Home Business Post Office Scheme : ಅಂಚೆ ಕಚೇರಿಯ ಹೊಸ ಸ್ಕೀಮ್‌, ಬಡ್ಡಿ ದರ ಹೆಚ್ಚಳದ ಜೊತೆ,...

Post Office Scheme : ಅಂಚೆ ಕಚೇರಿಯ ಹೊಸ ಸ್ಕೀಮ್‌, ಬಡ್ಡಿ ದರ ಹೆಚ್ಚಳದ ಜೊತೆ, ಹಣ ದ್ವಿಗುಣ

Hindu neighbor gifts plot of land

Hindu neighbour gifts land to Muslim journalist

Post Office New Scheme: ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ. ಉಳಿತಾಯ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ. ಆದರೆ, ನೀವು ಹೂಡಿಕೆ ಮಾಡಲು ಬಯಸಿದ್ದರೆ ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ (Post Office New Scheme) ಬಗ್ಗೆ ಮಾಹಿತಿ ತಿಳಿದುಕೊಂಡರೆ ಒಳ್ಳೆಯದು.

ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಸರ್ಕಾರಿ (Government) ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Private Bank) ಖಾತೆಗಳ ಇಲ್ಲವೇ ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯಬಹುದಾಗಿದೆ. ನೀವೇನಾದರೂ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ತೆರೆಯಲು ಯೋಚಿಸುತ್ತಿದ್ದರೆ, ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

Post Office Scheme: ಗ್ರಾಹಕರಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಅನೇಕ ಉಳಿತಾಯ ಯೋಜನೆಗಳಿದ್ದು, ನಿಶ್ಚಿತ ಲಾಭದ ಜೊತೆಗೆ ಭದ್ರತೆ ಪಡೆಯುವುದಲ್ಲದೇ ತೆರಿಗೆ ವಿನಾಯಿತಿ ಕೂಡ ಪಡೆಯಬಹುದು. ಪೋಸ್ಟ್ ಆಫೀಸ್ ನ ಈ ಹೊಸ ಸ್ಕೀಮಿನ ಮೂಲಕ ಕೇವಲ 120 ತಿಂಗಳುಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಬಹುದು. ಅರೇ, ಈ ಯೋಜನೆ ಯಾವುದು ಅಂತ ಯೋಚಿಸುತ್ತಿದ್ದೀರಾ?

ಪೋಸ್ಟ್ ಆಫೀಸ್ ನ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 7.20 ರವರೆಗೆ ಬಡ್ಡಿ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೆ ಅಲ್ಲದೇ, 120 ತಿಂಗಳುಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ದುಪಟ್ಟು ಹಣ ಪಡೆಯಬಹುದು.
ಹಾಗಿದ್ರೆ, ಈ ಯೋಜನೆಗೆ ಖಾತೆ ತೆರೆಯುವುದು ಹೇಗೆ? ಎಂಬ ಪ್ರಶ್ನೆ ಸಹಜವಾಗಿ ನಿಮ್ಮನ್ನು ಕಾಡಬಹುದು.
ಈ ಯೋಜನೆಗೆ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹೂಡಿಕೆಯನ್ನು ಠೇವಣಿ ಮಾಡಬೇಕಾಗಿದ್ದು, ಇಲ್ಲಿ ನಿಮ್ಮ ಗುರುತಿನ ಚೀಟಿಯನ್ನು ಹಾಕಬೇಕಾಗಿದ್ದು, ಅರ್ಜಿ ಸಲ್ಲಿಸಿದ ತಕ್ಷಣ ಕಿಸಾನ್ ವಿಕಾಸ್ ಪ್ರಮಾಣಪತ್ರ ನಿಮಗೆ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ, 10 ವರ್ಷಗಳ ಬಳಿಕ ಕೂಡ ಖಾತೆಯನ್ನು ಮುಂದುವರೆಸಿಕೊಂಡು ಹೋಗಲು ಅವಕಾಶವಿದೆ.

ಹಾಗಿದ್ರೆ, ಹಣ ದ್ವಿಗುಣಗೊಳಿಸುವುದು ಹೇಗೆ ?

ಈ ಯೋಜನೆಯಲ್ಲಿ ಒಂದು ವೇಳೆ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ನೀವು 120 ತಿಂಗಳುಗಳಲ್ಲಿ 7.2 ಶೇಕಡಾ ಬಡ್ಡಿಯನ್ನು ಪಡೆಯಲು ಅರ್ಹರಾಗುತ್ತಿರಿ. ಇದಲ್ಲದೇ, ನೀವು ಹೂಡಿಕೆ ಮಾಡಿದ ಹಣವು 120 ತಿಂಗಳುಗಳಲ್ಲಿ ದ್ವಿಗುಣಗೊಂಡು 10 ಲಕ್ಷ ಹೂಡಿಕೆ ಮಾಡಿದ್ದರೆ ನಿಮಗೆ 20 ಲಕ್ಷ ರೂಪಾಯಿಗಳು ಲಭ್ಯವಾಗುತ್ತವೆ.