Puttur: ಬೆಂಗಳೂರಿಗೆ ಪುತ್ತೂರಿನಿಂದ ಹಗಲು ಬಸ್ ಸೇವೆ ಆರಂಭ!

Puttur: ಪುತ್ತೂರಿನಿಂದ ಬೆಂಗಳೂರಿಗೆ ಮತ್ತು ಪುತ್ತೂರು ಮೊಟ್ಟೆತ್ತಡ್ಕ- ಪಂಜಳ -ನರಿಮೊಗರು ಸಂಪರ್ಕಕ್ಕೆ ಹೊಸ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ರೈ ಬುಧವಾರ ಚಾಲನೆ ನೀಡಿದರು.

ಬೆಂಗಳೂರಿಗೆ ಪುತ್ತೂರಿನಿಂದ ಬೆಳಿಗ್ಗೆ 8 ಗಂಟೆಗೆ ಈ ಅಶ್ವಮೇಧ ಬಸ್ ಹೊರಡಲಿದೆ. ಬೆಳಿಗ್ಗೆ ಪುತ್ತೂರಿನಿಂದ ಬೆಂಗಳೂರಿಗೆ ಬಸ್ ಸಂಚಾರ ಇರಲಿಲ್ಲ. ಈ ಬಗ್ಗೆ ಸಾರ್ವಜನಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಸೂಚನೆಯಂತೆ ಇಲಾಖೆಯಿಂದ ಹೊಸ ಬಸ್ ಮಂಜೂರಾಗಿದೆ.
ಅದೇ ರೀತಿ ಪುತ್ತೂರಿನಿಂದ ಮೊಟ್ಟೆತ್ತಡ್ಕ ಮಾರ್ಗವಾಗಿ- ಪಂಜಳದಿಂದ ಪುರುಷರಕಟ್ಟೆಯಾಗಿ ಪುತ್ತೂರಿಗೆ ಸಂಪರ್ಕ ಮಾಡುವ ಹೊಸ ರೂಟನ್ನು ಶಾಸಕರು ಚಾಲನೆ ಮಾಡಿದರು.ಬಸ್ಸು ಚಾಲನೆ ನೀಡಿ ಮಾತನಾಡಿದ ಶಾಸಕರು “ಪುತ್ತೂರಿನಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ಬಸ್ ಬಿಡಬೇಕು ಎಂಬ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದರು.
Comments are closed.