Yogurt: ಮೊಸರು ಸಿಕ್ಕಾಪಟ್ಟೆ ಹುಳಿ ಇದ್ರೆ ಈ ಒಂದು ವಸ್ತು ಬೆರೆಸಿದ್ರೆ ಸಾಕು

Yogurt: ಮೊಸರು (Yogurt) ಅಂದ್ರೆ ಬಹುತೇಕರಿಗೆ ಇಷ್ಟ ವಾದ ಪದಾರ್ಥ. ಪ್ರೊಬಯೋಟಿಕ್ಸ್ ಮೊಸರು ಆರೋಗ್ಯಕ್ಕೆ (health) ಬಹಳ ಒಳ್ಳೆಯದು. ಹಾಗಂತ ಮೊಸರು ಅಗತ್ಯಕ್ಕಿಂತ ಹೆಚ್ಚು ಹುಳಿಯಾಗಿದ್ರೆ ತಿನ್ನೋಕೆ ಇಷ್ಟ ಆಗೋದಿಲ್ಲ. ಅಂತಹ ಸಂದರ್ಭದಲ್ಲಿ ಕೆಲವರು ಮೊಸರನ್ನು ಚೆಲ್ಲಿರಬಹುದು. ಆದರೆ ಈ ಒಂದು ವಿಧಾನದಿಂದ ಮೊಸರಿನಿಂದ ಅತಿಯಾದ ಹುಳಿಯನ್ನು ತೆಗೆದು ಹಾಕಬಹುದು.


ಹೌದು, ಮೊಸರಿನ ಹುಳಿ ನಿವಾರಿಸೋದಕ್ಕೆ ಸಿಂಪಲ್ ಟಿಪ್ಸ್
ಇಲ್ಲಿದೆ. ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ಜೇನುತುಪ್ಪ ಅಥವಾ ಸಕ್ಕರೆ
ಮೊಸರು ಅತಿಯಾಗಿ ಹುಳಿಯಾಗಿದ್ದರೆ, ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ, ಇದು ಹುಳಿಯನ್ನು ತೆಗೆದು ಬಾಯಿಗೆ ರುಚಿ ನೀಡುತ್ತೆ.
ಬೇವು ಮತ್ತು ತುಳಸಿ
ನೀವು ಮೊಸರಿನೊಂದಿಗೆ ಬೇವು ಮತ್ತು ತುಳಸಿ ಎಲೆಗಳನ್ನು ಸೇರಿಸುವುದರಿಂದ ಬ್ಯಾಕ್ಟೀರಿಯಾವನ್ನು ನಿಯಂತ್ರಿಸಿ ಹುಳಿ ಕಡಿಮೆಯಾಗುತ್ತದೆ.
ಉಪ್ಪು ಮತ್ತು ಅಡುಗೆ ಸೋಡಾ
ಮೊಸರಿಗೆ ಸ್ವಲ್ಪ ಉಪ್ಪು ಸೇರಿಸುವುದರಿಂದ ಅದರ ಹುಳಿ ಕಡಿಮೆಯಾಗುತ್ತದೆ. ಅಥವಾ ಮೊಸರಿಗೆ ಚಿಟಿಕೆ ಅಡುಗೆ ಸೋಡಾ ಸೇರಿಸುವುದರಿಂದ ಮೊಸರು ಹಾಳಾಗುವುದಿಲ್ಲ.
ಫ್ರಿಜ್ ಬಳಸಿ
ಮುಖ್ಯವಾಗಿ ನೀವು ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇರಿಸಿ. ಸಾಧ್ಯ ಆದಷ್ಟು ಮೊಸರನ್ನು ಫ್ರಿಜ್ ನಲ್ಲಿಡಿ.
Comments are closed.