PM Modi: ಅಮ್ಮನ ಕಳೆದುಕೊಂಡ ನೋವಲ್ಲಿರೋ ಕಿಚ್ಚನಿಗೆ ಪ್ರಧಾನಿ ಮೋದಿಯಿಂದ ಬಂತು ಪತ್ರ !! ಏನಿದೆ ಅದರಲ್ಲಿ?

PM Modi: ಕನ್ನಡದ ನಟ ಕಿಚ್ಚ ಸುದೀಪ್​ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದರು. ಇದೀಗ ತಾಯಿ ಕಳೆದುಕೊಂಡು ನೋವಲ್ಲಿರೋ ಕಿಚ್ಚ ಸುದೀಪ್​ ಅವರಿಗೆ ದೇಶದ ಪ್ರಧಾನಿ ಮೋದಿ(PM Modi) ಅವರು ಪತ್ರ ಬರೆದಿದ್ದಾರೆ. ಇದನ್ನು ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು, ನಟ ಕಿಚ್ಚ ಸುದೀಪ್​(Kiccha Sudeep) ಅವರ ತಾಯಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಕಿಚ್ಚ ಸುದೀಪ್​ ಅವರ ತಾಯಿ ನಿಧನದ ಸುದ್ದಿ ಕೇಳಿ ಮರುಗಿದರು. ಹೀಗಾಗಿ ಕಿಚ್ಚ ಸುದೀಪ್​ ಅವರಿಗೆ ಅಕ್ಟೋಬರ್ 23ರಂದು ಪ್ರಧಾನಿ ಕಚೇರಿಯಿಂದ ಸಂತಾಪ ಪತ್ರವನ್ನು ಕಳುಹಿಸಿ ಕೊಡಲಾಗಿದೆ. ಈ ಪತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡಿರುವ ಕಿಚ್ಚ, “ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ” ಎಂದು ಬರೆದುಕೊಂಡಿದ್ದಾರೆ.

ಮೋದಿ ಬರೆದ ಪತ್ರದಲ್ಲಿ ಏನಿದೆ?
ಪ್ರಧಾನಿ ನರೇಂದ್ರ ಮೋದಿಯವರ ಪತ್ರದಲ್ಲಿ, “ಶ್ರೀ ಸುದೀಪ್ ಸಂಜೀವ್ ಅವರೇ, ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ನನಗೆ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ. “ಮಾತುಲಕಿ ಮಾರ್ದವಂ ಸಾಮ್ಯಶೂನ್ಯಮ್” ಎಂದು ಹೇಳಿದಂತೆ, ತಾಯಿಯ ಹೃದಯದ ಮೃದುತ್ವಕ್ಕೆ ಈ ಜಗತ್ತಿನಲ್ಲಿ ಬೇರೆ ಸಾಟಿಯಿಲ್ಲ. ನಿಮ್ಮ ಭಾವನಾತ್ಮಕ ವೇದನೆ ತಾಯಿ ಜೊತೆಗಿರುವ ಬಂಧವನ್ನು ಪ್ರತಿಬಿಂಬಿಸುತ್ತದೆ. ಅವರು ನಿಮ್ಮ ನೆನಪುಗಳಲ್ಲಿ ಬದುಕುತ್ತಾರೆ ಮತ್ತು ಅವರಿಂದ ತುಂಬಿದ ಮೌಲ್ಯಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಎಂಬ ನನಗೆ ನಂಬಿಕೆ ಇದೆ” ಎಂದು ಬರೆದುಕೊಂಡಿದ್ದಾರೆ.

“ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟಕರವಾದ ಹಂತ ಎಂದು ನಾನು ಬಲ್ಲೆ. ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇದೆ. ಈ ನಷ್ಟ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯಪಾಲಿಸಲಿ ಓಂ ಶಾಂತಿ” ಎಂದು ಪತ್ರದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ

ಇದನ್ನು ಶೇರ್ ಮಾಡಿರುವ ಸುದೀಪ್ ಅವರು ‘ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ಪ್ರಧಾನಿ ನರೇಂದ್ರ ಮೋದಿ ಜಿ… ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ’ ಅಂತ ಬರೆದುಕೊಂಡಿದ್ದಾರೆ.

Leave A Reply

Your email address will not be published.