Home Business G20 ಶೃಂಗಸಭೆಯಲ್ಲಿ ಇಂಡಿಯಾ ಬದಲು ʼಭಾರತ್‌ʼ ನಾಮಫಲಕ!!! ಮೋದಿ ಮುಂದೆ ರಾರಾಜಿಸಿದ ʼಭಾರತ್‌ʼ

G20 ಶೃಂಗಸಭೆಯಲ್ಲಿ ಇಂಡಿಯಾ ಬದಲು ʼಭಾರತ್‌ʼ ನಾಮಫಲಕ!!! ಮೋದಿ ಮುಂದೆ ರಾರಾಜಿಸಿದ ʼಭಾರತ್‌ʼ

Hindu neighbor gifts plot of land

Hindu neighbour gifts land to Muslim journalist

ಜಿ-20 ಶೃಂಗಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಮುಂದಿದ್ದ ನಾಮಫಲಕದಲ್ಲಿ ʼಭಾರತ್‌ʼ ಎಂದು ಬರೆದಿದ್ದು, ಎಲ್ಲರ ಗಮನ ಸೆಳೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿ-20 ಶೃಂಗಸಣೆ ನಡೆಯಲಿದೆ.

ಜಿ-20 ಅಧ್ಯಕ್ಷತೆವನ್ನು ಭಾರತ ವಹಿಸಿದ್ದು, ದೆಹಲಿಯ ‘ಭಾರತ್’ ಮಂಟಪದಲ್ಲಿ ವಾರ್ಷಿಕ ಶೃಂಗಸಭೆ ನಡೆಯುತ್ತಿದೆ. ಈ ಸಭೆಯನ್ನು ಉದ್ದೇಶಿಸಿ ಆರಂಭಿಕ ಮಾತುಗಳನ್ನಾಡಿದ ಪ್ರಧಾನಿ ಮೋದಿ ಅವರ ಮುಂಭಾಗದಲ್ಲಿ ‘ಭಾರತ’ ಹೆಸರಿನ ಪ್ರದರ್ಶನ ಮಾಡಲಾಗಿದೆ.

ಸಂಸತ್‌ ಅಧಿವೇಶನದಲ್ಲಿ ಇಂಡಿಯಾ-ಭಾರತ್‌ ಚರ್ಚೆ ನಡೆದಿದೆ. ಹಾಗಾಗಿ ಅಧಿವೇಶನದಲ್ಲಿ ಹೆಸರು ಬದಲಾವಣೆ ಮಸೂದೆ ಅಂಗೀಕರಿಸಬಹುದು ಎಂಬ ವದಂತಿ ಹರಡಿದ್ದು, ಭಾರತ್‌ ಹೆಸರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಸೂಚಿಸಿದೆ.