಅಷ್ಟಕ್ಕೂ ನಟಿ ಪ್ರೇಮಾ ಈ ರೀತಿ ಬೇಸರ ಮಾಡಿಕೊಳ್ಳಲು ಕಾರಣವೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

ನಟಿ ಪ್ರೇಮಾ ಅವರು ಸಾಫ್ಟ್ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ ಜೀವನ್ ಅಪ್ಪಚ್ಚು ಅವರ ಜೊತೆಗೆ ಜುಲೈ 6, 2006ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ನಟಿ ಪ್ರೇಮಾ (Actress Prema) ಅವರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ತಮ್ಮ ಮೊದಲ ಮದುವೆ ಮುರಿದು ಬಿದ್ದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ರಿ ಎಂಟ್ರಿ ಕೊಟ್ಟರು ಕೂಡ ನಟಿ ಪ್ರೇಮಾ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಮಿಂಚದ ಹಿನ್ನೆಲೆ ಮತ್ತೆ ಸಿನಿಮಾಗಳಿಂದ (Film Industry)ಅಂತರ ಕಾಯ್ದುಕೊಂಡಿದ್ದರು.

ನಟಿ ಪ್ರೇಮ(Prema) ಅವರ ವಿವಾಹದ (Marriage)ಬಳಿಕ ನಟಿಯ ವಿರುದ್ಧ ಕೆಲವೊಂದು ಅಸಹಜ ಹೇಳಿಕೆಗಳು ಕೇಳಿಬಂದವು. ಚಿತ್ರರಂಗದಲ್ಲಿ ಗಾಳಿ ಸುದ್ದಿಗಳು ಜೋರಾಗಿ ಹಬ್ಬಿ, ಅದರಲ್ಲೂ ಆ ಹೇಳಿಕೆ ಮಾತ್ರ ಪ್ರೇಮ ಅವರಿಗೆ ಹೆಚ್ಚು ಆಘಾತ ನೀಡಿತ್ತು ಎನ್ನಲಾಗಿದೆ. ನಟಿ ಪ್ರೇಮ ಅವರು ವಿವಾಹದ ವಿಚ್ಛೇದನದ(Divorce) ದುಃಖವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ(Austrelia) ತಂಗಿದ್ದರಂತೆ. ಈ ಸಂದರ್ಭ ಗೆಳತಿಯರ ಮನೆಗೆ ಹೋಗಿದ್ದ ವೇಳೆ ನಟಿ ಪ್ರೇಮಾ ಅವರಿಗೆ ಕ್ಯಾನ್ಸರ್ ಕಾಯಿಲೆ ಇದ್ದು, ಹೀಗಾಗಿಯೇ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದಾರೆ ಎಂಬ ಸುಳ್ಳು ಸುದ್ದಿ ಎಲ್ಲೆಡೆ ಹಬ್ಬಿತ್ತು ಎನ್ನಲಾಗಿದೆ. ವಾಸ್ತವದಲ್ಲಿ ನಟಿ ಪ್ರೇಮ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರದೆ ಹೋದರು ಕೂಡ ಅವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದು ನಟಿಗೆ ತುಂಬಾ ಆಘಾತ ನೀಡಿತ್ತು ಎಂದು ಹೇಳಿಕೊಂಡಿದ್ದಾರೆ.