Home Business ಪ್ರಯಾಣಿಕರ ಗಮನಕ್ಕೆ; ತೀರ್ಥಕ್ಷೇತ್ರಗಳಿಗೆ ಹೋಗಲು  IRCTC ಯಿಂದ ಭರ್ಜರಿ ಪ್ಯಾಕೇಜ್

ಪ್ರಯಾಣಿಕರ ಗಮನಕ್ಕೆ; ತೀರ್ಥಕ್ಷೇತ್ರಗಳಿಗೆ ಹೋಗಲು  IRCTC ಯಿಂದ ಭರ್ಜರಿ ಪ್ಯಾಕೇಜ್

Hindu neighbor gifts plot of land

Hindu neighbour gifts land to Muslim journalist

ತೀರ್ಥಯಾತ್ರೆಗೆ ಹೋಗಬೇಕು ಎಂದು ಕೊಂಡವರಿಗೆ IRCTC ಒಳ್ಳೆ ಯೋಜನೆ ರೂಪಿಸಿದ್ದು, ಕಡಿಮೆ ಬೆಲೆಯಲ್ಲಿ ಸುರಕ್ಷಿತವಾಗಿ ಹೋಗಿ ಬರಬಹುದು. ಯೋಜನೆ ಏನು ? ಎಲ್ಲೆಲ್ಲಿ ? ಹಣ ಎಷ್ಟು ? ಇಲ್ಲಿದೆ ನೋಡಿ ವಿವರವಾದ ಮಾಹಿತಿ,

IRCTCಯ  ಪ್ಯಾಕೇಜ್‌ನಲ್ಲಿ ಪ್ರವಾಸಿಗರು ರಾಮಜನ್ಮ ಭೂಮಿ ದರ್ಶನ, ಪುರಿ, ಗಂಗಾಸಾಗರಕ್ಕೆ ಪ್ರಯಾಣಿಸಬಹುದು.
ಈ ರೈಲು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವು ನಗರಗಳ ಮೂಲಕ ಸಂಚರಿಸಲಿದೆ.  ಈ ರೈಲು ಯಾತ್ರಾರ್ಥಿಗಳನ್ನು ಅಯೋಧ್ಯೆ, ವಾರಣಾಸಿ, ಬೈದ್ಯನಾಥ, ಗಂಗಾಸಾಗರ, ಪುರಿ, ಕೋನಾರ್ಕ್, ಗಯಾ ಮತ್ತು ಕೋಲ್ಕತ್ತಾದ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯಲಿದೆ.

ಈ ರೈಲು ಮಾರ್ಚ್ 22ರಂದು ಹೊರಡಲಿದ್ದು, ಮಾರ್ಚ್ 31 ರಂದು ಪ್ರಯಾಣವು ಕೊನೆಗೊಳ್ಳುತ್ತದೆ. ಈ ಪ್ಯಾಕೇಜ್ ನಡಿ ಪ್ರತಿದಿನಕ್ಕೆ ಪ್ರಯಾಣಿಕರಿಗೆ ಕೇವಲ 1 ಸಾವಿರ ರೂ. ವೆಚ್ಚವಾಗುತ್ತದೆ. ಈ ಸಂಪೂರ್ಣ ಪ್ಯಾಕೇಜ್ ನ ಬೆಲೆ ಕೇವಲ 9,450 ರೂ. ಆಗಿರುತ್ತದೆ. ಈ ಪ್ಯಾಕೇಜ್ ನಲ್ಲಿ ಪ್ರಯಾಣಿಕರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಇರುತ್ತದೆ.ಈ ಪ್ಯಾಕೇಜ್‌ನಲ್ಲಿ ಸ್ಥಳೀಯ ಸಾರಿಗೆ ಮತ್ತು ಮಾರ್ಗದರ್ಶಿ ಶುಲ್ಕಗಳನ್ನು ಸಹ ಸೇರಿಸಲಾಗಿದೆ.