Home Business HDFC -SBI Bank : ಎಚ್‌ಡಿಎಫ್‌ಸಿ, ಎಸ್‌ಬಿಐ ಫ್ರೆಶರ್ಸ್‌ಗಳಿಗೆ ದೊರಕುವ ಸರಾಸರಿ ವೇತನ ಎಷ್ಟು? ಇಂಟೆರೆಸ್ಟಿಂಗ್‌...

HDFC -SBI Bank : ಎಚ್‌ಡಿಎಫ್‌ಸಿ, ಎಸ್‌ಬಿಐ ಫ್ರೆಶರ್ಸ್‌ಗಳಿಗೆ ದೊರಕುವ ಸರಾಸರಿ ವೇತನ ಎಷ್ಟು? ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ

HDFC -SBI Bank

Hindu neighbor gifts plot of land

Hindu neighbour gifts land to Muslim journalist

HDFC – SBI Bank: ಎಚ್‌ಡಿಎಫ್‌ಸಿ, ಎಸ್‌ಬಿಐ ಬ್ಯಾಂಕ್ ಗಳ (HDFC – SBI Bank) ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಬ್ಯಾಂಕ್ ಗಳು ಹುದ್ದೆ ಖಾಲಿ ಇದ್ದರೆ ನೇಮಕ ಪ್ರಕ್ರಿಯೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಆದರೆ, ಈ ಎಚ್‌ಡಿಎಫ್‌ಸಿ, ಎಸ್‌ಬಿಐ ಬ್ಯಾಂಕ್ ಗಳಲ್ಲಿ ಫ್ರೆಶರ್ಸ್‌ಗಳಿಗೆ ದೊರಕುವ ಸರಾಸರಿ ವೇತನ (HDFC – SBI Bank freshers salary) ಎಷ್ಟು ಗೊತ್ತಿದೆಯಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಚ್ ಡಿಎಫ್ ಸಿ ಬ್ಯಾಂಕ್ (HDFC bank) ಭಾರತದ ಒಂದು ಪ್ರಖ್ಯಾತ ಪ್ರೈವೇಟ್ ಸೆಕ್ಟಾರ್ ಬ್ಯಾಂಕ್‌ ಆಗಿದೆ. ಇದು ಹಣಕಾಸು ಸೇವೆಗಳು ಹಾಗೂ ಉತ್ಪನ್ನ ಸೇವೆಗಳನ್ನು ನೀಡುತ್ತಿದೆ. ಈ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿದ ಸಿಬ್ಬಂದಿಗಳಾದ ಫ್ರೆಶರ್‌ಗಳಿಗೆ ದೊರಕುವ ಸರಾಸರಿ ವೇತನ (salary) ಎಷ್ಟು? ಫ್ರೆಶರ್‌ಗಳಿಗೆ ವಾರ್ಷಿಕ ವೇತನ ರೂ.4.5 ಲಕ್ಷದವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಆದರೆ, ಈ ವೇತನ ಉದ್ಯೋಗಿಯ ಶೈಕ್ಷಣಿಕ ಅರ್ಹತೆ, ಯಾವ ಹುದ್ದೆ, ಅಭ್ಯರ್ಥಿಯ ಸ್ಕಿಲ್‌ಗಳು ಇವೆಲ್ಲದರ ಆಧಾರದ ಮೇಲೆ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) (SBI) ಭಾರತೀಯ ಬಹುರಾಷ್ಟ್ರೀಯ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಶಾಸನಬದ್ಧ ಸಂಸ್ಥೆಯಾಗಿದೆ. SBI ಭಾರತದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ನಲ್ಲಿ ಉದ್ಯೋಗಕ್ಕಾಗಿ ಸೇರುವ
ಫ್ರೆಶರ್‌ಗಳಿಗೆ ದೊರಕುವ ಸರಾಸರಿ ವೇತನ ಎಷ್ಟು ಗೊತ್ತಾ? ಇವರಿಗೆ
ವಾರ್ಷಿಕ ವೇತನ ರೂ.3.5 ಲಕ್ಷ ಇರುತ್ತದೆ ಎನ್ನಲಾಗಿದೆ. ಆದರೆ, ಈ ವೇತನ ಉದ್ಯೋಗಿಯ ಶೈಕ್ಷಣಿಕ ಅರ್ಹತೆ, ಯಾವ ಹುದ್ದೆ, ಅಭ್ಯರ್ಥಿಯ ಕೌಶಲ್ಯ ಇವೆಲ್ಲದರ ಆಧಾರದ ಮೇಲೆ ಸಿಗುತ್ತದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಫ್ರೆಶರ್‌ಗಳಿಗೆ ಯಾವೆಲ್ಲ ಹುದ್ದೆಗಳಿರುತ್ತವೆ?
• ಫೋನ್‌ ಬ್ಯಾಂಕಿಂಗ್ ಆಫೀಸರ್
• ಸೇಲ್ಸ್‌ ಎಕ್ಸಿಕ್ಯೂಟಿವ್
• ಇನ್ಸುರೆನ್ಸ್‌ ಅಡ್ವೈಸರ್
• ಜೂನಿಯರ್ ಪ್ರೋಸೆಸ್ ಅಸೋಸಿಯೇಟ್
• ಎಜುಕೇಷನ್ ಕೌನ್ಸಿಲರ್
• ವರ್ಚುವಲ್ ರಿಲೇಶನ್ಶಿಪ್ ಬ್ಯಾಂಕಿಂಗ್
• ಕಸ್ಟಮರ್ ರಿಲೇಶನ್ಶಿಪ್‌ ಮ್ಯಾನೇಜರ್

