Asaduddin Owaisi: ಮುಖೇಶ್ ಅಂಬಾನಿ ಮನೆ ಆಂಟೀಲಿಯಾ ವಕ್ಫ್‌ಗೆ ಸೇರಿದ್ದು-ಓವೈಸಿ
Asaduddin Owaisi: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ಮೂಲದ ನಿವಾಸ ಆಂಟಿಲಿಯಾವನ್ನು ವಕ್ಫ್ ಮಂಡಳಿಗೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ (ನವೆಂಬರ್ 2) ರಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ, ಅಂಬಾನಿ ನಿವಾಸವು ವಕ್ಫ್ ಆಸ್ತಿ ಎಂಬ ಪ್ರಶ್ನೆಗೆ ಹೌದು, ನೀವು ಹೆಸರಿಸಿದ ವ್ಯಕ್ತಿಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿಲ್ಲವೇ? ಎಂದು ಮರುಪ್ರಶ್ನೆ ಹಾಕಿದರು.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಒವೈಸಿ ವಕ್ಫ್ ತಿದ್ದುಪಡಿ ಕಾಯಿದೆ, 2024 ರ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ, ಅದು ಅಸ್ತಿತ್ವದಲ್ಲಿರುವ 1995 ರ ವಕ್ಫ್ ಕಾಯಿದೆಯನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ ಎಂದು ಮರುನಾಮಕರಣ ಮಾಡಲು ಪ್ರಯತ್ನಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಗುರಿಯಾಗಿಸಿ, “ಸುಧಾರಣೆಗಳ ಹೆಸರಿನಲ್ಲಿ ನೀವು ವಕ್ಫ್ ಬೋರ್ಡ್‌ಗಳನ್ನು ಮುಗಿಸಲು ಸಾಧ್ಯವಿಲ್ಲ ನರೇಂದ್ರ ಮೋದಿ. ಸುಧಾರಣಾ ಮಸೂದೆಯಲ್ಲಿ ನಿಬಂಧನೆ ಇದೆ, ಅದರ ಪ್ರಕಾರ ನೀವು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಬಹುದು. ನೀವು ವಕ್ಫ್ ಅಲ್ಲದ ಆಸ್ತಿ ಎಂದು ಪರಿಗಣಿಸುವುದರ ವಿರುದ್ಧ ಜಿಲ್ಲಾಧಿಕಾರಿ ಅವರು ತನಿಖೆಗೆ ಆದೇಶಿಸುತ್ತಾರೆ ಮತ್ತು ವಕ್ಫ್ ಭೂಮಿಯನ್ನು ಮಂಡಳಿಯಿಂದ ತೆಗೆದುಕೊಳ್ಳಲಾಗುವುದು.
‘ವಕ್ಫ್ ಆಸ್ತಿ ಹೆಸರಿನಲ್ಲಿ ಮುಸ್ಲಿಂ ಸಮುದಾಯದವರು ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿದ್ದಾರೆ’ ಎಂಬ ಆರೋಪಕ್ಕೆ,
“ಹಾಗೇನೂ ಇಲ್ಲ, ನಾನು ನಿಮಗೆ ಹೇಳುತ್ತೇನೆ. ನಾನು ಸಂಸತ್ತಿನಲ್ಲಿ ನಮಾಜ್ ಮಾಡಿದರೆ, ಆ ಕಟ್ಟಡ ನನಗೆ ಸೇರುತ್ತದೆಯೇ? ಇಲ್ಲ, ನಾನು ನಿರ್ದಿಷ್ಟ ಜಮೀನಿನ ಮಾಲೀಕನಾಗಿದ್ದರೆ, ಆಗ ಮಾತ್ರ ನನಗೆ ಸಾಧ್ಯವಾಗುತ್ತದೆ. ಅದನ್ನು ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿ, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪ್ರಚಾರ ಮಾತ್ರ ಎಂದು ಹೇಳಿದರು.