Home Business Sim Card: ನಿಮ್ಮ ಹೆಸರಲ್ಲಿ ಬೇರೆಯವರು ಸಿಮ್ ಯೂಸ್ ಮಾಡ್ತಿದ್ದಾರಾ? ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ, ಸಂಕಷ್ಟದಿಂದ...

Sim Card: ನಿಮ್ಮ ಹೆಸರಲ್ಲಿ ಬೇರೆಯವರು ಸಿಮ್ ಯೂಸ್ ಮಾಡ್ತಿದ್ದಾರಾ? ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ, ಸಂಕಷ್ಟದಿಂದ ಪಾರಾಗಿ

Hindu neighbor gifts plot of land

Hindu neighbour gifts land to Muslim journalist

Sim Card: ಮೊಬೈಲಿಗೆ ಸಿಮ್ ಪಡೆದುಕೊಳ್ಳುವಾಗ ನಮ್ಮ ಆಧಾರ್ ಕಾರ್ಡನ್ನು ದಾಖಲೆಯಾಗಿ ಕೊಟ್ಟು ಖರೀದಿಸಬೇಕಾಗುತ್ತದೆ. ಆದರೆ ಇಂದು ವಂಚಿಕರು ಬೇರೆಯವರ ದಾಖಲೆಗಳನ್ನು, ಆಧಾರ್ ಕಾರ್ಡ್ ಗಳನ್ನು ಕೊಟ್ಟು ಸಿಮ್ ಪಡೆದು ಅನೇಕರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಅಡ್ರೆಸ್ ಬಳಸಿ ಬೇರೆಯವರು ಸಿಮ್ ಯೂಸ್ ಮಾಡುತ್ತಿದ್ದಾರೆ ಎಂಬ ಅನುಮಾನ ನಿಮಗೆ ಏನಾದರೂ ಮೂಡಿದೆಯಾ? ಹಾಗಿದ್ದರೆ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ, ಸಂಕಷ್ಟದಿಂದ ಪಾರಾಗಿ.

ಹೌದು, ಒಂದು ವೇಳೆ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಸಿ કોઈ ಅಪರಾಧ ನಡೆದರೆ, ಕಾನೂನಿನ ಪ್ರಕಾರ ಮೊದಲ ಆರೋಪಿ ನೀವೇ ಆಗುತ್ತೀರಿ. ಇದು ನಿಮ್ಮನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಅಥವಾ ಜೈಲು ಶಿಕ್ಷೆಗೆ ಗುರಿಪಡಿಸಬಹುದು. ಈ ಗಂಭೀರ ಸಮಸ್ಯೆಯಿಂದ ಪಾರಾಗಲು, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಸಕ್ರಿಯವಾಗಿವೆ ಎಂದು ಪರಿಶೀಲಿಸುವುದು ಅತ್ಯಂತ ಅವಶ್ಯಕ. ಇದಕ್ಕಾಗಿ ಸರ್ಕಾರವೇ ಒಂದು ಸುಲಭ ಮಾರ್ಗವನ್ನು ಒದಗಿಸಿದೆ.

ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸುವುದು ಹೇಗೆ?
ಹಂತ 1: ಮೊದಲಿಗೆ ಸರ್ಕಾರದ ಅಧಿಕೃತ ವೆಬ್‌ಸೈಟ್ https://tafcop.sancharsaathi.gov.in/telecomUser ಗೆ ಭೇಟಿ ನೀಡಿ.
ಹಂತ 2: ತೆರೆದ ಪುಟದಲ್ಲಿ, ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ, ಪರದೆಯ ಮೇಲೆ ಕಾಣುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ‘Validate Captcha’ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಮೊಬೈಲ್‌ಗೆ ಒಂದು OTP (ಒನ್ ಟೈಮ್ ಪಾಸ್‌ವರ್ಡ್) ಬರುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ ‘Login’ ಬಟನ್ ಒತ್ತಿರಿ.
ಹಂತ 4: ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಯ ಮೇಲೆ ನೋಂದಣಿಯಾಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಕಾಣಿಸುತ್ತದೆ.