Karavara: ಜಿಪಿಎಸ್ ಟ್ರಾನ್ಸ್‌ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ ಸಾವು

Share the Article

Karavara: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮೂರು ದಿನಗಳ ಹಿಂದೆ ಹ್ಯೂಗ್ಲಿನ್ಸ್ ಸೀ ಗಲ್ ಅಸ್ವಸ್ಥ ಸ್ಥಿತಿಯಲ್ಲಿ ಉಪಗ್ರಹ ಟ್ಯಾಗಿಂಗ್ ಮತ್ತು ಜಿಪಿಎಸ್ ಟ್ರಾನ್ಸ್‌ಮೀಟರ್ ಸಹಿತ ಪತ್ತೆಯಾಗಿತ್ತು. ಆದರೆ ಇದೀಗ ಈ ಹಕ್ಕಿಅಸುನೀಗಿದೆ ಎಂದು ತಿಳಿದು ಬಂದಿದೆ.

ಹೌದು, ಮೈಮೇಲೆ ಎಲೆಕ್ಟ್ರಾನಿಕ್ ಉಪಕರಣ ಹೊತ್ತ ಕಡಲಹಕ್ಕಿ ಇಲ್ಲಿನ ಟ್ಯಾಗೋರ್ ಕಡಲತೀರದ ಬಳಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಆದರೆ, ಅದರ ಹಾರಾಟದ ಕಥನವನ್ನು ಪಕ್ಷಿ ಚಲನವಲನ ಸಂಶೋಧನೆಗೆ ಒಳಪಡಿಸಿದ ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಸೀ ಗಲ್‍ನ ಚಲನವಲನ ಸಂಶೋಧನೆಗೆ ಬಳಸಿತ್ತು. ಉಪಗ್ರಹ ಟ್ಯಾಗಿಂಗ್ ಮತ್ತು ಜಿಪಿಎಸ್ ಟ್ರಾನ್ಸ್‌ಮೀಟರ್ ಹೊತ್ತುಕೊಂಡೇ 9 ತಿಂಗಳಿನಿಂದ 12 ಸಾವಿರ ಕಿ.ಮೀ ದೂರದವರೆಗೆ ಹಾರಾಟ ನಡೆಸಿದ್ದ ಪಕ್ಷಿ ಇದು ಇಂದು ಸಂಸ್ಥೆ ತಿಳಿಸಿತ್ತು. ಬಳಿಕ ಇಲ್ಲಿನ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಸಪರ್ದಿಯಲ್ಲಿ ಚಿಕಿತ್ಸೆ ಪಡೆಯುವಾಗಲೇಅದು ಅಸುನೀಗಿದೆ.

ಅಂದಹಾಗೆ ಪಕ್ಷಿಯು ಹಾರಲಾಗದೆ ಒದ್ದಾಡುತ್ತಿದ್ದ ವೇಳೆ ಸಂರಕ್ಷಣೆಗೆ ಕರೆತರಲಾಯಿತು. ಪಶು ವೈದ್ಯರು ಚಿಕಿತ್ಸೆ ನೀಡಿದ್ದರು. ಶ್ರೀಲಂಕಾದ ವನ್ಯಜೀವಿ ಸಂರಕ್ಷಣೆ ಸಂಸ್ಥೆಯ ಒಪ್ಪಿಗೆ ಮೇರೆಗೆ ಅದಕ್ಕೆ ಅಳವಡಿಸಿದ್ದ ಉಪಕರಣ ತೆರವುಗೊಳಿಸಲಾಯಿತು. ಆದರೂ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅನ್ನನಾಳಕ್ಕೆ ಗಂಭೀರ ಗಾಯವಾಗಿದ್ದರಿಂದ ಪಕ್ಷಿಗೆ ಆಹಾರ ಸೇವಿಸಲು ಆಗುತ್ತಿರಲಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯರು ತಿಳಿಸಿದ್ದಾರೆ.

‘ಮಂಜು ಹೆಪ್ಪುಗಟ್ಟಿದ ಪ್ರದೇಶದಲ್ಲಿ ಜನಿಸಿದ ಹ್ಯೂಗ್ಲಿನ್ ಸೀ ಗಲ್ ಚಳಿಗಾಲದಲ್ಲಿ ಉಷ್ಣವಲಯದ ಶ್ರೀಲಂಕಾಕ್ಕೆ ವಲಸೆ ಬರುತ್ತದೆ. ಹೀಗೆ ಬಂದ ಪಕ್ಷಿಯನ್ನು ಸಂಶೋಧನೆಗೆ ಬಳಸಲು ಸೆರೆ ಹಿಡಿದು, ಮಾರ್ಚ್‌ನಲ್ಲಿ ಉಪಗ್ರಹ ಟ್ಯಾಗಿಂಗ್ ಪರಿಕರ ಅಳವಡಿಸಲಾಗಿತ್ತು. ಆ ಬಳಿಕ ಸೈಬೀರಿಯಾದತ್ತ ಪ್ರಯಾಣಿಸಿದ್ದ ಪಕ್ಷಿಯು ಆರ್ಕ್ಟಿಕ್‌ನ ಅಂಚಿನವೆರೆಗೆ ಸಾಗಿತು. ಅಲ್ಲಿಯೇ ಸಂತಾನೋತ್ಪತ್ತಿ ಚಟುವಟಿಕೆ ಬಳಿಕ ಪುನಃ ಶ್ರೀಲಂಕಾದತ್ತ ಪ್ರಯಾಣಿಸಿತ್ತು. ಹೀಗೆ ಸಾಗುವ ಮಾರ್ಗ ಮಧ್ಯೆ ಕಾರವಾರದ ಬಳಿ ಪಕ್ಷಿಯ ಹಾರಾಟ ಸ್ಥಗಿತಗೊಂಡಿತ್ತು’ ಎಂದು ಕೊಲಂಬೊ ವಿಶ್ವವಿದ್ಯಾಲಯದ ಸಂಶೋಧನಾ ವಿಜ್ಞಾನಿ ಸಂಪತ್ ಸೆನೆವಿರತ್ನೆ ಹೇಳಿದರು.

Comments are closed.