Actor Darshan: ಈ ಎರಡು ಕಾರಣಕ್ಕಾಗಿ ಮಗನನ್ನು ನೋಡಲು ವಿಜಯಲಕ್ಷ್ಮಿ ಮನೆಗೆ ಮೀನಾ ತೂಗುದೀಪ ಆಗಮನ!

Share the Article

Actor Darshan: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೂನ್ 11ರಂದು ಆರೋಪಿ ದರ್ಶನ್‌ಗೆ ನ್ಯಾಯಾಂಗ ಬಂಧನವಾಗಿತ್ತು. ಇದೀಗ ಅ.30ರಂದು ದರ್ಶನ್‌ಗೆ (Darshan) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ರಿಲೀಸ್ ಆಗಿದ್ದಾರೆ.

ಆದ್ರೆ ಇದೀಗ 5 ತಿಂಗಳ ಜೈಲುವಾಸದ ಬಳಿಕ ಮನೆಗೆ ಬಂದಿರುವ ಮಗನನ್ನು ನೋಡಲು ಮೀನಾ ತೂಗುದೀಪ (Meena Thoogudeepa) ಆಗಮಿಸಿದ್ದಾರೆ. ಆದ್ರೆ ಮೀನಾ ಬರಲು ಇನ್ನೆರಡು ಕಾರಣವಿದೆಯಂತೆ.

ಹೌದು, ವಿಜಯಲಕ್ಷ್ಮಿ (Vijayalakshmi) ನೆಲೆಸಿರುವ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಮೊಮ್ಮಗ ಚಂದನ್ ಜೊತೆ ಮಗನನ್ನು ನೋಡಲು ಆಗಮಿಸಿದ್ದಾರೆ. ಅದಲ್ಲದೆ ಮೀನಾ ತೂಗುದೀಪ ಅವರು ಕುಟುಂಬದ ಜೊತೆಗೆ ದೀಪಾವಳಿ ಹಬ್ಬ ಆಚರಿಸಲು ಮತ್ತು ಮೊಮ್ಮಗ ವಿನೀಶ್ ಹುಟ್ಟುಹಬ್ಬವನ್ನು ಆಚರಿಸಲು ಬಂದಿದ್ದರು ಎನ್ನಲಾಗಿದೆ.

Leave A Reply

Your email address will not be published.