Kazakhstan Plane Crash: 110 ಪ್ರಯಾಣಿಕರಿದ್ದ ವಿಮಾನ ಕಜಕಿಸ್ತಾನದಲ್ಲಿ ಪತನ

Kazakhstan Plane Crash: ಕ್ರಿಸ್‌ಮಸ್ ದಿನದಂದು ವಿಮಾನವೊಂದು ಪತನಗೊಂಡ ಸುದ್ದಿ ಬುಧವಾರ (ಡಿಸೆಂಬರ್ 25) ಕಝಾಕಿಸ್ತಾನದ ಅಕ್ಟೌ ನಗರದ ಬಳಿ ಬೆಳಕಿಗೆ ಬಂದಿದೆ. ವಿಮಾನದಲ್ಲಿದ್ದ ಕೆಲವರು ಬದುಕುಳಿದಿದ್ದಾರೆ ಎಂದು ಆರಂಭಿಕ ವರದಿಗಳು ಸೂಚಿಸಿವೆ ಎಂದು ಕೇಂದ್ರ ಏಷ್ಯಾದ ದೇಶದ ತುರ್ತು ಸಚಿವಾಲಯ ತಿಳಿಸಿದೆ.

ಅಪಘಾತ ಸಂಭವಿಸಿದ ತಕ್ಷಣ ತುರ್ತು ಸೇವೆಗಳು ಸ್ಥಳಕ್ಕೆ ತಲುಪಿದ್ದು, ವಿಮಾನದಲ್ಲಿ ಬೆಂಕಿ ನಂದಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಈ ವಿಮಾನವನ್ನು ಅಜೆರ್ಬೈಜಾನ್ ಏರ್ಲೈನ್ಸ್ ನಿರ್ವಹಿಸುತ್ತಿದೆ. ಇದು ರಷ್ಯಾದ ಚೆಚೆನ್ಯಾದ ಬಾಕುದಿಂದ ಗ್ರೋಜ್ನಿಗೆ ಹಾರುತ್ತಿತ್ತು, ಆದರೆ ಗ್ರೋಜ್ನಿಯಲ್ಲಿ ಮಂಜಿನಿಂದಾಗಿ ಅದರ ಮಾರ್ಗವನ್ನು ಬದಲಾಯಿಸಲಾಯಿತು.

ಕಝಾಕಿಸ್ತಾನದ ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿಮಾನದಲ್ಲಿ 105 ಪ್ರಯಾಣಿಕರು ಮತ್ತು 5 ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದೆ.

ಕಝಾಕಿಸ್ತಾನ್‌ನ ಸ್ಥಳೀಯ ಸುದ್ದಿ ವೆಬ್‌ಸೈಟ್ Kazinform ಪ್ರಕಾರ, ಅಪಘಾತದಲ್ಲಿ 25 ಜನರು ಬದುಕುಳಿದಿದ್ದು, ಅವರಲ್ಲಿ 22 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದ ಬಗ್ಗೆ ಅಜರ್‌ಬೈಜಾನ್ ಏರ್‌ಲೈನ್ಸ್‌ನಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಅಪಘಾತವು ವಿಮಾನ ಸುರಕ್ಷತೆಗೆ ಮತ್ತೊಂದು ಸವಾಲಿನ ಘಟನೆಯಾಗಿದೆ.

ಹೆಚ್ಚಿನ ಮಾಹಿತಿ ಬಂದ ನಂತರ ಪರಿಸ್ಥಿತಿ ತಿಳಿಯಲಿದೆ. ಅಪಘಾತವಾದ ತಕ್ಷಣ ತುರ್ತು ಸೇವೆಗಳು ಸ್ಥಳಕ್ಕೆ ತಲುಪಿದೆ ಎಂದು ಹೇಳಿದೆ. ವಿಮಾನದಲ್ಲಿನ ಬೆಂಕಿಯನ್ನು ನಂದಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಅಪಘಾತಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave A Reply

Your email address will not be published.