Sharukh Khan: ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ ಅಂತೆ ಶಾರುಖ್ ಖಾನ್ ಕೂಡ ಕರ್ನಾಟಕದವರು !! ಮಂಗಳೂರಿನ ಅಜ್ಜಿ ದತ್ತು ಪಡೆದ ಅಚ್ಚರಿ ಗುಟ್ಟನ್ನು ರಟ್ಟು ಮಾಡಿದ ನಟ

Sharukh Khan: ಕರ್ನಾಟಕ ಹಾಗೂ ಬಾಲಿವುಡ್ ಗೆ ಏನೋ ಒಂದು ವಿಶೇಷವಾದ ನಂಟು. ಬಾಲಿವುಡ್ ನಲ್ಲಿ ಮಿಂಚಿ ಮೆರೆಯುತ್ತಿರುವ ಶಿಲ್ಪ ಶೆಟ್ಟಿ, ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಆದಿಯಾಗಿ ಇನ್ನು ಅನೇಕರು ನಮ್ಮ ಕರ್ನಾಟಕದವರು. ಅದರಲ್ಲೂ ಕೂಡ ಕರಾವಳಿ ಭಾಗದವರು ಎಂಬುದು ಇನ್ನೂ ಹೆಮ್ಮೆ. ಸದ್ಯ ಟಾಲಿವುಡ್‌ನಲ್ಲಿ ರೂಲ್ ಮಾಡುತ್ತಿರುವ ಅನುಷ್ಕಾ ಶೆಟ್ಟಿ, ಕೃತಿ ಶೆಟ್ಟಿ, ಬಾಲಿವುಡ್‌ ಆಳಿದ ಚೆಲುವೆಯರಾದ ದೀಪಿಕಾ ಪಡುಕೋಣೆ ಹಾಗೂ ಐಶ್ವರ್ಯ ರೈ ಇವರೆಲ್ಲರೂ ಸಹ ಮೂಲ ಮಂಗಳೂರಿಗರೇ. ಹೀಗೆ ವಿವಿಧ ಚಿತ್ರರಂಗಗಳ ಜತೆ ನಂಟನ್ನು ಹೊಂದಿರುವ ಮಂಗಳೂರಿಗೂ ಬಾಲಿವುಡ್ ಕಿಂಗ್ ಎಂದೇ ಖ್ಯಾತಿಯನ್ನು ಹೊಂದಿರುವ ಶಾರುಖ್ ಖಾನ್‌(Sharukh Khan)ಕೂಡ ಮಂಗಳೂರಿನ ಮಗ. ಈ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಆದರೆ ಇದನ್ನು ಸ್ವತಹ ಶಾರುಖಾನ್ ಅವರೇ ಬಹಿರಂಗಪಡಿಸಿದ್ದಾರೆ.

 

ಹೌದು, ನಟ ಶಾರುಖ್ ಖಾನ್‌ ತಮ್ಮ ಬಾಲ್ಯದ ಐದು ವರ್ಷಗಳನ್ನು ಮಂಗಳೂರಿನಲ್ಲಿ ಕಳೆದಿದ್ದರು. ಈ ವಿಷಯವನ್ನು ಸ್ವತಃ ಶಾರುಖ್ ಅವರೇ ಕರ್ನಾಟಕಕ್ಕೆ ವಿವಿಧ ಕಾರ್ಯಕ್ರಮಗಳ ಸಲುವಾಗಿ ಆಗಮಿಸಿದ್ದ ಸಂದರ್ಭದಲ್ಲಿ ತಿಳಿಸಿದ್ದರು. ಹೀಗೆ ಮಂಗಳೂರಿನ ಸಂಬಂಧದ ಕುರಿತು ನಟ ಹೇಳಿರುವ ಹಳೆಯ ವಿಡಿಯೋ ತುಣುಕು ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋದಲ್ಲಿ ಶಾರುಖ್ ಖಾನ್ ಅವರು’ ನನಗೂ ಕರ್ನಾಟಕಕ್ಕೂ ನಂಟಿದೆ. ನಾನು ಮಂಗಳೂರಿನಲ್ಲಿಯೇ ಬೆಳೆದವ. ಮಂಗಳೂರಿನಲ್ಲಿದ್ದ ನನ್ನ ಅಜ್ಜಿ ನನ್ನ ದತ್ತು ಪಡೆದುಕೊಂಡಿದ್ದರು. ಅವರಿಗೆ ಗಂಡುಮಕ್ಕಳು ಇರಲಿಲ್ಲ. ಈ ಕಾರಣದಿಂದ ಅವರು ತಮ್ಮ ಮಗಳ ಮಗನಾದ ನನ್ನನ್ನು ದತ್ತು ಪಡೆದಿದ್ದರು. ನನ್ನ ಹೆಸರನ್ನು ಅಬ್ದುಲ್‌ ರೆಹಮಾನ್‌ ಎಂದು ಇಟ್ಟಿದ್ದರು’ ಎಂದು ವಿಷಯವನ್ನು ಈ ವಿಡಿಯೋದಲ್ಲಿ ನಟ ಹೇಳಿದ್ದಾರೆ.
ಬಾಲ್ಯದ ಐದು ವರ್ಷ ಮಂಗಳೂರಿನಲ್ಲಿಯೇ ಕಳೆದೆ. ಅಲ್ಲಿಯವರೆಗೂ ಇವನು ನನ್ನದೇ ಮಗ ಎಂದು ಅಜ್ಜಿ ಹೇಳುತ್ತಿದ್ದರು. ಆದ್ದರಿಂದ ನನ್ನ ಬಾಲ್ಯದ ಫೋಟೋ ಎಲ್ಲವೂ ಮಂಗಳೂರಿನಲ್ಲಿಯೇ ತೆಗೆದಿದ್ದಾಗಿವೆ ಎಂದಿದ್ದಾರೆ.

