Home Business ಗುರುವಾಯೂರಪ್ಪನಿಗೆ 98 ಗ್ರಾಂನ 2 ಚಿನ್ನದ ಹಾರ ಕಾಣಿಕೆ

ಗುರುವಾಯೂರಪ್ಪನಿಗೆ 98 ಗ್ರಾಂನ 2 ಚಿನ್ನದ ಹಾರ ಕಾಣಿಕೆ

Gold Rate

Hindu neighbor gifts plot of land

Hindu neighbour gifts land to Muslim journalist

ಗುರುವಾಯೂರು: ಗುರುವಾಯೂರಪ್ಪನಿಗೆ ಕಾಣಿಕೆಯಾಗಿ 98ಗ್ರಾಂ ತೂಕದ ಎರಡು ಚಿನ್ನದ ಹಾರಗಳನ್ನು ಗುರುವಾಯೂರು ಕಾರಕ್ಕಾಟ್ ರಸ್ತೆಯ ಶ್ರೀನಿಧಿ ತರವಾಡು ಮನೆಯ ಎ.ಶಿವಕುಮಾ‌ರ್ ದಂಪತಿ ಸಮರ್ಪಿಸಿದ್ದಾರೆ.

ಲಕ್ಷ್ಮಿದೇವಿಯ ರೂಪವನ್ನು ಕೆತ್ತಿದ ಲಾಕೆಟ್, ಮುತ್ತು ರತ್ನಗಳಿಂದ ಪೋಣಿಸಲಾದ 57 ಗ್ರಾಂ ಚಿನ್ನದ ಹಾರ ಮತ್ತು ಗಣೇಶನ ರೂಪವನ್ನು ಕೆತ್ತಲಾದ ಲಾಕೆಟ್ ಹೊಂದಿರುವ 41 ಗ್ರಾಂ ತೂಕದ ಚಿನ್ನದ ಹಾರಗಳನ್ನು ಅರ್ಪಿಸಿದ್ದಾರೆ.

ಹಾರ ಸ್ವೀಕರಿಸಿದ ದೇಗುಲದ ಉಪ ಆಡಳಿತಾಧಿ ಕಾರಿ ಪ್ರಮೋದ್ ಕಳರಿಕ್ಕಲ್, ದಾನಿಗಳಿಗೆ ರಶೀದಿ ನೀಡಿದರು. ತಿರುಮುಡಿ ಹಾರ, ಕಳಭ ಮತ್ತು ಕಲ್ಲು ಸಕ್ಕರೆ ಒಳಗೊಂಡ ಗುರುವಾಯೂರಪ್ಪನ ಪ್ರಸಾದ ಅರ್ಪಿಸಿದರು.