Home Breaking Entertainment News Kannada Kangana Ranaut: ಶೂಟಿಂಗ್ ವೇಳೆ ಮರಗಳ ಹಿಂದೆ ಬಟ್ಟೆ ಬದಲಿಸಿ ಫಜೀತಿಗೊಳಗಾದ ಕಂಗನಾ! ಇದಕ್ಕಾಗಿ ಅವರು...

Kangana Ranaut: ಶೂಟಿಂಗ್ ವೇಳೆ ಮರಗಳ ಹಿಂದೆ ಬಟ್ಟೆ ಬದಲಿಸಿ ಫಜೀತಿಗೊಳಗಾದ ಕಂಗನಾ! ಇದಕ್ಕಾಗಿ ಅವರು ಖರೀದಿಸಿದ ವ್ಯಾನಿಟಿ ವ್ಯಾನ್ ಬೆಲೆ ಎಷ್ಟು ಗೊತ್ತಾ?

Actress Kangana Ranaut

Hindu neighbor gifts plot of land

Hindu neighbour gifts land to Muslim journalist

Actress Kangana Ranaut :ಕೆಲವು ನಟ ನಟಿಯರು ತಮ್ಮ ಅಭಿನಯದ ಮೂಲಕ ಖ್ಯಾತಿ ಗಳಿಸಿದರೆ, ಇನ್ನು ಕೆಲವರು ವಿವಾದಗಳಿಂದಲೇ ಸುದ್ಧಿಯಾಗುತ್ತಾರೆ. ಮತ್ತೆ ಕೆಲವರು ಈ ಎರಡರಿಂದಲೂ ಖ್ಯಾತರಾಗಿದ್ದಾರೆ. ಇಂತವರ ಸಾಲಿನಲ್ಲಿ ಬಾಲಿವುಡ್(Bollywood) ನಟಿ ಕಂಗನಾ ರಣಾವತ್(Kangana Ranaavat) ಕೂಡ ಒಬ್ಬರು. ಕಾಂಟ್ರವರ್ಸಿ(Controversy) ಕ್ವೀನ್ ಎಂದೇ ಬಿಂಬಿತರಾಗಿರುವ ಈ ಕಂಗನಾ ಇದೀಗ ತಮ್ಮ ವೈಯಕ್ತಿಕ ವಿಚಾರದ ಮೂಲಕ ಮತ್ತೆ ಸುದ್ದಿಯಾಗುತ್ತಿದ್ದಾರೆ.

ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟಿರುವ ಕಂಗನಾ ಇಂದು ಯಶಸ್ಸು ಮತ್ತು ಖ್ಯಾತಿಯೊಂದಿಗೆ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಇದೀಗ ಸದ್ಯ ಅವರು ಖರೀದಿಸಿದ್ದಾರೆ ಎನ್ನಲಾದ ದುಬಾರಿ ವ್ಯಾನಿಟಿ ವ್ಯಾನ್ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಹೌದು, ಒಂದಾನೊಂದು ಕಾಲದಲ್ಲಿ ಶೂಟಿಂಗ್ ವೇಳೆ ಬಟ್ಟೆ ಬದಲಾಯಿಸಲು ಬಂಡೆಯ ಹಿಂದೆ ಹೋಗುತ್ತಿದ್ದ ಆ ದಿನಗಳ ಕುರಿತು ಕಂಗನಾ ಅನೇಕ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕಂಗನಾ (Actress Kangana Ranaut) ಅವರು ಅತೀ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್(Vanity Van) ಅನ್ನು ಖರೀದಿಸಿದ್ದಾರಂತೆ. ಕಂಗನಾ ವ್ಯಾನಿಟಿ ವ್ಯಾನ್ ಬಗ್ಗೆ ಕೇತನ್ ರಾವಲ್ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಕೇತನ್ ರಾವಲ್(Ketan Raval) ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ವ್ಯಾನಿಟಿ ವ್ಯಾನ್​ಗಳನ್ನು ವಿನ್ಯಾಸಗೊಳಿಸಿದ್ದಾರೆ. ಇದೀಗ ಕಂಗನಾ ಅವ್ರಿಗೂ ವ್ಯಾನ್ ಮಾಡಿಕೊಟ್ಟಿದ್ದಾರೆ. ಕಂಗನಾ ವ್ಯಾನಿಟಿ ವ್ಯಾನ್ ಬಗ್ಗೆ ಮಾತನಾಡಿದ ಕೇತನ್ ರಾವಲ್, ‘ಕಂಗನಾ ತನ್ನ ವ್ಯಾನಿಟಿ ವ್ಯಾನ್​ಗೆ ತುಂಬಾ ಟ್ರೆಡೀಷನಲ್ ಟಚ್ ಬಯಸಿದ್ದರು. ವ್ಯಾನಿಟಿ ವ್ಯಾನ್​ ಒಳಗೆ ಮನೆಯಂತೆ ಇರಬೇಕೆಂದು ಅಪೇಕ್ಷಿಸಿದ್ದರು. ಅದಕ್ಕಾಗಿಯೇ ನಟಿ ತನ್ನ ಮನೆಯ ನೋಟಕ್ಕೆ ಸರಿಹೊಂದುವಂತೆ ತನ್ನ ವ್ಯಾನಿಟಿ ವ್ಯಾನ್ ಅನ್ನು ಕಸ್ಟಮೈಸ್ ಮಾಡಲು ಬಯಸಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸದಾ ತನ್ನ ವಿವಾದಿತ ಕಮೆಂಟ್ ಗಳಿಂದಲೇ ನಟಿ ಸುದ್ದಿಯಲ್ಲಿದ್ದ ಕಂಗನಾ ಇಂದು 65 ಲಕ್ಷದ ದುಬಾರಿ ವ್ಯಾನಿಟಿ ವ್ಯಾನ್ ಖರೀದಿಸಿ ಸಾಕಷ್ಟು ಸುದ್ಧಿಯಾಗುತ್ತಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇನ್ನು ನಟಿ ಕಂಗನಾ ಅವರು ನಿರ್ಮಿಸುತ್ತಿರುವ ಎಮರ್ಜೆನ್ಸಿ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದ್ದು, ಶೀಘ್ರವೇ ತೆರೆ ಮೇಲೆ ಬರಲಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಕಂಗನಾ ಕಾಣಿಸಿಕೊಂಡಿದ್ದಾರೆ.