ಎಸ್‌ಬಿಐ ಬ್ಯಾಂಕ್ ಉದ್ಯೋಗಿಗಳನ್ನು ಹೇಗೆ ಪ್ರಮೋಟ್ ಮಾಡುತ್ತದೆ?

ಕ್ಲರ್ಕ್‌ ಹುದ್ದೆಯಿಂದ ಆಫೀಸರ್ ಹುದ್ದೆಗೆ ಬಡ್ತಿ ನೀಡಲು ಟ್ರೈನಿ ಆಫೀಸರ್ ಆಗಿ ಅಥವಾ ಜೆಎಂಜಿ ಸ್ಕೇಲ್‌ 1 ಆಫೀಸರ್ ಆಗಿ ಪ್ರಮೋಟ್‌ ಮಾಡಲಾಗುತ್ತದೆ. ಇದಕ್ಕೆ ಮೂರು ವರ್ಷ ಕಾರ್ಯದಕ್ಷತೆ ಮೌಲ್ಯೀಕರಣ ಇರುತ್ತದೆ.

CAIIB ಪಾಸಾಗಿದ್ದರೆ 3 ವರ್ಷದೊಳಗೆ ಆಫೀಸರ್ ಹುದ್ದೆಗೆ ಬಡ್ತಿ ಪಡೆಯಬಹುದು. JAIIB ಪಾಸಾಗಿದ್ದರೆ 4 ವರ್ಷ ಅವಧಿಯಲ್ಲಿ ಪ್ರಮೋಷನ್‌ ಸಿಗುತ್ತದೆ. ಪ್ರಮೋಷನ್‌ಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಇರುತ್ತದೆ. ಈ ಪರೀಕ್ಷೆಯಲ್ಲಿ ಪಾಸಾಗದಿದ್ದರೆ 6 ವರ್ಷ ಪ್ರಮೋಷನ್‌ಗೆ ಕಾಯಬೇಕಾಗುತ್ತದೆ.

ಸ್ಕೇಲ್‌ 1 ನಿಂದ ಹೈಯರ್ ಸ್ಕೇಲ್‌ ಆಫೀಸರ್ ಹುದ್ದೆಗೆ ಪ್ರಮೋಷನ್ ನೀಡಲು ಫಾಸ್ಟ್‌ ಟ್ರ್ಯಾಕ್‌ ಹಾಗೂ ನಾರ್ಮಲ್ ಟ್ರ್ಯಾಕ್ ಪ್ರಕ್ರಿಯೆ ಅನುಸರಿಸಲಾಗುತ್ತದೆ. ಫಾಸ್ಟ್‌ ಟ್ರ್ಯಾಕ್‌ ವಿಧಾನವಾದರೆ, ಹೈಯರ್ ಸ್ಕೇಲ್‌ ಆಫೀಸರ್ ಹುದ್ದೆಗೆ 19 ತಿಂಗಳೊಳಗೆ ಪ್ರಮೋಷನ್ ಸಿಗುತ್ತದೆ.
ಇಲ್ಲವಾದರೆ ಮತ್ತೆರಡು ವರ್ಷ ಪ್ರಮೋಷನ್ ಗೆ ಕಾಯಬೇಕು.

ಇದನ್ನೂ ಓದಿ: Karnataka Bank : ನೀವು ಕರ್ನಾಟಕ ಬ್ಯಾಂಕ್ ಗ್ರಾಹಕರಾಗಿದ್ದರೆ ಈ ಸುದ್ದಿ ನಿಮಗೋಸ್ಕರ!