Kantara -1: ʼಕಾಂತಾರ ಚಾಪ್ಟರ್ 1′ ರನ್ ಟೈಮ್ ರಿವೀಲ್ !!ಕಾಂತಾರಕ್ಕಿಂತ ಇದು ಹಿರಿದು

Kantara-1: ರಿಷಬ್ ಶೆಟ್ಟಿಯ ಕಾಂತಾರಾ ಚಾಪ್ಟರ್ 1 ಸಿನಿಮಾಗಾಗಿ ದೇಶವೇ ಕಾಯುತ್ತಿದೆ. ಇದರ ನಡುವೆ ಕನ್ನಡ ಸಿನಿಮಾ ಇದೀಗ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಬಿಡುಗಡೆಯಾಗುತ್ತಿರುವ ಮಾಹಿತಿ ಹೊರಬಿದ್ದಿದೆ. ಕಾಂತಾರಾ 1 ಸಿನಿಮಾ 30ಕ್ಕೂ ಹೆಚ್ಚು ದೇಶ 7 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹೀಗಿರುವಾಗಲೇ ಸಿನಿಮಾದ ರನ್ ಟೈಮ್ ರಿವೀಲ್ ಆಗಿದೆ. ‘ಕಾಂತಾರ’ಕ್ಕಿಂತಲೂ ಇದರ ಅವಧಿ ತುಸು ದೀರ್ಘವಾಗಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ:Aloe vera Gel: ಅಲೋವೆರಾ ಜೆಲ್ ಹಣೆಗೆ ಹಚ್ಚಿದ್ರೆ ಒತ್ತಡದ ತಲೆನೋವು ಮಾಯವಾಗುತ್ತೆ
‘ಕಾಂತಾರ’ ಚಿತ್ರದ ಅವಧಿ 2 ಗಂಟೆ 28 ನಿಮಿಷ ಇದ್ದರೆ, ಚಾಪ್ಟರ್ 1 175 ನಿಮಿಷ ಅಂದರೆ 2 ಗಂಟೆ 55 ನಿಮಿಷ ಇರಲಿದೆ ಎಂದು ವರದಿಯೊಂದು ತಿಳಿಸಿದೆ. ಇನ್ನೊಂದು ಮೂಲಗಳ ಪ್ರಕಾರ 2 ಗಂಟೆ 45 ನಿಮಷ ರನ್ ಟೈಮ್ ಇದು ಹೊಂದಿದೆ. ಒಟ್ಟಿನಲ್ಲಿ ಸುಮಾರು 3 ಗಂಟೆ ಇರಲಿದೆಯಂತೆ.
Comments are closed.