Home News Kantara : ‘ಕಾಂತಾರ ಚಾಪ್ಟರ್ 1’ ಹೀರೋಯಿನ್ ಹೆಸರು ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್

Kantara : ‘ಕಾಂತಾರ ಚಾಪ್ಟರ್ 1’ ಹೀರೋಯಿನ್ ಹೆಸರು ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್

Hindu neighbor gifts plot of land

Hindu neighbour gifts land to Muslim journalist

Kantara: ಕನ್ನಡಿಗರ ಹಾಗೂ ಭಾರತ ದೇಶವೇ ಬಹಳ ಆತರತೆಯಿಂದ ಕಾದು ಕುಳಿತಿರುವ ಬಹು ನಿರೀಕ್ಷಿತ ಸಿನಿಮಾ ಕಾಂತರಾ ಚಾಪ್ಟರ್ 1. ಇದರ ಹೀರೋ ಇನ್ ಯಾರು ಎಂಬುದು ಕುತೂಹಲವಾಗಿತ್ತು. ಆದರೀಗ ಹೀರೋಯಿನ್ ಹೆಸರನ್ನು ಇದೀಗ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲಮ್ಸ್ ರಿವೀಲ್ ಮಾಡಿದೆ.

ಹೌದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ‘ಕನಕವತಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಈ ಶುಭದಿನದಂದು, ಚಿತ್ರತಂಡವು ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ.

‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 2, 2025 ರಂದು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

https://www.instagram.com/p/DLysRmFzEI5/?img_index=2&igsh=aDZhbXNwbmZ3b3U2

ಇದನ್ನೂ ಓದಿ: Crime: ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ!