Home Business Spam Call: ನಂಬರ್ ಸೇವ್ ಮಾಡದಿದ್ರೂ ಫೋನ್ ಬಂದಾಗ ಹೆಸರು ಕಾಣುತಿದೆಯೇ? ಹಾಗಿದ್ರೆ ಇನ್ನು ನಿಮಗಿರಲ್ಲ...

Spam Call: ನಂಬರ್ ಸೇವ್ ಮಾಡದಿದ್ರೂ ಫೋನ್ ಬಂದಾಗ ಹೆಸರು ಕಾಣುತಿದೆಯೇ? ಹಾಗಿದ್ರೆ ಇನ್ನು ನಿಮಗಿರಲ್ಲ ಬಿಡಿ ‘ಸ್ಪ್ಯಾಮ್’ ಕರೆಗಳ ಕಾಟ

Hindu neighbor gifts plot of land

Hindu neighbour gifts land to Muslim journalist

Spam Call: ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಕರೆ ಬಂದ ಸಂದರ್ಭದಲ್ಲಿ ನೀವು ಸೇವ್ ಮಾಡದಿರುವ ನಂಬರ್ ನಲ್ಲಿಯೂ ಹೆಸರು ತೋರಿಸುತ್ತಿದೆ ಅಲ್ಲವೇ? ಏನಪ್ಪಾ ಹೀಗೆ.. ಇದು ಯಾವುದೋ ವಂಚನೆಯೋ ಎಂದು ಭಯಪಡುತ್ತಿದ್ದೀರಾ? ಹಾಗಿದ್ರೆ ಡೋಂಟ್ ವರಿ. ಇದು ಕೇಂದ್ರ ಸರ್ಕಾರ ಸ್ಪ್ಯಾಮ್ ಕರೆಗಳನ್ನು ತಡೆಯಲು ತಂದಿರುವ ಹೊಸ ಯೋಜನೆ. ಅಂದರೆ ಇನ್ನು ಮುಂದೆ ಯಾವುದೇ ಅಪರಿಚಿತ ನಂಬರ್ ಗಳಿಂದ ಫೋನ್ ಬಂದ್ರೂ ನಿಮಗೆ ಅವರ ಹೆಸರು ಕಾಣುತ್ತದೆ.

ಹೌದು, ಕೇಂದ್ರ ಸರ್ಕಾರವು ಸ್ಪ್ಯಾನ್ ಕರೆಗಳಿಗೆ ಬ್ರೇಕ್ ಹಾಕುವಂತ ನಿರ್ಧಾರ ಕೈಗೊಂಡಿತ್ತು. ಅದರಂತೆ ಈಗ ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಬಿದ್ದಿದ್ದು, ಈಗ ನಿಮಗೆ ಬರುವಂತ ಕರೆ ಯಾರದ್ದೆಂದು ಹೆಸರೇ ನಿಮ್ಮ ಪೋನಿನಲ್ಲಿ ಡಿಸ್ಪ್ಲೆ ಆಗುವಂತೆ ಆಗಿದೆ. ಹೀಗಾಗಿ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ನಂಬರ್ ಸೇವ್ ಇರದ ಸಂಖ್ಯೆಗಳಿಂದ ಕರೆ ಬಂದರೇ, ಕರೆ ಮಾಡುತ್ತಿರುವಂತ ವ್ಯಕ್ತಿಯ ಹೆಸರು ಏನು ಎಂಬುದಾಗಿ ಪ್ರದರ್ಶಿಸಲ್ಪಡುತ್ತಿದೆ.

ಟೆಲಿಕಾಂ ಕಂಪನಿಗಳಿಗೆ ಸಿಮ್ ಖರೀದಿಸುವಂತ ಸಂದರ್ಭದಲ್ಲಿ ಗ್ರಾಹಕರು ನೀಡಿದಂತ ದಾಖಲೆಯ ಆಧಾರದಲ್ಲಿ ಹೆಸರನ್ನು ನೋಂದಾಯಿಸಲಾಗಿರುತ್ತದೆ. ಗ್ರಾಹಕರ ದಾಖಲೆಯಲ್ಲಿ ಇರುವಂತ ಹೆಸರಿನಂತೆಯೇ ಈಗ ಅನಾಮದೇಯ ನಂಬರ್ ಗಳಿಂದ ಕರೆ ಬಂದರೂ, ಕರೆ ಮಾಡುತ್ತಿರುವಂತ ವ್ಯಕ್ತಿಯ ಹೆಸರು ಏನು ಎನ್ನುವುದನ್ನು ಮೊಬೈಲ್ ಡಿಸ್ಪ್ಲೆ ಮೇಲೆ ತೋರಿಸಲಾಗುತ್ತಿದೆ. ಆ ಮೂಲಕ ಸ್ಪ್ಯಾಮ್ ಕರೆಗಳಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಟ್ರಾಯ್ಡ್ ನಿರ್ದೇಶದನಂತೆ ಟೆಲಿಕಾಂ ಕಂಪನಿಗಳು ಬ್ರೇಕ್ ಹಾಕಿದ್ದಾವೆ.