Kiccha Sudeep : ನಾವು ಮಾತಿಗೆ ಬದ್ಧ, ನೀವು ಯುದ್ಧಕ್ಕೆ ಸಿದ್ಧವೇ? ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

Share the Article

Kiccha Sudeep : ಹುಬ್ಬಳ್ಳಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಮಾರ್ಕ್’ ಸಿನಿಮಾದ ಪ್ರಿಯ ರಿಲೀಸ್ ಕಾರ್ಯಕ್ರಮ ನಡೆದಿದ್ದು ಇದರಲ್ಲಿ ಕಿಚ್ಚ ಸುದೀಪ್ ಅವರು, ನಾವು ಮಾತಿಗೆ ಬದ್ಧ, ನೀವು ಯುದ್ಧಕ್ಕೆ ಸಿದ್ಧವೇ? ಎನ್ನುವುದರ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

ಹೌದು, ವೇದಿಕೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಮಾತನಾಡಿದ ಸುದೀಪ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. “2003ರ ನಂತರ ಇಲ್ಲಿಗೆ ಬಂದು ಕಾರ್ಯಕ್ರಮ ಮಾಡಲು ಇವತ್ತೇ ಅವಕಾಶ ಸಿಕ್ಕಿದ್ದು. ಹುಬ್ಬಳ್ಳಿಯ ಪ್ರೀತಿ ಮತ್ತು ಬೆಂಬಲ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಇಲ್ಲಿಂದ ಆಡುವ ಮಾತು ಇಡೀ ಕರ್ನಾಟಕಕ್ಕೆ ತಟ್ಟಲಿದೆ” ಎಂದು ಭಾವುಕರಾಗಿ ನುಡಿದರು.

ಬಳಿಕ ಮಾತು ಮುಂದುವರೆಸಿದ ಕಿಚ್ಚ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಸವಾಲು ಹಾಕಿದ್ದಾರೆ. “25ಕ್ಕೆ ಥಿಯೇಟರ್‌ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ. ಈ ವೇದಿಕೆ ಮೇಲೆ ಹೇಳ್ತೀನಿ. ಯುದ್ಧಕ್ಕೆ ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ನಿಮಗೋಸ್ಕರ ಬಾಯಿ ಎಲ್ಲವನ್ನು ಮುಚ್ಚಿಕೊಂಡಿದ್ದೆ. ಬಾಯಿ ಇಲ್ಲ ಅಂತಲ್ಲ. ಬಹಳಷ್ಟು ಕಲ್ಲಿನ ತೂರಾಟ ನನ್ನಿಂದ ನಿಮ್ಮ ಬೀಳುತ್ತೆ. ಇವತ್ತು ಹೇಳ್ತಿದ್ದೀನಿ, ತಡೆಯುವಷ್ಟು ತಡೆಯಿರಿ. ಮಾತನಾಡುವ ಸಮಯದಲ್ಲಿ ಮಾತಾಡಿ. ಡಿಸೆಂಬರ್ 25ಕ್ಕೆ ಪರದೆ ಮುಂದೆ ನೀವು ಕೂಗುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು” ಎಂದು ಸುದೀಪ್ ಹೇಳಿದ್ದಾರೆ.

ಇನ್ನು ಚಿತ್ರತಂಡದ ಸದಸ್ಯರು, ತಂತ್ರಜ್ಞರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ‘ಮಾರ್ಕ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

Comments are closed.