Katrif Kaif: ಕತ್ರಿನಾ ಕೈಫ್, ವಿಕ್ಕಿ ಕೌಶಾಲ್ ಗೆ ಗಂಡು ಮಗು ಜನನ

Katrina Kaif: ಬಾಲಿವುಡ್‌ನ ಖ್ಯಾತ ಜೋಡಿ, ದಂಪತಿ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮನೆಗೆ ಮಗುವಿನ ಆಗಮನವಾಗಿದೆ. 2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋ ಹಾಕಿತ್ತು. ಇದೀಗ ಸ್ಟಾರ್ ದಂಪತಿ ಗಂಡು ಮಗುವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದೆ.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿಯನ್ನು ಇಂದು (ನ.7) ಹಂಚಿಕೊಂಡಿದ್ದಾರೆ.
ಮಗುವಿಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರ ಮೊರೆ ಹೋಗಿದ್ದ ಬಾಲಿವುಡ್‌ನ ಈ ತಾರಾ ಜೋಡಿ ಇದೀಗ ಮುದ್ದಾದ ಗಂಡು ಮಗುವನ್ನು ಸ್ವಾಗತ ಮಾಡಿದ್ದಾರೆ.
Comments are closed.