Home Business Cash Rules: ಇನ್ಮುಂದೆ ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಕೊಬೋದು ಗೊತ್ತಾ?! ಬಂದೇ ಬಿಡ್ತು ಹೊಸ ರೂಲ್ಸ್...

Cash Rules: ಇನ್ಮುಂದೆ ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಕೊಬೋದು ಗೊತ್ತಾ?! ಬಂದೇ ಬಿಡ್ತು ಹೊಸ ರೂಲ್ಸ್ !!

Hindu neighbor gifts plot of land

Hindu neighbour gifts land to Muslim journalist

Cash Rules: ದೇಶದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿದೆ. ಎಲ್ಲಾ ರಾಜಕೀಯ ವ್ಯಕ್ತಿಗಳು, ಹಣವಂತರು, ಸಿರಿವಂತರಾದಿಯಾಗಿ ಅನೇಕರು ತೆರಿಗೆಯನ್ನು ಪಾವತಿಸಿದೃ ಬೇಕಾಬಿಟ್ಟಿ ಹಣವನ್ನು ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಇತ್ತೀಚಿಗಷ್ಟೇ ಕಾಂಗ್ರೆಸ್ ಸಂಸದನ ಮನೆಯಲ್ಲಿ 350 ಕೋಟಿಗೂ ಹೆಚ್ಚು ಕ್ಯಾಶ್ ಪತ್ತೆಯಾಗಿದ್ದು ದೇಶದ ಜನರನ್ನು ದಂಗುಬಡಿಸಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಎಷ್ಟು ಕ್ಯಾಶ್ ಇರಬೇಕೆಂದು ಚರ್ಚೆಯಾಗುತ್ತಿದೆ.

ಹೌದು, ಹಣದ ವಿಚಾರದಲ್ಲಿ ತೆರಿಗೆ ಇಲಾಖೆಯು(Income Tax) ಸಾಕಷ್ಟು ನಿಯಮಗಳನ್ನು ತರುತ್ತದೆ. ಅಂತೆಯೇ ಒಂದು ಮನೆಯಲ್ಲಿ ಇಷ್ಟು ಕ್ಯಾಶ್ ಇರಬೇಕು ಅಂದರೆ ಹಣ ಇರಬೇಕೆಂದು ಇಲಾಖೆಯು ರೂಲ್ಸ್(Cash Rules) ಏನಾದರೂ ಮಾಡಿದೆಯೇ? ಅದಕ್ಕಿಂತಲೂ ಹೆಚ್ಚಿಗೆ ಇಟ್ಟುಕೊಂಡರೆ ಅಪಾಯ ಕಟ್ಟಿಟ್ಪ ಬುತ್ತಿಯೇ? ಅಂದರೆ ಕಾನೂನು ಕ್ರಮ ಜರುಗಿಸಲಾಗುವುದೇ?ಎಂಬ ವಿಚಾರ ಸದ್ಯ ಸಾಕಷ್ಟು ಚರ್ಚೆಯಾಗಿದೆ. ಹಾಗಿದ್ರೆ ನಾವು ನಮ್ಮ ಮನೆಗಳಲ್ಲಿ ತೆರಿಗೆ ಇಲಾಖೆಯ ಪ್ರಕಾರ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಗೊತ್ತಾ?! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹಣ ಇಟ್ಟುಕೊಳ್ಳಲು ಮಿತಿ ಇದೆಯಾ?
ಮನೆಯಲ್ಲಿ ಕ್ಯಾಷ್ ಇಟ್ಟುಕೊಳ್ಳಲು ಮಿತಿ ಇಲ್ಲ. ಇಷ್ಟೇ ಹಣ ಹೊಂದಬೇಕೆಂದು ನಿಯಮ ಇಲ್ಲ. ಆದರೆ, ನಿರ್ಬಂಧತೆ ಇದೆ. ಆ ಹಣಕ್ಕೆ ಸೂಕ್ತ ದಾಖಲೆ ನಿಮ್ಮ ಜೊತೆ ಇರಬೇಕು. ದಾಖಲೆ ಇಲ್ಲದ ಹಣವೇನಾದರೂ ಐಟಿ ಇಲಾಖೆಗೆ ಸಿಕ್ಕಿದಲ್ಲಿ ಶೇ. 137ರಷ್ಟು ದಂಡ ಕಟ್ಟಬೇಕಾಗುತ್ತದೆ ಹುಷಾರ್. ಉದಾಹರಣೆಗೆ ಒಂದು ಕೋಟಿ ರೂಪಾಯಿ ಇದ್ದರೆ ಅದಕ್ಕೆ ನೀವು 1.37 ಕೋಟಿ ಪಾವತಿಸಬೇಕು!! ಅಲ್ಲದೆ ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಪ್ಯಾನ್, ಆಧಾರ್ ದಾಖಲೆ ಒದಗಿಸಬೇಕು.

ನಗದು ಮತ್ತು ಹಣ ವರ್ಗಾವಣೆ ನಿಯಮಗಳು:
• ಯಾವುದೇ ಸಾಲ ಅಥವಾ ಠೇವಣಿಗಾಗಿ ಒಬ್ಬ ವ್ಯಕ್ತಿ 20,000 ರೂಗಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಸ್ವೀಕರಿಸುವಂತಿಲ್ಲ.
• ಒಬ್ಬ ವ್ಯಕ್ತಿಯ ಚಿರಾಸ್ತಿ ಮಾರಾಟದಲ್ಲೂ 20,000 ರೂಗಿಂತ ಹೆಚ್ಚಿನ ಮೊತ್ತದ ನಗದು ವರ್ಗಾವಣೆಗೆ ಅವಕಾಶ ಇರುವುದಿಲ್ಲ.
• ಒಂದು ವಹಿವಾಟಿನಲ್ಲಿ 50,000 ರೂಗಿಂತ ಹೆಚ್ಚಿನ ಮೊತ್ತದ ಠೇವಣಿ ಇಡಬೇಕಾದರೆ ಅಥವಾ ವಿತ್​ಡ್ರಾ ಮಾಡಬೇಕಾದರೆ ಪ್ಯಾನ್ ನಂಬರ್ ದಾಖಲಿಸುವುದು ಕಡ್ಡಾಯ.
• ಯಾವುದೇ ಹಣಕಾಸು ವರ್ಷದಲ್ಲಿ 20 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ನಗದು ವಹಿವಾಟು ಆದರೆ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ಒದಗಿಸಬೇಕು.
• ಆಸ್ತಿ ಮಾರಾಟದಲ್ಲಿ 30 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ನಗದು ಹಣವನ್ನು ಪಾವತಿಗೆ ಬಳಸಿದರೆ ತನಿಖೆ ಎದುರಿಸಬೇಕಾಗಬಹುದು.
• ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಟ್ ಮೂಲಕ ಒಂದು ವಹಿವಾಟಿನಲ್ಲಿ ಒಂದು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮಾಡುವಂತಿಲ್ಲ.
• ಕುಟುಂಬ ಸದಸ್ಯರು ಒಂದು ದಿನದಲ್ಲಿ 2 ಲಕ್ಷ ರೂಗಿಂತ ಹೆಚ್ಚಿನ ಮೊತ್ತವನ್ನು ವಿತ್​ಡ್ರಾ ಮಾಡಲು ನಿರ್ಬಂಧ ಇದೆ.