Hubballi: ಮಹಿಳೆಯರ ಒಳ ಉಡುಪು ಕದಿಯುವ ಸೈಕೋ ಬಂಧನ!
Hubballi: ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ (Hubballi) ನೇಕಾರ ನಗರದಲ್ಲಿ ಹಲವು ಮನೆಗಳ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆಯಾಗುತ್ತಿದ್ದವು. ಅಲ್ಲದೇ ಕೆಲವು ಮನೆಗಳಲ್ಲಿ ಹಣ ಕೂಡಾ ಕಳ್ಳತನ ಆಗುತ್ತಿತ್ತು. ಹೀಗಾಗಿ ಕೆಲವರು ತಮ್ಮ ತಮ್ಮ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿಡಿದ್ದರು.
ಇದೀಗ ರಾತ್ರಿ ವೇಳೆ ಮನೆಯ ಆವರಣಕ್ಕೆ ನುಗ್ಗಿ ಒಣಗಿಸಿದ್ದ ಮಹಿಳೆಯರ ಒಳ ಉಡುಪನ್ನು ಕಳ್ಳತನ ಮಾಡುತ್ತಿದ್ದ ಸೈಕೋ ಒಬ್ಬನನ್ನು ಸಿಸಿ ಕ್ಯಾಮೆರಾ ಮೂಲಕ ಸ್ಥಳೀಯರು ಹಿಡಿದು ಪೊಲೀಸರಿಗೆ (Police) ಒಪ್ಪಿಸಿದ ಘಟನೆ ಹುಬ್ಬಳ್ಳಿಯ (Hubballi) ನೇಕಾರ ನಗರಲ್ಲಿ ನಡೆದಿದೆ.
ಎಂದಿನಂತೆ ಗುರುವಾರ ಮಧ್ಯರಾತ್ರಿ ಸೈಕೋ ಕಳ್ಳ ಮನೆಯೊಂದರ ಮುಂದಿನ ಗೇಟ್ ಹಾರಿ ಬಂದು, ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದ. ಈ ವೇಳೆ ಸಿಸಿ ಕ್ಯಾಮೆರಾದಲ್ಲಿ ಈ ದ್ರಶ್ಯವನ್ನು ಕಂಡ ಮನೆಯವರು ಏರಿಯಾ ನಿವಾಸಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಿಯರೆಲ್ಲ ಸೇರಿ ಕಳ್ಳನನ್ನು ಹಿಡಿದು ಥಳಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
selamat datang di bandar togel terbaik, toto togel resmi dan terpercaya