Udupi: ಉಡುಪಿ: ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದಾಗ ವ್ಯಕ್ತಿ ಕುಳಿತಲ್ಲೇ ಸಾವು!

Share the Article

Udupi: ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದಾಗ ಬೆಡ್ ಮೇಲೆ ಕುಳಿತಲ್ಲಿಂದಲೇ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪರ್ಕಳದ (Udupi) ಗ್ಯಾಡ್ಸನ್ ಎಂಬಲ್ಲಿ ನಡೆದಿದೆ. ಗುರುಪ್ರಸಾದ್ (49)ಮೃತ ದುರ್ದೈವಿಯಾಗಿದ್ದಾರೆ.

ಇವರು ರಾತ್ರಿ ಊಟ ಮಾಡಿ ಮಲಗಲು ಕೋಣೆಗೆ ಹೋಗಿದ್ದರು. ಬೆಡ್ ಮೇಲೆ ಕುಳಿತು ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದಂತೆ ಕುಳಿತಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.