Home Latest Sports News Karnataka Anthony Ammirati: ಒಲಂಪಿಕ್ಸ್ ನಲ್ಲಿ ಅನರ್ಹಗೊಂಡ ಸ್ಪರ್ಧಿಗೆ ಪೋರ್ನ್ ಸೈಟ್’ನಿಂದ ಬಂತು ಬಂಪರ್ ಆಫರ್ !!...

Anthony Ammirati: ಒಲಂಪಿಕ್ಸ್ ನಲ್ಲಿ ಅನರ್ಹಗೊಂಡ ಸ್ಪರ್ಧಿಗೆ ಪೋರ್ನ್ ಸೈಟ್’ನಿಂದ ಬಂತು ಬಂಪರ್ ಆಫರ್ !! ಏನದು, ಇದ್ದಕ್ಕಿದ್ದಂತೆ ‘ಅಂಥಾ‌’ ಆಫರ್ ನೀಡಿದ್ಯಾಕೆ ?

Anthony Ammirati

Hindu neighbor gifts plot of land

Hindu neighbour gifts land to Muslim journalist

Anthony Ammirati: 2024ರ ಪ್ಯಾರಿಸ್ ಒಲಿಂಪಿಕ್ಸ್(Olympic) ನಲ್ಲಿ ಅನರ್ಹಗೊಂಡಿರುವ ಫ್ರಾನ್ಸ್ ಅಥ್ಲೀಟ್ ಅಂಥೋನಿ ಅಮ್ಮಿರತಿ ಪೋರ್ನ್(Porn) ವೆಬ್‌ಸೈಟ್ 2.09 ಕೋಟಿ ರೂಪಾಯಿ ಬಿಗ್ ಆಫರ್ ನೀಡಿದೆ ಎಂದು ವರದಿಯಾಗಿದೆ. ಕಂಪೆನಿ ನೀಡಿದ ಆಫರ್ ಏನು? ಇದ್ದಕ್ಕಿದ್ದಂತೆ ಅಂಥಾ ಆಫರ್ ನೀಡಿದ್ಯಾಕೆ ಎಂದು ಗೊತ್ತಾದ್ರೆ ಶಾಕ್ ಆಗ್ತೀರಾ.

ಅಂಥೋನಿ ಅಮ್ಮಿರತಿ(Anthony Ammirati) ಪೋಲ್‌ವಾಲ್ಟ್(Pole Vaulter) ಅಥ್ಲೀಟ್‌ ಆಗಿದ್ದು, ಕ್ವಾಲಿಫೈರ್‌ ಆಟದಲ್ಲಿ ಅನರ್ಹಗೊಂಡಿದ್ದಾರೆ. ಫ್ರಾನ್ಸ್ ಮೂಲದ 21 ವರ್ಷದ ಅಂಥೋನಿ ಅಮ್ಮಿರತಿ ಮಂಗಳವಾರ ಪೋಲ್‌ವಾಲ್ಟ್ ಮೊದಲೆರಡು ಜಿಗಿತಗಳನ್ನು ಕ್ರಮವಾಗಿ 5.40 ಮೀಟರ್ ಮತ್ತು 5.60 ಮೀಟರ್ ಎತ್ತರದಲ್ಲಿ ಜಿಗಿದಿದ್ದರು. ಮೂರನೇ ಪ್ರಯತ್ನದಲ್ಲಿ 5.70 ಮೀಟರ್ ಜಿಗಿದಿದ್ದರು. ಆದ್ರೆ ಈ ವೇಳೆ ಅಂಥೋನಿ ಅಮ್ಮಿರತಿ ಗುಪ್ತಾಂಗ ಪೋಲ್‌ಬಾರ್‌ಗೆ ತಾಗಿದ್ದರಿಂದ ಪದಕ ಗೆಲ್ಲುವ ಆಸೆಗೆ ಕಮರಿತ್ತು. ಅವರು ಅನರ್ಹಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೋರ್ನ್ ವೆಬ್‌ಸೈಟ್‌ನಿಂದ ಕೋಟಿ ಕೋಟಿಯ ಆಫರ್ ಬಂದಿದೆ ಎಂದು ಟಿಎಂಝಡ್‌ ಸ್ಪೋರ್ಟ್ಸ್ ವರದಿ ಮಾಡಿದೆ.

ಹೌದು, ಅಮ್ಮಿರತಿ ಅವರ ಅನರ್ಹತೆಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಮ್‌ಸೊಡಾ ಜಾಲತಾಣದ ಉಪಾಧ್ಯಕ್ಷ ಡರೈನ್ ಪಾರ್ಕರ್, ಈಗಾಗಲೇ ಎಲ್ಲರೂ ನಿಮ್ಮ ಸೊಂಟದ ಕೆಳಗಿನ ಪ್ರದರ್ಶನವನ್ನು ನೋಡಿದ್ದಾರೆ. ನಾನು ನಿಮಗೆ ಸೊಂಟದ ಕೆಳಗಿನ ಪ್ರದರ್ಶನಕ್ಕೆ ಪ್ರಶಸ್ತಿ ನೀಡುವೆ. ನೀವು ಕ್ರಾಸ್ ಬಾರ್ ಇಲ್ಲದೇ 60 ನಿಮಿಷ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿದರೆ ಲೈಂಗಿಕ ಚಟುವಟಿಕೆಯ ಪ್ರೇಮಿಯಾಗಿ 2.5 ಲಕ್ಷ ಡಾಲರ್ (ಅಂದಾಜು 2.09 ಕೋಟಿ ರೂ) ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೆ ನೀವು ಕಾಮ್‌ಸೊಡಾನಲ್ಲಿ ಸರಳವಾಗಿ ಚಿನ್ನ ಗೆಲ್ಲಬಹುದು. ನೀವು ಈ ಚಿನ್ನಕ್ಕಾಗಿ ಶಾರ್ಟ್ಸ್ ಸಹ ಧರಿಸಬೇಕಾಗಿಲ್ಲ. ನಿಮ್ಮಲ್ಲಿರುವ ಎಲ್ಲವನ್ನೂ ನಮಗೆ ತೋರಿಸಿದ್ರೆ ಸಾಕು. ಕ್ಯಾಮೆರಾ ಮುಂದೆ ನಿಮ್ಮ ಪುರುಷತ್ವವನ್ನು ಪ್ರದರ್ಶನ ಮಾಡಬೇಕು ಎಂದು ಕಾಮ್‌ಸೊಡಾ ಜಾಲತಾಣದ ಉಪಾಧ್ಯಕ್ಷ ಡರೈನ್ ಪಾರ್ಕರ್ ಹೇಳಿದ್ದಾರೆ. ಈ ಘಟನೆ ಬಳಿಕ ಅಂಥೋನಿ ಅಮ್ಮಿರತಿಗೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಥೋನಿ ಅಮ್ಮಿರತಿ, ಅನರ್ಹಗೊಂಡಿದ್ದಿರಂದ ತುಂಬಾ ನಿರಾಶೆಯಾಗಿದೆ. ನಾನು ದೈಹಿಕವಾಗಿ ಫಿಟ್ ಆಗಿದ್ದು, ಮುಂದಿನ ಪಂದ್ಯಗಳಿಗೆ ತಯಾರಿ ನಡೆಸುತ್ತೇನೆ. ಈ ರೀತಿಯಾಗಿ ಅನರ್ಹಗೊಂಡಿದ್ದು ನನಗೆ ವಿಚಿತ್ರ ಅನ್ನಿಸುತ್ತಿದೆ. ಮೊದಲೆರಡು ಪ್ರಯತ್ನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದು, ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.