Home Business Dairy farming: ಕುರಿ, ಕೋಳಿ, ಮೇಕೆ ಸಾಕೋರಿಗೆ ಭರ್ಜರಿ ಆಫರ್ – ಕೇಂದ್ರದಿಂದ 50% ಸಬ್ಸಿಡಿ...

Dairy farming: ಕುರಿ, ಕೋಳಿ, ಮೇಕೆ ಸಾಕೋರಿಗೆ ಭರ್ಜರಿ ಆಫರ್ – ಕೇಂದ್ರದಿಂದ 50% ಸಬ್ಸಿಡಿ ಘೋಷಣೆ, ಹೀಗೆ ಅರ್ಜಿ ಸಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

Dairy farming: ಸ್ವಂತ ಉದ್ಯೋಗ ಮಾಡುವವರಿಗೆ ಸರ್ಕಾರ ಮೊದಲಿಂದ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಸಾಲ ಸೌಲಭ್ಯ, ಲೋನ್ ನೀಡುವುದು, ಸಬ್ಸಿಡಿಗಳನ್ನು ನೀಡುವುದು ಹೀಗೆ ಒಂದೊಂದು ರೀತಿಯಲ್ಲೂ ಜನರಿಗೆ ಸರ್ಕಾರ ನೆರವಾಗುತ್ತಿದೆ ಅದರಲ್ಲಿ ಕೂಡ ಕೃಷಿ ಹಾಗೂ ಹೈನುಗಾರಿಕೆ(Dairy farming) ಚಟುವಟಿಕೆಗಳಂತೂ ಸರ್ಕಾರದ ಪ್ರೋತ್ಸಾಹ ನಿರಂತರ. ಅಂತೆಯೇ ಇದೀಗ ಕುರಿ ಕೋಳಿ ಮೇಕೆ ಫಾರ್ಮ್ ಮಾಡುವ ಯೋಚನೆಯಲ್ಲಿರುವ ರೈತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ.

ಹೌದು, ದೇಶದ ಬೆನ್ನೆಲುಬಾದ ರೈತರಿಗೆ ಸರ್ಕಾರಗಳು ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ನೀಡುತ್ತವೆ. ಅವರಿಗೆ ಅನುಕೂಲವಾಗುವಂತ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಈಗಂತೂ ಹೆಚ್ಚಿನವರು ಗ್ರಾಮೀಣ ವೃತ್ತಿಗಳಿಗೆ ಅಂದರೆ ಹೈನುಗಾರಿಗೆ ಹಾಗೂ ಕೃಷಿ ಕಾರುಯಗಳತ್ತ ವಾಲುತ್ತಿದ್ದಾರೆ. ಹೀಗಾಗಿ ಇವರಿಗೆಲ್ಲಾ ಪ್ರೋತ್ಸಾಹ ನೀಡಿ, ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಇದೀಗ ಉದ್ಯಮಶೀಲತೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಪ್ರತಿ ಪ್ರಾಣಿಯ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸರ್ಕಾರ ಅರ್ಹ ಫಲಾನುಭವಿಗಳಿಗೆ ಯೋಜನಾ ವೆಚ್ಚದ 50% (ಗರಿಷ್ಠ ₹25 ಲಕ್ಷ) ರಷ್ಟು ಸಹಾಯಧನ ನೀಡಲಾಗುತ್ತಿದೆ.

ಮುಖ್ಯ ಅಂಶಗಳು
ಕೋಳಿ ಫಾರ್ಮ್, ಹ್ಯಾಚರಿ, ಮದರ್ ಯೂನಿಟ್ ಸ್ಥಾಪನೆಗೆ 50% ಸಹಾಯಧನ
ಗರಿಷ್ಠ ಮಿತಿ ₹25 ಲಕ್ಷ
ವೈಯಕ್ತಿಕ ರೈತರು, SHG, FPO, ಸಹಕಾರಿ ಸಂಘಗಳು, ಉದ್ಯಮಿಗಳು – ಎಲ್ಲರು ಅರ್ಹ
1,000 ಪೋಷಕ ಲೇಯರ್‌ಗಳು / ವಾರಕ್ಕೆ 3,000 ಮೊಟ್ಟೆ ಮರಿ ಸಾಮರ್ಥ್ಯ / 2,000 ಮರಿಗಳ ಮದರ್ ಯೂನಿಟ್ ಅಗತ್ಯ
ಎರಡು ವರ್ಷಗಳವರೆಗೆ ರಾಜ್ಯ ಅನುಷ್ಠಾನ ಸಂಸ್ಥೆಯಿಂದ ತಾಂತ್ರಿಕ-ಪ್ರಶಿಕ್ಷಣ ಬೆಂಬಲ
ಅರ್ಜಿ ಸಲ್ಲಿಕೆ NLM ಪೋರ್ಟಲ್ ಮೂಲಕ: https://nlm.udyamimitra.in/

