ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತ | ಹೊಸೂರು ಶಾಸಕ ಪ್ರಕಾಶ್ ಅವರ ಮಗ-ಸೊಸೆ ಸೇರಿ 7 ಮಂದಿ ದುರ್ಮರಣ

Share the Article

ಬೆಂಗಳೂರಿನ ಕೋರಮಂಗಲದ, ಮಂಗಳ ಕಲ್ಯಾಣಮಂಟಪದ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತವಾಗಿದ್ದು, ಹೊಸೂರು ಶಾಸಕ ಪ್ರಕಾಶ್ ಅವರ ಮಗ-ಸೊಸೆ ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಡರಾತ್ರಿ 1:30ರ ವೇಳೆ ಡ್ರಿಂಕ್ಸ್ ಪಾರ್ಟಿ ಮುಗಿಸಿ ಆಡಿ ಕ್ಯೂ 3 ಕಾರಿನಲ್ಲಿ ವಾಪಸಾಗುತ್ತಿದ್ದಾಗ ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಆಡಿ ಕಾರು ಕಟ್ಟಡಕ್ಕೆ ಅಪ್ಪಳಿಸಿದ್ದು ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದವರು ಯಾರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎನ್ನಲಾಗಿದೆ.

ಶಾಸಕ ಪ್ರಕಾಶ್ ಅವರ ಪುತ್ರನೊಂದಿಗೆ

ಸಾವನ್ನಪ್ಪಿರುವವರನ್ನು ಕರುಣಾಸಾಗರ, ಬಿಂದು, ಇಶಿತಾ, ಡಾ.ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ. ಇನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರಿಗೆ ಮರಣೋತ್ತರ ಪರೀಕ್ಷೆ‌ ನಡೆಯುತ್ತಿದೆ ಎನ್ನಲಾಗಿದೆ.

Leave A Reply