Home Business Bank Holiday: ಬ್ಯಾಂಕ್ ಗ್ರಾಹಕರೇ ಗಮನಿಸಿ, ಬ್ಯಾಂಕ್ ನಲ್ಲಿ ಏನೇ ಕೆಲಸಗಳಿದ್ದರೂ ಇಂದೇ ಮಾಡಿ ಮುಗಿಸಿ!...

Bank Holiday: ಬ್ಯಾಂಕ್ ಗ್ರಾಹಕರೇ ಗಮನಿಸಿ, ಬ್ಯಾಂಕ್ ನಲ್ಲಿ ಏನೇ ಕೆಲಸಗಳಿದ್ದರೂ ಇಂದೇ ಮಾಡಿ ಮುಗಿಸಿ! ನಾಳೆಯಿಂದ ಮೂರು ದಿನ ಬ್ಯಾಂಕ್ ಬಂದ್!

Bank Holiday

Hindu neighbor gifts plot of land

Hindu neighbour gifts land to Muslim journalist

Bank Holidays This Week: ಇಂದಿನ ಡಿಜಿಟಲ್( Digital) ಯುಗದಲ್ಲಿ ಮನೆಯಲ್ಲೇ ಕುಳಿತು ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಹೆಚ್ಚಿನ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಆದರೂ ಕೂಡ ಕೆಲವು ಕಾರಣಗಳಿಂದ ಬ್ಯಾಂಕಿಗೆ ಹೋಗಬೇಕಾಗುತ್ತದೆ. ಗ್ರಾಹಕರೇ ಗಮನಿಸಿ, ನೀವೇನಾದರೂ ಈ ವಾರ ಬ್ಯಾಂಕಿಗೆ ಹೋಗಬೇಕು ಅಂದುಕೊಂಡಿದ್ದರೆ ಈ ಮಾಹಿತಿ(Bank News)ತಿಳಿದಿರುವುದು ಅವಶ್ಯಕ.

ಈ ವಾರ ಬ್ಯಾಂಕಿಗೆ (Bank Holidays This Week)ಮೂರು ದಿನಗಳ ಕಾಲ ರಜೆಯಿದ್ದು, ಹೀಗಾಗಿ, ಏನೇ ಕೆಲಸಗಳಿದ್ದರು ಇಂದೇ ಮುಗಿಸಿಕೊಳ್ಳುವುದು ಉತ್ತಮ. ಇಲ್ಲವೇ ಮುಂದಿನ ವಾರದಲ್ಲಿ ಬ್ಯಾಂಕಿಗೆ ಹೋಗುವುದು ಉತ್ತಮ. ಒಂದೊಂದು ಪ್ರದೇಶದಲ್ಲಿ ಹಬ್ಬಗಳ ಆಚರಣೆ ವಿಭಿನ್ನ ನಡೆಸುವ ದಿನಗಳಲ್ಲಿ ವ್ಯತ್ಯಾಸವಿರುತ್ತದೆ. ಅಂದರೆ, ಕೆಲವೆಡೆ ಹಬ್ಬಗಳು(Festivals) ಒಂದು ದಿನ ಮುಂಚಿತವಾಗಿ ಇಲ್ಲವೇ ನಂತರ ನಡೆಯಬಹುದಾಗಿದೆ. ನಾಳೆಯಿಂದ ಬ್ಯಾಂಕ್‌ಗಳಿಗೆ(Bank Holidays This Week) ಮೂರು ದಿನ ರಜೆಯಿದ್ದರು ಕೂಡ, ಈ ಬ್ಯಾಂಕ್ ರಜಾದಿನಗಳು ಪ್ರಾದೇಶಿಕ ಆಧಾರದ ಮೇಲೆ ಬದಲಾಗುತ್ತವೆ ಎಂಬುದನ್ನು ಗಮನಿಸಬೇಕು. ಒಂದು ವೇಳೆ ರಜೆಯ ಬಗ್ಗೆ ತಿಳಿಯದೇ ಬ್ಯಾಂಕಿಗೆ ಹೋದ್ರೆ ನಿಮ್ಮ ಕಾಲಹರಣ ಆಗುವ ಜೊತೆಗೆ ಅಂದುಕೊಂಡ ಕಾರ್ಯವಾಗದೆ ಸುಮ್ಮನೆ ಮನೆಗೆ ಹಿಂದಿರುಗುವ ಹಾಗಾಗುತ್ತದೆ.

ಮುಂದಿನ ವಾರದಲ್ಲಿ ಭಾನುವಾರ ಮಾತ್ರ ರಜೆಯಿದ್ದು, ನಿಮ್ಮ ಬ್ಯಾಂಕ್ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಕೇವಲ ಈ ವಾರ ಮಾತ್ರ 3ದಿನಗಳ ಕಾಲ ಸತತವಾಗಿ ರಜೆ ಯಿರಲಿದೆ. ಹಾಗಾಗಿ ಬ್ಯಾಂಕು ವಹಿವಾಟುಗಳಿದ್ದರೆ ಆನ್ಲೈನ್ ಮೂಲಕ ಮಾಡಿಕೊಳ್ಳಬಹುದು ಅಥವಾ ಮುಂದಿನ ವಾರದಲ್ಲಿ ಮಾಡಿಕೊಳ್ಳಬಹುದು.

ಏಪ್ರಿಲ್ 21 ರಂದು ಈದ್ ಉಲ್ ಫಿತ್ರ್ ಹಬ್ಬದ ಲೆಕ್ಕದಲ್ಲಿ ಬ್ಯಾಂಕ್ ರಜೆ ಇರಲಿದೆ. ಅಗರ್ತಲಾ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆಯಿರಲಿದೆ.ಏಪ್ರಿಲ್ 22 ರಂದು ನಾಲ್ಕನೇ ಶನಿವಾರವಾಗಿದ್ದು, ಬ್ಯಾಂಕ್ ರಜೆಯಿರಲಿದೆ. ಇದರ ಜೊತೆಗೆ ದೇಶದ ಅನೇಕ ಭಾಗಗಳಲ್ಲಿ ಈ ದಿನದಂದು ರಂಜಾನ್ ಆಚರಿಸಲಾಗುತ್ತದೆ. ಆದರೆ ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಭುವನೇಶ್ವರ್, ಚಂಡೀಗಢ, ಗ್ಯಾಂಗ್ಟಾಕ್, ಕೊಚ್ಚಿ, ಶಿಮ್ಲಾ, ತಿರುವನಂತಪುರಂನಲ್ಲಿ ಯಾವುದೇ ಹಬ್ಬದ ಆಚರಣೆ ಇರುವುದಿಲ್ಲ ಎಂಬುದನ್ನು ಗಮನಿಸಬೇಕು.ಆ ಬಳಿಕ 23 ಭಾನುವಾರ ಎಂದಿನಂತೆ ವಾರದ ರಜಾ ದಿನವಾಗಿದ್ದು, ಹೀಗಾಗಿ ಒಟ್ಟು ಮೂರು ದಿನಗಳವರೆಗೆ ಬ್ಯಾಂಕ್ ಮುಚ್ಚಿರುತ್ತದೆ. ಅನಿವಾರ್ಯ ಎಂದಾದರೆ ಆನ್ಲೈನ್ ಮೂಲಕ ನಿಮ್ಮ ವಹಿವಾಟುಗಳನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Second Puc Results:ದ್ವಿತೀಯ ಪಿಯುಸಿ ಫಲಿತಾಂಶ ಎಪ್ರಿಲ್ 24,25 ರಂದು ಪ್ರಕಟವಾಗಲಿದೆಯೇ? ಇಲ್ಲಿದೆ ಉತ್ತರ!