ಯೋಜನೆಯಡಿ ದೊರೆಯುವ ಆರ್ಥಿಕ ಪ್ರಯೋಜನಗಳು
ಯೋಜನಾ ವೆಚ್ಚದ 50% ರಷ್ಟು ಸಹಾಯಧನ (ಗರಿಷ್ಠ ₹25 ಲಕ್ಷ)
ಹೊಸ ಫಾರ್ಮ್ ಸ್ಥಾಪನೆ ಮತ್ತು ವಿಸ್ತರಣೆಗೆ ದೊಡ್ಡ ಮಟ್ಟದ ಬೆಂಬಲ
ಗ್ರಾಮೀಣದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಆರ್ಥಿಕ ಸುಧಾರಣೆ
ತಾಂತ್ರಿಕ ತರಬೇತಿ ಮತ್ತು ವೈಜ್ಞಾನಿಕ ಸಾಕಾಣಿಕೆ ಪದ್ಧತಿಗಳ ಮಾರ್ಗದರ್ಶನ
ಉತ್ಪನ್ನಗಳಿಗೆ ಸದೃಢ ಮಾರುಕಟ್ಟೆ ಸಂಪರ್ಕ

ಅರ್ಜಿದಾರರಿಗೆ ಅಗತ್ಯವಿರುವ ಮೂಲಭೂತ ಅವಶ್ಯಕತೆಗಳು
ಸ್ವಂತ ಅಥವಾ ಗುತ್ತಿಗೆ ಪಡೆದ ಭೂಮಿ
KYC ದಾಖಲೆಗಳು ಸಂಪೂರ್ಣ
ಬ್ಯಾಂಕ್ ಸಾಲ ಮಂಜೂರಾತಿ ಅಥವಾ ಸ್ವಯಂ ಹಣಕಾಸು ಸಾಕ್ಷ್ಯ
ಸಾಕಾಣಿಕೆ ಕ್ಷೇತ್ರದಲ್ಲಿ ಅನುಭವ ಅಥವಾ ತರಬೇತಿ ಪಡೆದ ಸಿಬ್ಬಂದಿ
ವಿವರವಾದ ಯೋಜನಾ ವರದಿ (DPR)

ಅರ್ಜಿಯ ಹಂತಗಳು:

  1. ಆನ್‌ಲೈನ್ ಅರ್ಜಿ: ರಾಷ್ಟ್ರೀಯ ಜಾನುವಾರು ಮಿಷನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ: https://nlm.udyamimitra.in/
  2. ದಾಖಲೆ ಪರಿಶೀಲನೆ: ರಾಜ್ಯ ಅನುಷ್ಠಾನ ಸಂಸ್ಥೆ ಅರ್ಜಿಯನ್ನು ಪರಿಶೀಲಿಸುತ್ತದೆ.
  3. ಬ್ಯಾಂಕ್/ಹಣಕಾಸು ಸಂಸ್ಥೆಗೆ ಶಿಫಾರಸು: ಅರ್ಹರಿಗೆ ಸಾಲ ಪಡೆಯಲು SIU ಶಿಫಾರಸು ಮಾಡುತ್ತದೆ.
  4. ಬ್ಯಾಂಕ್ ದ್ವಾರಾ ಸಾಲ ಮಂಜೂರಾತಿ:
    ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರ ಸಾಲ ಮಂಜೂರು.
  5. ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಅನುಮೋದನೆ
  6. ಕೇಂದ್ರ ಸರ್ಕಾರದಿಂದ ಸಬ್ಸಿಡಿ ಅನುಮೋದನೆ
  7. ಯೋಜನೆ ಆರಂಭ
  8. ಯೋಜನಾ ವೆಚ್ಚದ 25% ಖರ್ಚಿನ ನಂತರ ಸಬ್ಸಿಡಿ ಬಿಡುಗಡೆ

ಸಬ್ಸಿಡಿ ಮೊತ್ತವನ್ನು SIDBI ಮೂಲಕ ಸಾಲ ನೀಡುವ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ, ಅಲ್ಲಿಂದ ಫಲಾನುಭವಿಗೆ ಬಿಡುಗಡೆ ಮಾಡಲಾಗುತ್ತದೆ.