Home Breaking Entertainment News Kannada Actor Mohanlal Film: ಮೇಲು ಕೋಟೈ ವಾಲಿಬನ್ ಫಸ್ಟ್ ಲುಕ್: ಪ್ರಾಯ 62 ಆದ್ರೂ...

Actor Mohanlal Film: ಮೇಲು ಕೋಟೈ ವಾಲಿಬನ್ ಫಸ್ಟ್ ಲುಕ್: ಪ್ರಾಯ 62 ಆದ್ರೂ ಮೋಹನ್ ಲಾಲ್ ಫಿಟ್ ಫಾರ್ ಫೈಟ್ಸ್ !

Actor Mohanlal Film

Hindu neighbor gifts plot of land

Hindu neighbour gifts land to Muslim journalist

Actor Mohanlal Film : ಮೋಹನ್ ಲಾಲ್ ಅವರು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಹೆಚ್ಚಿನ ಖ್ಯಾತಿ ಪಡೆದವರಗಿದ್ದಾರೆ. ಅದಲ್ಲದೆ ರಾಷ್ಟ್ರಪ್ರಶಸ್ತಿ ವಿಜೇತರು ಕೂಡ ಆಗಿದ್ದಾರೆ. ಮೋಹನ್ ಲಾಲ್ ಅಭಿನಯದಿಂದಾಗಿ ಅವರನ್ನು ಅಸಂಖ್ಯ ಅಭಿಮಾನಿಗಳು ಪ್ರೀತಿಸುತ್ತಾರೆ.

ಮೋಹನ್ ಲಾಲ್ ಅವರಿಗೆ 62 ವರ್ಷ ವಯಸ್ಸು ಆದರು ಸಹ ಸಾಹಸಮಯ ಸಿನಿಮಾಗಳನ್ನು (Actor Mohanlal Film) ಮಾಡುತ್ತಿದ್ದಾರೆ. ‘ಲೂಸಿಫರ್’, ‘ದೃಶ್ಯಂ 2’, ‘ಮರಕ್ಕರ್’ ಮುಂತಾದ ಚಿತ್ರಗಳ ಮೂಲಕ ಗಮನ ಸೆಳೆದ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಸ್ತುತ ಅವರು ‘ಮಲೈಕೋಟೈ ವಾಲಿಬನ್’ (Malaikottai Vaaliban)
ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ (Malaikottai Vaaliban First Look) ಬಿಡುಗಡೆ ಮಾಡಲಾಗಿದೆ.

ಮಲೈಕೊಟ್ಟೈ ವಾಲಿಬನ್ ಆಕ್ಷನ್-ಥ್ರಿಲ್ಲರ್ ಆಗಿದ್ದು, ಇದನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದಾರೆ. ಇದೀಗ ‘ಮಲೈಕೋಟೈ ವಾಲಿಬನ್’ ಎಂಬ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿಗೂ ಡಬ್ ಆಗಿ ಬಿಡುಗಡೆ ಆಗಲಿದೆ. ಮುಖ್ಯವಾಗಿ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ವೈರಲ್ ಆಗಿದೆ. ಮೋಹನ್ ಲಾಲ್ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಟ್ವಿಟರ್‌ನಲ್ಲಿ ಮೋಹನ್‌ಲಾಲ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದು, ಮರಳುಗಾಡಿನಂತಹ ಪ್ರದೇಶದಲ್ಲಿ ಮೋಹನ್‌ಲಾಲ್ ಅವರು ಹಗ್ಗ ಹಿಡಿದು ಆರ್ಭಟಿಸುತ್ತಿರುವ ರೀತಿಯಲ್ಲಿ ಪೋಸ್ ನೀಡಿದ್ದಾರೆ.

ಈ ಪೋಸ್ಟರ್ ಅನ್ನು ಒಂಭತ್ತು ಸಾವಿರಕ್ಕೂ ಅಧಿಕ ಮಂದಿ ಇದನ್ನು ರೀಟ್ವಿಟ್ ಮಾಡಿದ್ದು, 2 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.

ಈಗಾಗಲೇ ಜನವರಿ 18ರಿಂದ ‘ಮಲೈಕೋಟೈ ವಾಲಿಬನ್’ ಚಿತ್ರಕ್ಕೆ ಜೈಸಲ್ಮರ್, ರಾಜಸ್ತಾನ್ ಮುಂತಾದ ಲೊಕೇಷನ್ ಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಇದನ್ನೂ ಓದಿ: Bank Balance : ಈ ಬ್ಯಾಂಕ್ ನಲ್ಲಿ ಕಡಿಮೆ ಬ್ಯಾಲೆನ್ಸ್ ಇದ್ರೆ ನಿಮ್ಮ ಖಾತೆಗೆ ಬೀಳಲಿದೆ ಮೇ.1 ರಿಂದ ಸ್ಪೆಷಲ್ ದಂಡ!