Home ಅಂಕಣ Kitchen Tips: ಅಡುಗೆ ಮನೆಯಲ್ಲೇ ನಿಮ್ಮ ಅಭಿವೃದ್ಧಿ ಅಡಗಿದೆ! ಹೇಗೆಂದು ಇಲ್ಲಿ ತಿಳಿಯಿರಿ

Kitchen Tips: ಅಡುಗೆ ಮನೆಯಲ್ಲೇ ನಿಮ್ಮ ಅಭಿವೃದ್ಧಿ ಅಡಗಿದೆ! ಹೇಗೆಂದು ಇಲ್ಲಿ ತಿಳಿಯಿರಿ

Hindu neighbor gifts plot of land

Hindu neighbour gifts land to Muslim journalist

Kitchen tips:ಮನೆಯಲ್ಲಿ ದೇವರ ಮನೆ, ಮಲಗುವ ಮನೆ, ಇರುವಂತೆಯೇ ಅಡುಗೆ ಮನೆ ಬಗ್ಗೆಯೂ ಕೆಲವು ವಿಷಯಗಳನ್ನು ವಾಸ್ತು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಅಡುಗೆ (Kitchen tips) ಕೋಣೆಯಲ್ಲಿರುವ ಅದೃಷ್ಟ ವ್ಯಕ್ತಿಯ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

ಹೌದು, ಮನೆ ಸ್ವಚ್ಛವಾಗಿದ್ದರೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ ಎನ್ನುತ್ತಾರೆ ಹಿರಿಯರು. ಅದರಲ್ಲೂ ಅನ್ನಪೂರ್ಣ ಮಾತೆಯಂತೆಯೇ ಅಡುಗೆ ಮನೆಯಲ್ಲಿಯೂ ಲಕ್ಷ್ಮಿ ದೇವಿ ಇರುತ್ತಾಳೆ. ಸಾಮಾನ್ಯವಾಗಿ ಮಹಿಳೆಯರು ಅಡುಗೆ ಮನೆ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಅಡುಗೆಮನೆಯಲ್ಲಿ ಎಲ್ಲವೂ ವಾಸ್ತು ಪ್ರಕಾರವೇ ಇದ್ದರೆ ಹಲವು ಲಾಭಗಳಿವೆ.

ಮುಖ್ಯವಾಗಿ ಅಡುಗೆ ಮನೆಯನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬಾರದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ ಅನಾವಶ್ಯಕ ಖರ್ಚು ಮತ್ತು ಪತಿ-ಪತ್ನಿಯರ ನಡುವೆ ಜಗಳಕ್ಕೆ ಕಾರಣವಾಗಬಹುದು. ಇದರೊಂದಿಗೆ ಅಡುಗೆ ಮನೆ ದಕ್ಷಿಣ ಭಾಗದಲ್ಲಿದ್ದರೆ ಕುಟುಂಬದ ಯಜಮಾನನಿಗೆ ಕೀಲು, ಮೊಣಕಾಲು ನೋವು ಬರಬಹುದು ಎಂದು ಹೇಳಲಾಗುತ್ತದೆ.

ಇನ್ನು ಅಡುಗೆ ಮನೆ ದೇವರ ಗುಡಿಗೆ ಸಮಾನ. ಆದ್ದರಿಂದ ಅಡುಗೆ ಮನೆಯ ಮುಂದೆಯೇ ಶೌಚಾಲಯ ಮಾಡಲೇಬಾರದು. ಇದರಿಂದ ಕುಟುಂಬ ಸದಸ್ಯರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಇನ್ನು ಅಡುಗೆಮನೆಯಲ್ಲಿ ಚಪ್ಪಡಿ ಅಥವಾ ಕಪಾಟನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇನ್ನು ಮಸಾಲೆ ಪದಾರ್ಥಗಳನ್ನು ವಾಯುವ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂದು ಹೇಳಲಾಗುತ್ತದೆ.

ಮುಖ್ಯವಾಗಿ ಅಡುಗೆಮನೆಯಲ್ಲಿ ಅಲ್ಲಲ್ಲಿ ವಸ್ತುಗಳನ್ನು ಇಡುತ್ತಾರೆ. ಅದರ ಹೊರತಾಗಿ ಇವುಗಳನ್ನು ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕೆಂದು ಪಂಡಿತರು ಹೇಳುತ್ತಾರೆ. ಅಂದರೆ,ಮಿಕ್ಸರ್ ಅನ್ನು ಆಗ್ನೇಯ ವಲಯದಲ್ಲಿ ಇಡಬೇಕು ಮತ್ತು ಫ್ರಿಜ್ ಅನ್ನು ವಾಯುವ್ಯ ವಲಯದಲ್ಲಿ ಇಡಬೇಕು.