Home Breaking Entertainment News Kannada Abhishek Ambareesh-Aviva Marriage: ಅಭಿಷೇಕ್ ಅಂಬರೀಷ್ – ಅವಿವಾ ಮದುವೆ ಬೆಂಗಳೂರಿನಲ್ಲಿ ಜೂನ್ 7 ಕ್ಕೆ,...

Abhishek Ambareesh-Aviva Marriage: ಅಭಿಷೇಕ್ ಅಂಬರೀಷ್ – ಅವಿವಾ ಮದುವೆ ಬೆಂಗಳೂರಿನಲ್ಲಿ ಜೂನ್ 7 ಕ್ಕೆ, ಮಂಡ್ಯದಲ್ಲಿ ಬೀಗರ ಊಟ !

Abhishek Ambareesh-Aviva Marriage
Image source: Oneindia kannada

Hindu neighbor gifts plot of land

Hindu neighbour gifts land to Muslim journalist

Abhishek Ambareesh-Aviva Marriage : ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ (Abhishek Ambarish) ಅವರ ವಿವಾಹ (Abhishek Ambareesh-Aviva Marriage) ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ನೊಂದೇ ಒಂದು ವಾರದಲ್ಲಿ, ಅಂದರೆ ಇದೇ ಜೂನ್ 5ನೇ ತಾರೀಖು ನಡೆಯಲಿದೆ. ಜೂನ್ 5 ರಂದು ಅಭಿಷೇಕ್ ಮತ್ತು ಅವಿವಾ (Aviva Biddappa)  ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಅಂದರೆ ಜೂನ್ 7 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 17 ಕ್ಕೆ ಮಂಡ್ಯದಲ್ಲಿ ಮಂಡ್ಯದ ವಿಶೇಷವಾದ ಬೀಗರ ಊಟವನ್ನು (Beegara Uta) ಕೂಡಾ ಏರ್ಪಡಿಸಲಾಗಿದೆ.

ಈಗಾಗಲೇ ಬಹುತೇಕ ಆಪ್ತೇಶ್ಟರಿಗೆ ಆಹ್ವಾನ ಪತ್ರಿಕೆ ಹೋಗಿದ್ದು, ಏಪ್ರಿಲ್ 5 ರಂದು ಅಭಿಷೇಕ್ (Abhishek Ambareesh) ಮತ್ತು ಸುಮಲತಾ ಅಂಬರೀಷ್ (Sumalatha Ambareesh) ಪ್ರಧಾನಿ ನರೇಂದ್ರ ಮೋದಿಗೆ ಖುದ್ದಾಗಿ ತೆರಳಿ ಮದುವೆ (Wedding) ಆಮಂತ್ರಣ ಪತ್ರ ನೀಡಿದ್ದಾರೆ. ಅಲ್ಲದೇ ಇತರ ಅನೇಕ ಗಣ್ಯರಿಗೂ ಆಹ್ವಾನ ನೀಡಿದ್ದಾರೆ.

ಅಭಿಷೇಕ್ ಮದುವೆಗೆ ಸಕಲ ಸಿನಿ ನಾಯಕರು ನಾಯಕಿಯರು ಮತ್ತು ಸಿನಿಮಾ ತಂತ್ರಜ್ಞರ ದಂಡೇ ಆಗಮಿಸಲಿದೆ. ಅಲ್ಲದೆ ರಾಜ್ಯದ ಮತ್ತು ಕೇಂದ್ರದ ಹಲವು ರಾಜಕಾರಣಿಗಳು ಪಕ್ಷಾತೀತವಾಗಿ ಬಂದು ವಧು ವರರನ್ನು ಆಶೀರ್ವದಿಸಲಿದ್ದಾರೆ.  ಅಂಬರೀಶ್ ಅವರ ಗೆಳೆಯರಾದ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಸೇರಿದಂತೆ ಬಾಲಿವುಡ್ ನ ಹಲವು ಪ್ರಮುಖ ತಾರೆಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಅಲ್ಲದೆ ಮಂಡ್ಯ ಸುತ್ತಮುತ್ತಲ ಅಂಬರೀಷ್ ಮತ್ತು ಸುಮಲತಾ ಅವರ ಸಹವರ್ತಿಗಳು ಮತ್ತು ಗೆಳೆಯರು ಈ ಮದುವೆಗೆ ಸಾಕ್ಷಿ ಭೂತರಾಗಲಿದ್ದಾರೆ.

ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಅಭಿಷೇಕ್ ಅಂಬರೀಶ್ ಮದುವೆ ಆಗಲಿದ್ದಾರೆ. ಸ್ವತಃ ಡಿಸೈನರ್ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ವಿನ್ಯಾಸ ಮಾಡುತ್ತಿದ್ದಾರಂತೆ. ಯಾವುದೋ ಫ್ಯಾಷನ್ ಈವೆಂಟ್‌ ಒಂದರಲ್ಲಿ ಭೇಟಿಯಾಗಿದ್ದ ಅಭಿಷೇಕ್-ಅವಿವಾ ಜೋಡಿ ಮೂರ್ನಾಲ್ಕು ವರ್ಷ ಜೊತೆಯಾಗಿ ಓಡಾಡಿಕೊಂಡಿದ್ದರು. ಹೀಗೆ ಕೆಲ ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಈಗ ಮದುವೆಗೆ ಸಿದ್ದರಾಗಿದ್ದಾರೆ.

ಇದನ್ನೂ ಓದಿ: ESIC Recruitment 2023: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗವಕಾಶ ; ನೇರ ಸಂದರ್ಶನ- ಕೂಡಲೇ ಅರ್ಜಿ ಸಲ್ಲಿಸಿ!!