Home Business Facebook and Instagram users : ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿ ಸುದ್ದಿ! ನೀವು ಬ್ಲೂಟಿಕ್‌...

Facebook and Instagram users : ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿ ಸುದ್ದಿ! ನೀವು ಬ್ಲೂಟಿಕ್‌ ನ ಹೀಗೆ ಪಡೆದುಕೊಳ್ಳಬಹುದು

Facebook and Instagram users

Hindu neighbor gifts plot of land

Hindu neighbour gifts land to Muslim journalist

Facebook and Instagram users: ಫೆಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗುವ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಮೆಟಾ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಸೌಲಭ್ಯ ಪಡೆದುಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಟ್ಟಿದೆ.

ಇನ್ಮುಂದೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾ‌ಗ್ರಾಮ್‌ ಬಳಕೆದಾರರು (Facebook and Instagram users) ಸಹ ಈ ಬ್ಲೂಟಿಕ್‌ ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ತಮ್ಮ ಖಾತೆಯನ್ನು ಅಧಿಕೃತ ಮಾಡಿಕೊಳ್ಳಬಹುದಾಗಿದೆ. ಯಾರೆಲ್ಲಾ ಇದಕ್ಕೆ ಅರ್ಹರು?, ಈ ಸೇವೆ ಪಡೆದುಕೊಳ್ಳಲು ಎಷ್ಟು ಹಣ ಪಾವತಿ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಇನ್‌ಸ್ಟಾಗ್ರಾಮ್‌ ನೀತಿಯ ಪ್ರಕಾರ ಮಾಧ್ಯಮ ಸಂಸ್ಥೆಗಳು, ಪ್ರಭಾವಿಗಳು, ಪ್ರಸಿದ್ಧ ವ್ಯಕ್ತಿಗಳು ಮತ್ತು ರಾಜಕಾರಣಿಗಳು ತಮ್ಮ ಖಾತೆಯಲ್ಲಿರುವ ಅವರ ಹೆಸರಿನ ಪಕ್ಕದಲ್ಲಿ ಈ ಬ್ಲೂಟಿಕ್‌ ಅನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಯಾರೆಲ್ಲಾ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಖಾತೆದಾರರು ಬ್ಲೂಟಿಕ್‌ ಪಡೆಯಲು ಇಚ್ಚಿಸುತ್ತಾರೋ ಅವರು ಹಣ ಪಾವತಿ ಮಾಡುವ ಮೂಲಕ ಈ ಸೇವೆ ಪಡೆದುಕೊಳ್ಳಬಹುದು ಎಂದು ಮೆಟಾ ತಿಳಿಸಿದೆ. ಈ ಬ್ಲೂಟಿಕ್‌ ಅನ್ನು ಖರೀದಿ ಮಾಡಿದ ಬಳಕೆದಾರರ ಪ್ರೊಫೈಲ್‌ ಮೇಲೆ ಬ್ಲೂಟಿಕ್‌ಕಾಣಿಸಿಕೊಳ್ಳಲಿದೆ.

ಈ ಸೇವೆ ಪಡೆದುಕೊಳ್ಳಬೇಕಾದರೆ ಬಳಕೆದಾರರು ತಿಂಗಳಿಗೆ 989ರೂ. ಗಳನ್ನು ಪಾವತಿ ಮಾಡಬೇಕಿದೆ. ಇನ್ನು ಈ ಬ್ಲೂ ಚೆಕ್‌ಮಾರ್ಕ್ ಪರಿಶೀಲನೆ ಬ್ಯಾಡ್ಜ್ ಆಗಿದ್ದು, ಅದು ಖಾತೆಯು ಅಧಿಕೃತವಾಗಿದೆ ಮತ್ತು ಸಾರ್ವಜನಿಕ ವ್ಯಕ್ತಿ, ಸೆಲೆಬ್ರಿಟಿ ಅಥವಾ ಬ್ರಾಂಡ್‌ಗೆ ಸೇರಿದ ಖಾತೆ ಎಂದು ಸೂಚಿಸುತ್ತದೆ.

ಕೆಲವು ನೀತಿ ನಿಯಮಗಳ ಪ್ರಕಾರ 18 ವರ್ಷ ಮೀರಿದವರು ಮಾತ್ರ ಈ ಬ್ಲೂಟಿಕ್‌ ಸೇವೆ ಪಡೆದುಕೊಳ್ಳಲು ಅರ್ಹರು ಎಂದು ಮೆಟಾ ತಿಳಿಸಿದೆ. ಇದಕ್ಕಾಗಿ ಬಳಕೆದಾರರು ಫೋಟೋ ಐಡಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಜೊತೆಗೆ ಮೆಟಾ ನಡೆಸುವ ಕೆಲವು ಪರಶೀಲನಾ ಹಂತಗಳಲ್ಲಿ ಪಾಸ್‌ ಆಗಬೇಕಿದೆ. ಇದಾದ ನಂತರ ಅರ್ಹತೆ ಇದ್ದರೆ ಮಾತ್ರ ಈ ಟಿಕ್‌ ಲಭ್ಯವಾಗುತ್ತದೆ.