Marriage: ಗೊಂಬೆಯೊಂದಿಗೆ ಮಹಿಳೆ ಮದುವೆ, ಮದುವೆ ಬಳಿಕ ಹುಟ್ಟಿತು ಮಗು !! ಅರೆ.. ಏನಿದು ವಿಚಿತ್ರ?
Marriage: ನಿಮಗೊಂದು ಆಶ್ಚರ್ಯ ಸಂಗತಿ ಇಲ್ಲಿದೆ. ಇದನ್ನು ಕೇಳಿದರೆ ಪಕ್ಕಾ ಆಶ್ಚರ್ಯವಾಗುತ್ತದೆ. ವಾಸ್ತವವಾಗಿ, ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ಬ್ರೆಜಿಲಿಯನ್ ಮಹಿಳೆಯೊಬ್ಬರು ಬಹಳ ವಿಶಿಷ್ಟವಾದ ಮದುವೆ ಆಗಿದ್ದಾರೆ.
ಆದ್ರೆ ತಾನು ಆಡುವ ಗೊಂಬೆಯನ್ನು ಪ್ರೀತಿಸಿ ಗೊಂಬೆಯನ್ನು ಮದುವೆಯಾದ (Marriage) ನಂತರ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಬ್ರೆಜಿಲ್ ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಯ ಹೇಳಿಕೆಯ ಪ್ರಕಾರ, ಮೇ 21, 2020ರಂದು ತನ್ನ ಗೊಂಬೆ ಪತಿಯಿಂದ ಮಗುವಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬ್ರೆಜಿಲಿಯನ್ ಮಹಿಳೆಯ ಹೆಸರು ಮಾರಿವಾನ್ ರೋಚಾ ಮೊರೇಸ್. ತಾನು ಮಾರ್ಸೆಲೋ ಎಂಬ ಗೊಂಬೆಯನ್ನು ಪ್ರೀತಿಸುತ್ತಿದ್ದೆ ಮತ್ತು ಅವನಿಂದ ಮಾರ್ಸೆಲಿನ್ಹೋ ಎಂಬ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅಚ್ಚರಿಯ ವಿಷಯವೆಂದರೆ ಮಹಿಳೆ ತನ್ನ ಮನೆಯಲ್ಲಿಯೇ ವೈದ್ಯರು ಮತ್ತು ನರ್ಸ್ ಗಳ ಸಮ್ಮುಖದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಲೈವ್-ಸ್ಟ್ರೀಮ್ ಕೂಡ ಆಗಿತ್ತು.
ಮೊದಲ ನೋಟದಲ್ಲೇ ತಾನು ಮಾರ್ಸೆಲೊಳನ್ನು ಪ್ರೀತಿಸುತ್ತಿದ್ದೆ ಎಂದು ಮೆರಿವನ್ ಹೇಳಿಕೊಂಡಿದ್ದಾಳೆ. ಮಾರ್ಸೆಲೊ ಅವರ ಬಳಿಗೆ ಬಂದ ದಿನದಿಂದ ತಾನು ಲವ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಗೊಂಬೆ ಬಂದ ಬಳಿಕ ತನ್ನ ಜೀವನ ಬದಲಾಯಿತು. ಮಾರ್ಸೆಲೊವನ್ನು ತುಂಬಾ ಆಳವಾಗಿ ಪ್ರೀತಿಸುತ್ತಿದ್ದೆ, ಅವರಿಬ್ಬರೂ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.
ಮದುವೆಗೆ 250ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡುವಾಗ, ಮೆರಿವಾನ್ ಮಾರ್ಸೆಲೊ ಅವರೊಂದಿಗಿನ ತನ್ನ ವೈವಾಹಿಕ ಜೀವನವು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಮಾರ್ಸೆಲೊ ಅವರೊಂದಿಗೆ ಜಗಳವಾಡುವುದಿಲ್ಲ ಅಥವಾ ವಾದ ಮಾಡುವುದಿಲ್ಲ. ಅವನು ಅವರನ್ನು ಸರಳವಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಿಷ್ಠಾವಂತ ಪತಿಯಾಗಿದ್ದಾನೆ. ಪ್ರತಿ ಮಹಿಳೆ ಮಾರ್ಸೆಲೊ ಅವರಂತಹ ಗಂಡನ ಬಗ್ಗೆ ಅಸೂಯೆಪಡುತ್ತಾರೆ ಎಂದು ಹೇಳಿಕೊಂಡಿದ್ದಳು.