Home Breaking Entertainment News Kannada Hyderabad: ಸಿನಿಮಾ ನೋಡಿ ರೊಚ್ಚಿಗೆದ್ದು ಥಿಯೇಟರ್ ನಲ್ಲೇ ಕನ್ನಡದ ಖ್ಯಾತ ನಟನಿಗೆ ಕಪಾಳಪೋಕ್ಷ ಮಾಡಿದ ಮಹಿಳೆ!!

Hyderabad: ಸಿನಿಮಾ ನೋಡಿ ರೊಚ್ಚಿಗೆದ್ದು ಥಿಯೇಟರ್ ನಲ್ಲೇ ಕನ್ನಡದ ಖ್ಯಾತ ನಟನಿಗೆ ಕಪಾಳಪೋಕ್ಷ ಮಾಡಿದ ಮಹಿಳೆ!!

Hindu neighbor gifts plot of land

Hindu neighbour gifts land to Muslim journalist

Hyderabad: ತೆಲಂಗಾಣ ರಾಜಧಾನಿ ಹೈದರಾಬಾದ್(Hyderabad) ನ ಮಾಲ್ ವೊಂದರಲ್ಲಿ ಕನ್ನಡದ ನಟನ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಅಲ್ಲದೆ ಈ ರೀತಿ ಹಲ್ಲೆ ಮಾಡಲು ಕಾರಣ ಏನೆಂದು ಗೊತ್ತಾದ್ರೆ ನೀವೇ ಶಾಕ್ ಆಗ್ತೀರಾ!!

ಹೌದು, ತೆಲುಗಿನ ಲವ್‌ ರೆಡ್ಡಿ(Love Reddy) ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದರು. ಈ ವೇಳೆ ರಾಮಸ್ವಾಮಿ(Ramaswamy) ಅವರ ತಮ್ಮ ಚಿತ್ರತಂಡದ ಜೊತೆ ಹೈದರಾಬಾದ್‌ನಲ್ಲಿರುವ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಪ್ರೇಕ್ಷಕರಿಗೆ ಸರ್ಪ್ರೈಸ್‌ ಕೊಟ್ಟಿದ್ದರು. ಆನಂತರ ವೇದಿಕೆಯಲ್ಲಿ ರಾಮಸ್ವಾಮಿಯವರು ತಮ್ಮ ತಂಡದೊಂದಿಗೆ ವೇದಿಕೆಯಲ್ಲಿ ನಿಂತಿದ್ದಾಗ ಏಕಾಏಕಿ ವೇದಿಕೆಗೆ ಓಡಿ ಬಂದ ಮಹಿಳೆ ರಾಮಸ್ವಾಮಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಕೊನೆಗೆ ಆಕೆಯನ್ನು ಅಲ್ಲಿದ್ದವರು ತಡೆದಿದ್ದು, ರಾಮಸ್ವಾಮಿಯನ್ನು ರಕ್ಷಿಸಿದ್ದಾರೆ.

https://x.com/fuss_official/status/1849700073841754123?t=u-7KFSc3rLAd24_XxE4gUA&s=08

ರಾಮಸ್ವಾಮಿ ಮೇಲೆ ಮಹಿಳೆ ಹಲ್ಲೆನಡೆಸುತ್ತಿದ್ದಂತೆ ನಟರಾದ ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ಕೃಷ್ಣವೇಣಿ ಒಂದು ಕ್ಷಣಕ್ಕೆ ಶಾಕ್‌ ಆಗಿದ್ದಾರೆ. ಕೊನೆಗೆ ಮಹಿಳೆಯನ್ನು ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಚಿತ್ರಮಂದಿರದಿಂದ ಹೊರಗೆಳೆದುಕೊಂಡು ಹೋಗಿದ್ದಾರೆ

ಈ ಕೃತ್ಯಕ್ಕೆ ಕಾರಣ ಏನು?
ಇನ್ನು ವಿಡಿಯೋದಲ್ಲಿ ಮಹಿಳೆ, ರಾಮಸ್ವಾಮಿಗೆ ಕಪಾಳಮೋಕ್ಷ ಮಾಡುವುದನ್ನು ಮಾತ್ರವಲ್ಲದೆ ಆತನ ಕಾಲರ್‌ನಿಂದ ಹಿಡಿದು ತಳ್ಳುವುದನ್ನು ಕಾಣಬಹುದಾಗಿದೆ. ಮಹಿಳೆ ಏಕಾಏಕಿ ದಾಳಿ ನಡೆಸುತ್ತಿದ್ದಂತೆ ರಾಮಸ್ವಾಮಿ ಆತಂಕಕ್ಕೀಡಾಗಿದ್ದರು. ಇನ್ನು ಮಹಿಳೆ ಈ ರೀತಿ ವರ್ತಿಸಲು ಕಾರಣ ಏನೆಂದು ಕೇಳಿದಾಗ ಚಿತ್ರದಲ್ಲಿ ರಾಮಸ್ವಾಮಿ ಖಳನಾಯಕನ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕೆ ರಾಮಸ್ವಾಮಿ ಬಹಳ ಚೆನ್ನಾಗಿ ಜೀವ ತುಂಬಿದ್ದರು. ಆ ಪಾತ್ರ ನೋಡುವವರಿಗೆ ಕ್ರೋಧವುಂಟಾಗುವುದು ಸಹಜ. ಈ ಕಾರಣಕ್ಕಾಗಿಯೇ ಮಹಿಳೆ ಕೋಪದಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.