ಅಷ್ಟಕ್ಕೂ ಶಾರುಖ್‌ ಅವರ ಅಜ್ಜಿ ಮಂಗಳೂರಿನಲ್ಲಿ ಇರುವುದರ ಹಿಂದೆಯೂ ವಿಶೇಷ ಕಾರಣವಿದೆ. ಅದೇನೆಂದರೆ ಶಾರುಖ್ ಅವರ ಅಜ್ಜ ಅಂದ್ರೆ ತಾಯಿಯ ತಂದೆ ಇಫ್ತಿಖರ್ ಅಹ್ಮದ್ ಅವರು 1960ರಲ್ಲಿ ಮಂಗಳೂರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಆದ್ದರಿಂದ ಅವರು ಅಲ್ಲಿಯೇ ವಾಸವಾಗಿದ್ದರು. ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಇದರ ನಡುವೆಯೇ ಅಂದರೆ, 1965ರ ನವೆಂಬರ್ 2ರಂದು ಶಾರುಖ್‌ ಅವರ ಜನನವಾಗಿತ್ತು. ಅವರು ಹುಟ್ಟಿದ್ದು ದೆಹಲಿಯಲ್ಲಿ. ಆ ಸಮಯದಲ್ಲಿ, ಶಾರುಖ್‌ ತಾಯಿ ಮಗುವನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆಗಲೇ ಅಜ್ಜಿ ದತ್ತು ಪಡೆದುಕೊಂಡಿದ್ದರು. ಇದರಿಂದ ಐದು ವರ್ಷ ಶಾರುಖ್ ಖಾನ್ ಮಂಗಳೂರಿನಲ್ಲಿಯೇ ನೆಲೆಸಿದ್ದರು. ಅಲ್ಲದೆ ನನ್ನ ಅಜ್ಜ ಮಂಗಳೂರು ಪೋರ್ಟ್‌ನ ಎಂಜಿನಿಯರ್ ಆಗಿದ್ದರಿಂದ ಬಾಲ್ಯ ಮಂಗಳೂರಿನಲ್ಲಿ ಕಳೆದೆ. ಆಗಲೇ ಬೆಂಗಳೂರಿಗೂ ಹೋಗಿದ್ದೆ. ಬೆಂಗಳೂರಿನ ನಂದಿದುರ್ಗ ರೋಡ್, ಜಯಮಹಲ್ ಬಡಾವಣೆ ಹಾಗೂ ಪ್ಯಾಲೇಸ್ ರೋಡ್‌ಗೆ ಭೇಟಿ ನೀಡಿದ್ದೆ. ಅವು ಸದಾ ನೆನಪಿನಲ್ಲಿರುವಂತ ಸ್ಥಳಗಳು ಎಂದು ಹೇಳಿದ್ದರು.

ಇನ್ನು ಬಾಲ್ಯದ ಐದು ವರ್ಷವನ್ನು ಮಂಗಳೂರಿನಲ್ಲಿ ಕಳೆದಿದ್ದರೂ ಸಹ ಶಾರುಖ್ ಖಾನ್‌ಗೆ ಕನ್ನಡ ಬರಲ್ವ ಎಂದು ಹಲವರು ನಟ ಟ್ವೀಟ್ ಮಾಡಿದ್ದಾಗ ಪ್ರಶ್ನಿಸಿದ್ದರು. ಆದರೆ ಶಾರುಖ್ ಈ ಯಾವ ಟ್ವೀಟ್‌ಗೂ ಉತ್ತರಿಸಿರಲಿಲ್ಲ. ಆದರೆ ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದಾಗ ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ್ದ ಶಾರುಖ್ ಖಾನ್ ನಂಗೆ ಕನ್ನಡ ಬರಲ್ಲ ಏಕೆಂದರೆ ಬಾಲ್ಯ ಕಳೆದ ಕೂಡಲೇ ನನ್ನನ್ನು ದೆಹಲಿಗೆ ಕರೆದುಕೊಂಡು ಹೋದರು ಹೀಗಾಗಿ ಕನ್ನಡ ಕಲಿಯಲಾಗಲಿಲ್ಲ, ನನ್ನ ತಾಯಿ ಚೆನ್ನಾಗಿ ಕನ್ನಡ ಮಾತಾಡ್ತಾರೆ ಎಂದು ತಿಳಿಸಿದ್ದರು.

Leave A Reply

Your email address will not be published.