ಅಪರೂಪವಾದ ಎರಡು ತಲೆಯ ಎಮ್ಮೆಯ ಕರುವಿನ ಜನನ | ನಾಲ್ಕು ಕಣ್ಣುಗಳ ಈ ಪುಟ್ಟ ಕರುವನ್ನು ನೋಡಲು ಮುಗಿಬೀಳುತ್ತಿದೆ ಜನಸಾಗರ !
ಸಾಮಾನ್ಯವಾಗಿ ನಾವೆಲ್ಲ ಎಮ್ಮೆಯ ಕರುಗಳನ್ನು ಅಲ್ಲೋ ಇಲ್ಲೋ ನೋಡಿರುತ್ತೇವೆ. ಆದರೆ ಇಲ್ಲೊಂದು ಕಡೆ ವಿಚಿತ್ರವಾದ ಕರುವಿಗೆ ಎಮ್ಮೆಯೊಂದು ಜನ್ಮ ನೀಡಿದ್ದು, ಸ್ಥಳೀಯರು ಈ ದೃಶ್ಯ ನೋಡಿ ಬೆರಗಾಗುತ್ತಿದ್ದಾರೆ.
ಧೋಲ್ಪುರ್ ಜಿಲ್ಲೆಯ ಸಿಕ್ರೌಡ ಗ್ರಾಮದಲ್ಲಿ ಹಲವು
ವರ್ಷಗಳಿಂದ ಸಾಕುತ್ತಿದ್ದ ಎಮ್ಮೆಯು, ಎರಡು ತಲೆ ಮತ್ತು ನಾಲ್ಕು ಕಣ್ಣು ಇರುವ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅಲ್ಲದೇ ಎರಡು ಬಾಯಿಯನ್ನು ಹೊಂದಿದ್ದು, ಎರಡೂ ಬಾಯಿಯಿಂದಲೂ ಹಾಲು ಕುಡಿಯುತ್ತದೆ ಎಂಬ ಮಾಹಿತಿ ವರದಿಗಳಿಂದ ತಿಳಿದು
ಬಂದಿದೆ.
ಇದೀಗ ಈ ಕರುವಿಗೆ ಫುಲ್ ಡಿಮ್ಯಾಂಡ್ ಆಗಿದ್ದು, ನೆರೆ ಹೊರೆಯ ಎಲ್ಲಾ ಜನರು ಈ ಅಪರೂಪದ ಎಮ್ಮೆಯ ಕರುವನ್ನು ನೋಡಲು ಓಡೋಡಿ ಆಗಮಿಸುತ್ತಿದ್ದಾರೆ.
ಏತನ್ಮಧ್ಯೆ ಈ ವಿಚಿತ್ರ ಕರುವಿಗೆ ಹಾಲುಣಿಸುತ್ತಾ, ನೀರು
ಕೊಡುತ್ತಾ ಮನೆಯವರೆಲ್ಲ ಆರೈಕೆ ಮಾಡುತ್ತಿದ್ದಾರೆ. ಕರು
ಆರೋಗ್ಯವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕರುವಿನ ಜನನದ ವೇಳೆ ಎಮ್ಮೆ ಮತ್ತು ಕರುವಿಗೆ
ಯಾವುದೇ ಅಪಾಯವಾಗಿಲ್ಲ. ಸುಲಲಿತವಾಗಿ ಎಮ್ಮೆ
ಕರುವಿಗೆ ಜನ್ಮ ನೀಡಿದೆ. ಕರುವನ್ನು ಸಾಮಾನ್ಯ
ರೀತಿಯಲ್ಲಿಯೇ ನೋಡಿಕೊಳ್ಳಲಾಗುತ್ತಿದ್ದು,
ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಪಶು
ವೈದ್ಯರಾದ ಗುಡ್ಡೆ ಸಿಂಗ್ ತಿಳಿಸಿದ್ದಾರೆ.