Subrahmanya: ಕಡಬದ ಸಂತೆಕಟ್ಟೆ ಮೀನು ಮಾರಾಟಕಟ್ಟೆಯಲ್ಲಿ ವ್ಯಾಪಾರಿಗಳ ಹೊಡೆದಾಟ

Share the Article

 

Subrahmanya: ಕಡಬ ಗ್ರಾಮದ ಸಂತೆಕಟ್ಟೆ ಬಳಿ ಮೀನು ಮಾರಾಟಕಟ್ಟೆಯಲ್ಲಿ ನ 01ರಂದು ಬೆಳಿಗ್ಗೆ, ಮೀನು ಮಾರಾಟದ ವಿಚಾರದಲ್ಲಿ ಎರಡು ಅಂಗಡಿಯವರಿಗೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ

ಈ ಬಗ್ಗೆ ಪೊಲೀಸರು ವಿಡಿಯೋವನ್ನು ಪರಿಶೀಲಿಸಿದಾಗ, ಮೀನು ಮಾರಾಟದ ವಿಚಾರಕ್ಕೆ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿದ್ದಾರೆ.

ಮೀನು ಮಾರುಕಟ್ಟೆಯ ವ್ಯಾಪಾರಿಗಳಾದ ರಾಜು ಮ್ಯಾಥ್ಯೂ, ಆದಂ,ಫಯಾಜ್ ,ರಕ್ಷೀತ್ ಮಾಣಿ, ನೌಫಾಲ್ ಎಂಬುವರುಗಳು ಪರಸ್ಪರ ಹೊಡೆದಾಟ ಮಾಡಿಕೊಂಡಿರುವುದು ತಿಳಿದುಬಂದಿದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾದ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿಭಂಗ ಉಂಟಾಗುವಂತೆ ಮಾಡಿದ ವ್ಯಕ್ತಿಗಳ ಮೇಲೆ ಕಡಬ ಪೊಲೀಸ್‌‌ ಠಾಣೆಯಲ್ಲಿ ಅ.ಕ್ರ: 73/2025. ಕಲಂ: 194 (2) BNS-2023 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Comments are closed.