Home Breaking Entertainment News Kannada Actress Hansika Motwani: ಹನ್ಸಿಕಾ ಮೋಟ್ವಾನಿ ಇಡೀ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದ ನೆಟ್ಟಿಗ...

Actress Hansika Motwani: ಹನ್ಸಿಕಾ ಮೋಟ್ವಾನಿ ಇಡೀ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದ ನೆಟ್ಟಿಗ ; ‘ಬಿಂದಾಸ್’ ಹುಡುಗಿ ನೀಡಿದ್ಲು ಬಿಂದಾಸ್ ಉತ್ತರ !

Actress Hansika Motwani

Hindu neighbor gifts plot of land

Hindu neighbour gifts land to Muslim journalist

Actress Hansika Motwani : ತೆಲುಗಿನ ‘ದೇಶಮುದುರು’ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿ ಬಾಲ ನಟಿಯಾಗಿ ಮಿಂಚಿದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ (Actress Hansika Motwani) ತನ್ನ ಮೈ ಕೈ ತುಂಬಿಕೊಂಡು ಮೋಹಕ ಮೈ ಮಾಟದ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸಿದ್ದರು. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಹನ್ಸಿಕಾ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಅನೇಕ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ನೆಟ್ಟಿಗನೊಬ್ಬ ‘ಪ್ಲಾಸ್ಟಿಕ್ ಸರ್ಜರಿ ಮೂಲಕ ನಟಿ ಹನ್ಸಿಕಾ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ’ ಎಂದು ಹೇಳಿದ್ದು, ಇದಕ್ಕೆ ನಟಿ ಬಿಂದಾ‌ಸ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ಕೆಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹನ್ಸಿಕಾ ಮೋಟ್ವಾನಿ ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವೊಂದು ಯೋಗ ಭಂಗಿಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ”ಯೋಗ ದಿನವನ್ನು ಆಚರಿಸುತ್ತಿದ್ದೇನೆ, ಇಂದು ಹಾಗೂ ಪ್ರತಿದಿನ” ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಈ ಪೋಸ್ಟ್ ಗೆ ನೆಟ್ಟಿರುವ ವಿವಿಧ ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಆದರೆ, ಒರ್ವ ನೆಟ್ಟಿಗ ‘ಮದುವೆ ನಂತರ ಹನ್ಸಿಕಾ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ. ಈಗ ಯೋಗ ಮಾಡುವ ಡ್ರಾಮಾ ಮಾಡುತ್ತಿದ್ದಾರೆ’ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಕಾಮೆಂಟ್‌ಗೆ ಹನ್ಸಿಕಾ ಪ್ರತಿಕ್ರಿಯಿಸಿದ್ದು, “ನಾನು ಈಗ ಹೇಗೆ ಕಾಣುತ್ತಿದ್ದೇನೋ ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಅದರಲ್ಲಿ ಹೆಚ್ಚಾಗಿ ಯೋಗವೇ ಅಡಗಿದೆ. ಅಷ್ಟೇ ಅಲ್ಲ, ಯೋಗವು ದ್ವೇಷವನ್ನು ನಾಶ ಮಾಡಿ ಧನಾತ್ಮಕ ವಿಚಾರವನ್ನು ಹರಡಲು ಸಹಾಯ ಮಾಡುತ್ತದೆ” ಎಂದು ರಿಕಾಮೆಂಟ್ ಮಾಡಿದರು.

ಕೆಲವು ಸೋಷಿಯಲ್ಸ್ ನಟಿಯ ಪರವಾಗಿ ವಾದ ಮಂಡಿಸಿದ್ದು, ಮದುವೆ ನಂತರ ಮಹಿಳೆಯರು ದಪ್ಪ ಆಗಬೇಕು ಎಂದೇನಿಲ್ಲ. ಮದುವೆ ಮೊದಲಾಗಲೀ ಅಥವಾ ನಂತರ ಆಗಲಿ ದೇಹದ ತೂಕ ಮ್ಯಾನೇಜ್‌ಮೆಂಟ್‌ ಮಾಡುವತ್ತ ಗಮನ ಹರಿಸಿದರೆ ಸ್ಲಿಮ್‌ ಆಗುವುದು ದೊಡ್ಡ ವಿಚಾರವಲ್ಲ, ಹನ್ಸಿಕಾ ಯೋಗದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾಗಿ ಅವರು ಇಷ್ಟು ಫಿಟ್‌ ಆಗಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಅಂದಹಾಗೆ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಉದ್ಯಮಿ ಸೊಹೈಲ್ ಕತುರಿಯಾ (Sohael Kathuriya) ಜೊತೆ ಕಳೆದ ವರ್ಷವಷ್ಟೇ (ಡಿ.4) ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಲ್ಲದೆ, ಈ ಹಿಂದೆ ನಟಿ ಹನ್ಸಿಕಾ ಬೆಳೆಯಲು, ಮೈ ಕೈ ತುಂಬಿಕೊಳ್ಳಲು ಇಂಜೆಕ್ಷನ್ ತಗೊಂಡಿದ್ದರು ಎಂಬ ವಿಚಾರ ವೈರಲ್ ಆಗಿತ್ತು.

ಹೃತಿಕ್ ರೋಷನ್ (hruthik Roshan) ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದು ಮಾತ್ರವಲ್ಲದೆ ಹನ್ಸಿಕಾ ಮೋಟ್ವಾನಿ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ (puneeth Rajkumar) ಅಭಿನಯದ ಬಿಂದಾಸ್​ ಸಿನಿಮಾದಲ್ಲಿ ಹನ್ಸಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಟ್ಟು 50 ಸಿನಿಮಾಗಳಲ್ಲಿ ನಟಿ ಹನ್ಸಿಕಾ ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

 

 

ಇದನ್ನು ಓದಿ: H D Kumaraswamy: ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರಿಗೂ ಟಿಕೆಟ್ ಇಲ್ಲ !! ಸಂಚಲನ ಮೂಡಿಸಿದ ಎಚ್ಡಿಕೆ ಹೇಳಿಕೆ !!