Fake Milk : ಒಂದು ಲೀಟರ್ ಕೆಮಿಕಲ್ನಿಂದ ಬರೋಬ್ಬರಿ 500 ಲೀಟರ್ ಹಾಲು!! 20 ವರ್ಷಗಳಿಂದಲೂ ನಡೆಯುತ್ತಿದೆ ಈ ದಂಧೆ, ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ
fake Milk: ನಾವು ತಿನ್ನುವ ಪದಾರ್ಥ, ತರಕಾರಿ, ಹಣ್ಣು-ಹಂಪಲು ಕುಡಿಯುವ ಪಾನೀಯಗಳು ಎಲ್ಲವೂ ಇಂದು ವಿಷಮಯವಾಗಿಯೇ ಇರುವುದು ಹೊಸ ವಿಷಯವೇನಲ್ಲ. ಆದರೆ ಹಾಲು ಇದುವರೆಗೂ ಅಶುದ್ಧವಾಗಿಲ್ಲ, ಅದನ್ನು ಎಂದಿಗೂ ಯಾರೂ ರಾಸಾಯನಿಕವಾಗಿ ಮಿಶ್ರಣ ಮಾಡಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಈಗ ವೈರಲ್ ಆದ ವಿಡಿಯೋ ಒಂದು ನೋಡಿದರೆ ನಿಜಕ್ಕೂ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಕೇವಲ ಒಂದು ಲೀಟರ್ ಕೆಮಿಕಲ್ ನಿಂದ ಬರೋಬ್ಬರಿ 500 ಲೀಟರ್(Fake milk)ಹಾಲನ್ನು ತಯಾರಿಸುವಂತಹ ಬೆಚ್ಚುಗೊಳಿಸುವ ವಿಡಿಯೋ ಇದಾಗಿದೆ.
A businessman in Uttar Pradesh’s Bulandshahr has been held after he created 500 litres of fake milk using one litre of chemicals. Accused of selling such products for 20 years pic.twitter.com/erJo7eACV6
— Indian Tech & Infra (@IndianTechGuide) December 10, 2024
ದೇಹದ ಸದೃಢತೆಗೆ ದಿನನಿತ್ಯವೂ ಒಂದು ಲೋಟ ಹಾಲನ್ನು ಕುಡಿಯಿರಿ, ಮಕ್ಕಳಿಗೂ ಹಾಲನ್ನು ಕುಡಿಸಿ ಎನ್ನುವ ಮಾತನ್ನು ತಲೆತರಾಂತರಗಳಿಂದಲೂ ಕೇಳುತ್ತಲೇ ಬಂದಿದ್ದೇವೆ. ಆದರೆ ಇಂದು ಸಿಗುತ್ತಿರುವ ಬಹುತೇಕ ಹಾಲುಗಳನ್ನು ಕುಡಿದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೆ ಭಯಾನಕ ಸಮಸ್ಯೆಗಳು ಉಂಟಾಗುವುದಾಗಿ ಇದಾಗಲೇ ಹಲವಾರು ವರದಿಗಳು ಹೇಳುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ ಈ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಉದ್ಯಮಿಯೊಬ್ಬ ಒಂದು ಲೀಟರ್ ರಾಸಾಯನಿಕರಿಂದ 500 ಲೀಟರ್ ಹಾಲನ್ನು ತಯಾರಿಸುತ್ತಿದ್ದಾನೆ. ಕಳೆದ 20 ವರ್ಷಗಳಿಂದ ಇದೇ ವಿಷವನ್ನು ಅವನು ಸರಬರಾಜು ಮಾಡುತ್ತಿರುವುದಾಗಿ ಇದೀಗ ಬಯಲುಗೊಂಡಿದೆ.
FSSAI ಅಧಿಕಾರಿಗಳ ಪ್ರಕಾರ ಹಾಲು, ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದ ಉದ್ಯಮಿ ಅಗರ್ವಾಲ್, ನಿಜವಾದ ಹಾಲಿನಂತೆ ಕಾಣುವಂತೆ ರಾಸಾಯನಿಕ ಬಳಸಿ ಕೃತಕ, ಸಿಹಿ ಕಾರಕ ಸುವಾಸನೆ ಬೆರೆಸುತ್ತಿದ್ದನಂತೆ. ಈ ನಕಲಿ ಹಾಲು 20 ವರ್ಷಗಳಿಂದ ತಯಾರಿಸಿ ಮಾರಾಟ ಮಾಡುತ್ತಿದ್ದನಂತೆ. ನಿಜವಾದ ಹಾಲಿನ ರುಚಿ ಬರುವಂತೆ ರಾಸಾಯನಿಕ ಬಳಸಲಾಗುತ್ತಿದ್ದನಂತೆ. ಅಗರ್ವಾಲ್ಗೆ ಸೇರಿದ ಅಂಗಡಿ ಮತ್ತು 4 ಗೋಡೌನ್ಗಳ ಮೇಲೆ ದಾಳಿ ನಡೆಸಿ ನಕಲಿ ಹಾಲು ತಯಾರಿಸಲು ಬಳಸುತ್ತಿದ್ದ ರಾಸಾಯನಿಕ ವಶಪಡಿಸಿಕೊಂಡಿದ್ದಾರೆ. ಈ ಕೃತಕ ಹಾಲು ನಿಜವಾದ ಹಾಲಿಗಿಂತಲೂ ಏನೂ ಕಡಿಮೆ ಇಲ್ಲ ಅಂತಾರೆ ಅಧಿಕಾರಿಗಳು. ಹಾಲಿನ ಬಣ್ಣ, ರುಚಿ, ಸುವಾಸನೆ ನಿಜವಾದ ಹಾಲನ್ನೂ ಮೀರಿಸುವಂತಿದೆ ಅಂತೆ!!
ಸದ್ಯ ಈ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಈತನ ಈ ವಿಷಪೂರಿತ ದ್ರವ್ಯ ಕುಡಿದವರ ಗತಿಯೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
situs bokep, bokep indo nonton